Homeಕರ್ನಾಟಕಪ್ರಶ್ನೆಗೆ, ಸತ್ಯಕ್ಕೆ ಹೆದರಿದ ಭ್ರಷ್ಟ: ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ

ಪ್ರಶ್ನೆಗೆ, ಸತ್ಯಕ್ಕೆ ಹೆದರಿದ ಭ್ರಷ್ಟ: ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ

- Advertisement -
- Advertisement -

ಕೇಂದ್ರ ಸರ್ಕಾರ ಹಾಗೂ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುವ ಖ್ಯಾತ ಬಹುಭಾಷಾ ನಟ ಕಿಶೋರ್ ಕುಮಾರ್ ಅವರು ಇದೀಗ ನ್ಯೂಸ್‌ಕ್ಲಿಕ್ ವೆಬ್ಸೈಟ್ ಮೇಲೆ ದೆಹಲಿ ಪೊಲೀಸರು ನಡೆಸಿದ ದಾಳಿಯ ಕುರಿತು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕಿಶೋರ್, ”ಪ್ರಶ್ನೆಗೆ, ಸತ್ಯಕ್ಕೆ ಹೆದರಿದ ಭ್ರಷ್ಟ, ಹೇಡಿ ರಾಜನ ಈಡಿ, ಬೇಡಿಯ ತಲೆಬುಡವಿಲ್ಲದ ಆರೋಪಗಳ ಮುಚ್ಚುಮರೆಯ ಹೊಲಸು, ನಾಚಿಕೆಗೆಟ್ಟ ಗೂಂಡಾಗಿರಿ ರಾಜಕೀಯ.. ವಿಶೇಷಣಗಳು ಸಾಲುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.

”ಚೀನಾ ಅತಿಕ್ರಮಣವನ್ನು ಮುಚ್ಚಿಹಾಕಿದಾಗ, ಚೀನಾ ಕಂಪೆನಿಗಳು ಸಾವಿರಾರು ಕೋಟಿ, ಗೆಳೆಯ ಅದಾನಿಗೆ ಕಾನೂನು ಬಾಹಿರವಾಗಿಯೂ ಕೊಡುತ್ತಲೇ ಇರುವಾಗ, ಲೆಕ್ಕಪುಸ್ತಕವಿಲ್ಲದ ಪಿಎಮ್ ಕೇರ್ಸ್‌ಗೆ, ಗೋದೀ ಚಾನೆಲ್‌ಗಳಿಗೆ, ಐಪಿಎಲ್‌ಗೆ ಕಾನೂನು ಪ್ರಕಾರವೇ ಕೊಟ್ಟಾಗಲೆಲ್ಲ ಕಾಣದ ದೇಶದ್ರೋಹ, ಅದೇ ಚೀನೀ ಕಂಪನಿಗಳು ಹಣ ಕೊಟ್ಟದ್ದಕ್ಕೆ ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ಮಾಡುವ ಪತ್ರಕರ್ತರ ಕೆಲಸದಲ್ಲಿ ಕಂಡುಬಿಟ್ಟಿತಲ್ಲ. ಹಾಗಾದರೆ ವಿವೊ, ಶಾಒಮಿ ಫೋನು ಬಳಸುವ ನಾವು ನೀವೆಲ್ಲರೂ ಇವರ ಪ್ರಕಾರ ದೇಶದ್ರೋಹಿಗಳೇ? ಎಂದು ಪ್ರಶ್ನೆ ಮಾಡಿದ್ದಾರೆ.

”ಚೀನಾದ ಜೊತೆ ಸಾವಿರಾರು ಕೋಟಿ ವ್ಯಾಪಾರ ನಡೆಸುತ್ತಿರುವ ಭಾರತ ಸರ್ಕಾರ?? ಇವರ ತಲೆಬುಡವಿಲ್ಲದ ಆರೋಪಗಳಿಗೆ ಆಧಾರವೇನು? ಆ ಕಂಪನಿಗಳನ್ನು ಮುಚ್ಚಿಸುತ್ತಾರೆಯೇ?” ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.

”ಸುಮ್ಮನೇ ಏನು ಭಾರತದ ಪತ್ರಿಕಾ ಸ್ವಾತಂತ್ರ್ಯ ಜಗತ್ತಿನಲ್ಲಿ 161ನೇ ಸ್ಥಾನಕ್ಕೆ ಹೋಗಿಲ್ಲ.. ಹೀಗೇ ಬಾಯಿಮುಚ್ಚಿಸುವುದು ಮುಂದುವರೆದರೆ, ಪ್ರಾಮಾಣಿಕ ಪತ್ರಕರ್ತರನ್ನು, ಸಂಜೀವ್ ಭಟ್, ಶ್ರೀಕುಮಾರರಂಥ ಪ್ರಾಮಾಣಿಕ ಪೋಲೀಸರನ್ನು, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ವಿರೋಧಪಕ್ಷದ ಜನಪ್ರತಿನಿಧಿಗಳನ್ನು ಒಟ್ಟಿನಲ್ಲಿ ದೇಶದ ಜನಪರ ಪ್ರಾಮಾಣಿಕರೆಲ್ಲರನ್ನೂ ಫೋಟೋದಲ್ಲಿ, ಜೈಲಿನಲ್ಲಿ ಇಲ್ಲಾ ಸಿನಿಮಾದಲ್ಲಿ ಮಾತ್ರ ನೋಡಬೇಕಷ್ಟೆ” ಎಂದು ವಾಗ್ದಾಳಿ ನಡೆಸಿದ್ದಾರೆ.

”ನಮಗಾಗಿ ಹೋರಾಡಿದ ಜನ ಜೈಲಿಗೆ ಹೋಗುವಾಗ ಬಾಯಿಮುಚ್ಚಿ ಕುಳಿತ ನಾವು ಯೋಚಿಸಬೇಡವೇ?
ನಮ್ಮ ಮುಂದಿನ ಪೀಳಿಗೆಯ ಗತಿಯೇನೆಂದು?? ನಮ್ಮ ಮಕ್ಕಳು ಭ್ರಷ್ಟರಾಗಬೇಕು ಇಲ್ಲಾ ಜೈಲು ಸೇರಬೇಕು ಅಲ್ಲವೇ??” ಎಂದು ನಟ ಕಿಶೋರ್ ಕುಮಾರ್ ಜನರು ಮುಂದೆ ಪ್ರಶ್ನೆಗಳನ್ನು ಇಟ್ಟಿದ್ದಾರೆ.

ಇದನ್ನೂ ಓದಿ: ನಾವು ಹಿಂದೂಗಳಲ್ಲವೇ? ಇದಾವುದು ಹೊಸ ಧರ್ಮ, ಸನಾತನ??: ನಟ ಕಿಶೋರ್ ಕುಮಾರ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...