Homeಮುಖಪುಟಫೈನಾನ್ಶಿಯಲ್ ಟೈಮ್ಸ್ ವರದಿ ನಿರಾಕರಿಸಿದ ಅದಾನಿ ಗ್ರೂಪ್ ವಿರುದ್ಧ ಟಿಎಂಸಿ ಸಂಸದೆ ಟೀಕೆ

ಫೈನಾನ್ಶಿಯಲ್ ಟೈಮ್ಸ್ ವರದಿ ನಿರಾಕರಿಸಿದ ಅದಾನಿ ಗ್ರೂಪ್ ವಿರುದ್ಧ ಟಿಎಂಸಿ ಸಂಸದೆ ಟೀಕೆ

- Advertisement -
- Advertisement -

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ‘ಗೌತಮ್ ಅದಾನಿ ಗ್ರೂಪ್’ ಯುಕೆ ಮೂಲದ ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಯ ವರದಿಯನ್ನು ಸಂಘಟಿತ ಮತ್ತು ಸುಳ್ಳು ವರದಿ ಎಂದು ಹೇಳಿದ್ದಕ್ಕೆ ವಾಗ್ದಾಳಿ ನಡೆಸಿದ್ದಾರೆ.

ಮೊದಲು ಅವರು ಅದಾನಿ ಭಾರತ ಮತ್ತು ಯಾವುದೇ ಅದಾನಿ ವಿರೋಧಿ ಆರೋಪಗಳು ಭಾರತ ವಿರೋಧಿ ಎಂದು ಹೇಳುತ್ತಿದ್ದರು ಎಂದು ಮಹುವ ಮೊಯಿತ್ರಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈಗ ಅವರು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಯನ್ನು ಸೊರೊಸ್ ಎಂದು ಹೇಳುತ್ತಾರೆ! ನಾವೆಲ್ಲರೂ ಸೊರೊಸ್ ಏಜೆಂಟ್‌ಗಳು, ಆದರೆ ಅದಾನಿ ಅವರ ಪಕ್ಷಕ್ಕೆ ಸಂಬಂಧಿಸಿದವರಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ದ ಟೀಕಿಸಿದ್ದಾರೆ.

ಅದಾನಿ ಗ್ರೂಪ್ ಸೋಮವಾರ ಮಾಧ್ಯಮ ಹೇಳಿಕೆಯನ್ನು ನೀಡಿದ್ದು, ಫೈನಾನ್ಶಿಯಲ್ ಟೈಮ್ಸ್ ಪತ್ರಕರ್ತರೊಬ್ಬರು ಒಸಿಸಿಆರ್‌ಪಿಯೊಂದಿಗೆ ಜಂಟಿಯಾಗಿ ಅದಾನಿ ಗ್ರೂಪ್‌ ವಿರುದ್ಧ ವರದಿ ಮಾಡಿದ್ದಾರೆ. ಇದು ‘ಸುಳ್ಳು ವರದಿ’ ಎಂದು ಹೇಳಿದೆ. ಈ ಲೇಖನಗಳು ಸಾರ್ವಜನಿಕ ಹಿತಾಸಕ್ತಿಯ ಸೋಗಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳನ್ನು ಮುನ್ನಡೆಸುವವರ ವಿಸ್ತೃತ ಅಭಿಯಾನದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಫೈನಾನ್ಷಿಯಲ್ ಟೈಮ್ಸ್‌ನ ಡಾನ್ ಮೆಕ್‌ಕ್ರಂ ಅವರು OCCRP ಯೊಂದಿಗೆ ಜಂಟಿಯಾಗಿ 31 ಆಗಸ್ಟ್ 2023 ರಂದು ಅದಾನಿ ಗ್ರೂಪ್ ವಿರುದ್ಧ ಸುಳ್ಳು ವರದಿಯನ್ನು ಮಾಡಿದ್ದಾರೆ.  OCCRPಗೆ ಜಾರ್ಜ್ ಸೊರೊಸ್ ಹಣ ನೀಡಿದ್ದಾರೆ. ಅದಾನಿ ಗ್ರೂಪ್ ವಿರುದ್ಧ ಅವರು ಹಗೆತನ ಸಾಧಿಸುತ್ತಿದ್ದಾರೆ ಎಂದು ಅದಾನಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ( Organised Crime and Corruption Reporting Project) (OCCRP) ಆಗಸ್ಟ್‌ನ ವರದಿಯಲ್ಲಿ ಅದಾನಿ ಕುಟುಂಬದೊಂದಿಗೆ ದೀರ್ಘಕಾಲದ ವ್ಯಾಪಾರ ಸಂಬಂಧ ಹೊಂದಿರುವ ಇಬ್ಬರು ವೈಯಕ್ತಿಕ ಹೂಡಿಕೆದಾರರು 2013 ಮತ್ತು 2018ರ ನಡುವೆ ಅದಾನಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವಿದೇಶಿ ವೇದಿಕೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದೆ. ಇದಲ್ಲದೆ ಇಬ್ಬರು ಹೂಡಿಕೆದಾರರು ಅದಾನಿ ಗ್ರೂಪ್‌ ಜೊತೆ ಮತ್ತು ಗೌತಮ್ ಅದಾನಿಯವರ ಸಹೋದರ ವಿನೋದ್ ಅದಾನಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿತ್ತು.

ಇದನ್ನು ಓದಿ:ನ್ಯೂಸ್ ಕ್ಲಿಕ್‌ ವಿರುದ್ಧದ ಪ್ರಕರಣ: 25 ಪತ್ರಕರ್ತರನ್ನು 2ನೇ ಬಾರಿಗೆ ವಿಚಾರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಐಟಿ ಸೆಲ್‌ ಸಿಬ್ಬಂದಿಗೆ ಪೊಲೀಸರಿಂದ ಕಿರುಕುಳ: ಸುಪ್ರಿಯಾ ಶ್ರೀನಾಟೆ ಆರೋಪ

0
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪೊಲೀಸರು "ಕಿರುಕುಳ" ಮತ್ತು "ಬೆದರಿಕೆ" ಹಾಕುತ್ತಿದ್ದಾರೆ  ಎಂದು...