Homeಅಂತರಾಷ್ಟ್ರೀಯಗಾಝಾಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದ ಭಾರತ

ಗಾಝಾಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದ ಭಾರತ

- Advertisement -
- Advertisement -

ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾದ ಎರಡು ವಾರಗಳ ನಂತರ ಇಸ್ರೇಲ್‌ ಪಡೆಗಳು ದಿಗ್ಭಂದನ ಹಾಕಿರುವ ಪ್ಯಾಲೆಸ್ತೀನ್ ನಗರವಾದ ಗಾಝಾಕ್ಕೆ ಭಾರತ ಭಾನುವಾರ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದೆ.

ಅಗತ್ಯ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಟಾರ್ಪೌಲಿನ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು ಸೇರಿ ಉಪಯುಕ್ತ ವಸ್ತುಗಳನ್ನು ಭಾರತದಿಂದ ಗಾಝಾಕ್ಕೆ ಕಳುಹಿಸಿಕೊಡಲಾಗಿದೆ.

ಇದಲ್ಲದೆ ಯುದ್ಧ ಕುರಿತ ಇತ್ತೀಚಿನ ವರದಿಯಲ್ಲಿ ಇಸ್ರೇಲ್‌ ಯುದ್ಧ ವಿಮಾನವು ಪಶ್ಚಿಮ ದಂಡೆಯಲ್ಲಿರುವ ಅಲ್-ಅನ್ಸಾರ್ ಮಸೀದಿಯ ಕೆಳಗಿರುವ ಕಾಂಪೌಂಡ್‌ನ್ನು ಹೊಡೆದಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.

ಅ.7ರಂದು ಹಮಾಸ್ ಸಶಸ್ತ್ರ ಗುಂಪು ಇಸ್ರೇಲ್‌ ಮೇಲೆ ಹಠಾತ್ ದಾಳಿ ನಡೆಸಿದ ಬಳಿಕ ಗಾಝಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿತ್ತು. ಇಸ್ರೇಲ್ ಅಲ್ಲಿಗೆ ನೀರು, ವಿದ್ಯುತ್, ಇಂಧನ ಹಾಗೂ ಆಹಾರ ಪೂರೈಕೆಯನ್ನು ಕಡಿತಗೊಳಿಸಿತ್ತು.

ಯುಎನ್‌ ಮಧ್ಯಪ್ರವೇಶಿಸಿ ಗಾಝಾದ ನಿರಾಶ್ರಿತರಿಗೆ ಅಂತರಾಷ್ಟ್ರೀಯ ಸಮುದಾಯ ಸಹಾಯಕ್ಕೆ ಮುಂದೆ ಬರಬೇಕು ಎಂದು ಮನವಿ ಮಾಡಿತ್ತು. ಗಾಝಾದ ಜನರು ಆಹಾರ, ನೀರು, ಔಷಧಿಗಾಗಿ ಪರದಾಡುತ್ತಾರೆ. ಪರಿಸ್ಥಿತಿ ಭೀಕರವಾಗಿದೆ ಎಂದು ಯುಎನ್ ವಿಶ್ವದ ಗಮನ ಸೆಳೆದಿತ್ತು.

ಗಾಝಾದ ಅಲ್-ಅಹ್ಲಿ ಆಸ್ಪತ್ರೆ ಮೇಲಿನ ದಾಳಿ ನಡೆಸಿದ್ದ ಇಸ್ರೇಲ್ ಪಡೆ 500ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿತ್ತು. ಗಾಝಾದಲ್ಲಿ ಇಸ್ರೇಲ್ ಆಕ್ರಮಣಕ್ಕೆ ಮೃತರ ಸಂಖ್ಯೆ 4137ಕ್ಕೆ ಏರಿಕೆಯಾಗಿದೆ ಎಂದು ಹಮಾಸ್‌ನ  ಸಚಿವರೋರ್ವರು ತಿಳಿಸಿದ್ದಾರೆ. ಇಸ್ರೇಲ್‌ನಲ್ಲಿ ಹಮಾಸ್‌ ದಾಳಿಯಿಂದ 1400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ದೇವಾಲಯಗಳಲ್ಲಿ RSS ಚಟುವಟಿಕೆ ನಿಷೇಧ: ಹೊಸ ಸುತ್ತೋಲೆ ಹೊರಡಿಸಿದ ದೇವಸ್ವಂ ಮಂಡಳಿ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...