Homeಮುಖಪುಟದೇವಾಲಯಗಳಲ್ಲಿ RSS ಚಟುವಟಿಕೆ ನಿಷೇಧ: ಹೊಸ ಸುತ್ತೋಲೆ ಹೊರಡಿಸಿದ ದೇವಸ್ವಂ ಮಂಡಳಿ

ದೇವಾಲಯಗಳಲ್ಲಿ RSS ಚಟುವಟಿಕೆ ನಿಷೇಧ: ಹೊಸ ಸುತ್ತೋಲೆ ಹೊರಡಿಸಿದ ದೇವಸ್ವಂ ಮಂಡಳಿ

- Advertisement -
- Advertisement -

ದೇವಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ನಡೆಸುವ ಸಾಮೂಹಿಕ ತರಬೇತಿ, ನಾಮಜಪ ಮತ್ತು ಆರೆಸ್ಸೆಸ್‌ ಸಂಬಂಧಿತ ಅಕ್ರಮ ಸಭೆಗಳನ್ನು ನಿಷೇಧಿಸಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೊಸ ಸುತ್ತೋಲೆ ಹೊರಡಿಸಿದೆ.

ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಿ ಟಿಡಿಬಿ ಈ ಹಿಂದೆ ಎರಡು ಸುತ್ತೋಲೆಗಳನ್ನು ಹೊರಡಿಸಿತ್ತು. ಹೊಸ ಸುತ್ತೋಲೆಯಲ್ಲಿ ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಅಕ್ರಮ ಸಭೆಗಳು ಮತ್ತು ತರಬೇತಿಗಳನ್ನು ನಡೆಸುತ್ತಿದೆಯಾ ಎಂದು ಪರಿಶೀಲನೆಗೆ ಮಂಡಳಿಯ ಅಧಿಕಾರಿಗಳಿಗೆ ಹಠಾತ್ ದಾಳಿ ನಡೆಸುವಂತೆ ಕೂಡ ಮಂಡಳಿಯು ತನ್ನ ಆದೇಶದಲ್ಲಿ ತಿಳಿಸಿದೆ.

ಇತ್ತೀಚಿಗೆ ಕೆಲವು ದೇವಸ್ಥಾನಗಳಲ್ಲಿ ಮಂಡಳಿಯ ಹಿಂದಿನ ಆದೇಶದ ವಿರುದ್ಧ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಾಮಜಪ ಪ್ರತಿಭಟನೆಗೆ ನಿಷೇಧ ಹೇರಲಾಗಿದೆ.

ಆರೆಸ್ಸೆಸ್ ಒಳಗೊಂಡಂತೆ ಮೂಲಭೂತವಾದವನ್ನು ಹರಡುವ ಯಾವುದೇ ಸಂಘಟನೆಗೆ ತನ್ನ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ಕಾರ್ಯಾಚರಣೆ ನಡೆಸಲು ಅವಕಾಶ ನೀಡಯವುದಿಲ್ಲವೆಂದು ನೂರಾರು ದೇವಾಲಯಗಳ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ನೋಡುಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿಯು ಹೇಳಿದೆ.

ಇದಲ್ಲದೆ ರಾಜಕೀಯ ಕೋಮು ಸಂಘಟನೆಗಳ ಚಿಹ್ನೆ ಹೊಂದಿರುವ ಜಾಹೀರಾತು ಫಲಕಗಳು ಮತ್ತು ದೇವಾಲಯಗಳೊಂದಿಗೆ ಸಂಬಂಧವಿಲ್ಲದ ವ್ಯಕ್ತಿಗಳ ಭಾವಚಿತ್ರವಿರುವ ಬಿತ್ತಿ ಫಲಕಗಳನ್ನು ಕೂಡ ಕೂಡಲೇ ತೆರವುಗೊಳಿಸಬೇಕು ಎಂದು ಅದು ಆದೇಶಿಸಿದೆ.

ದೇವಾಲಯದಲ್ಲಿ ಅಥವಾ  ದೇವಸ್ಥಾನಗಳ ಸಮೀಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಅಥವಾ ಸಂಘಟನೆಗೆ ಸಂಬಂಧಿಸಿದ ಏಕವರ್ಣದ ಧ್ವಜಗಳ ಹಾರಾಟಕ್ಕೆ ಅವಕಾಶವಿಲ್ಲ. ಯಾವುದೇ ಕರಪತ್ರ  ದೇವಸ್ಥಾನಗಳ ವ್ಯಾಪ್ತಿಯಲ್ಲಿ ಹಂಚಬೇಕಿದ್ದರೆ ಸಹಾಯಕ ದೇವಸ್ವಂ ಅಧಿಕಾರಿಯ ಅನುಮತಿ ಪಡೆಯಬೇಕು ಮತ್ತು ಹಂಚುವ ಮುನ್ನ ಅವುಗಳ ಪ್ರತಿಯೊಂದನ್ನು ಅಧಿಕಾರಿಗೆ ನೀಡಬೇಕು ಎಂದೂ ಸೂಚಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...