Homeಕರ್ನಾಟಕಚೆನ್ನೈ: ರೈಲು ಹರಿದು ಕರ್ನಾಟಕದ ಮೂವರು ಬಾಲಕರು ಮೃತ್ಯು

ಚೆನ್ನೈ: ರೈಲು ಹರಿದು ಕರ್ನಾಟಕದ ಮೂವರು ಬಾಲಕರು ಮೃತ್ಯು

- Advertisement -
- Advertisement -

ಕರ್ನಾಟಕ ಮೂಲದ ಮೂವರು ಬಾಲಕರು ಚೆನ್ನೈನ ಹೊರವಲಯದ ಉರಪಕ್ಕಂ ಬಳಿ ರೈಲು ಹರಿದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಮಂಜುನಾಥ್ (11), ರವಿ (12), ಸುರೇಶ್ (14) ಎಂದು ಗುರುತಿಸಲಾಗಿದೆ.

ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇಬ್ಬರು ಬಾಲಕರು ಸಹೋದರರಾಗಿದ್ದಾರೆ. ಅವರಿಗೆ ವಾಕ್‌ ಮತ್ತು ಶ್ರವಣ ದೋಷ ಇತ್ತು. ಇನ್ನೊಬ್ಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ. ಮೂವರು ಕೂಡ 11ರಿಂದ 15ರ ಹರೆಯದವರಾಗಿದ್ದಾರೆ.

ಮೃತ ಬಾಲಕರ ಪೋಷಕರು ಚೆನ್ನೈನಲ್ಲಿ ದಿನಗೂಲಿ ಮಾಡುತ್ತಿದ್ದರು. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟೈಮ್ಸ್‌ ಆಫ್‌ ಇಂಡಿಯಾ ವರದಿಯು, ಮೃತ ಬಾಲಕರು ಕರ್ನಾಟಕದ ಹುಬ್ಬಳ್ಳಿಯ ನಿವಾಸಿಗಳು ಎಂದು ಹೇಳಿದೆ.

ಸೋಮವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ವಂಡಲೂರು- ಉರಪ್ಪಕ್ಕಂ ನಡುವಿನ ರೈಲ್ವೆ ಹಳಿಯಲ್ಲಿ ಮೂವರು ಬಾಲಕರು ಆಟವಾಡುತ್ತಿದ್ದಾಗ ಚೆನ್ನೈ ಬೀಚ್‌ನಿಂದ ಚೆಂಗಲ್‌ಪೇಟ್‌ಗೆ ಹೋಗುತ್ತಿದ್ದ ಇಎಂಯು ರೈಲು ಢಿಕ್ಕಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಮಕ್ಕಳು ಆಟವಾಡುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಹಾರ್ನ್ ಮಾಡಿದ್ದಾರೆ. ಆದರೆ ಮಕ್ಕಳಿಗೆ ವಾಕ್‌ ಮತ್ತು ಶ್ರವಣ ದೋಷ ಇದ್ದ ಕಾರಣ ಇದು ಕೇಳಿಸಿಲ್ಲ. ಇದರಿಂದ ದುರ್ಘಟನೆ ನಡೆದಿದೆ.

ಇದನ್ನು ಓದಿ: ನೋಂದಣಿಯಾಗದ ಮದರಸಾಗಳಿಗೆ ದಿನಕ್ಕೆ ₹10,000 ದಂಡ ವಿಧಿಸಿದ ಆದಿತ್ಯನಾಥ್ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...