Homeಮುಖಪುಟನೋಂದಣಿಯಾಗದ ಮದರಸಾಗಳಿಗೆ ದಿನಕ್ಕೆ ₹10,000 ದಂಡ ವಿಧಿಸಿದ ಆದಿತ್ಯನಾಥ್ ಸರ್ಕಾರ

ನೋಂದಣಿಯಾಗದ ಮದರಸಾಗಳಿಗೆ ದಿನಕ್ಕೆ ₹10,000 ದಂಡ ವಿಧಿಸಿದ ಆದಿತ್ಯನಾಥ್ ಸರ್ಕಾರ

- Advertisement -
- Advertisement -

ಮುಜಾಫರ್‌ನಗರದಲ್ಲಿ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳು ದಿನಕ್ಕೆ ₹10,000 ದಂಡ ತೆರಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಮೂಲ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಸರಿಯಾದ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಹತ್ತಕ್ಕೂ ಹೆಚ್ಚು ಮದರಸಾಗಳಿಗೆ ಮೂಲ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ನೋಟಿಸ್ ಜಾರಿ ಮಾಡಿದ್ದು, ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚಿಸಿದೆ.

ಉತ್ತರ ಪ್ರದೇಶದಲ್ಲಿ ಸುಮಾರು 24,000 ಮದರಸಾಗಳಿವೆ, ಅವುಗಳಲ್ಲಿ 16,000 ಮಾನ್ಯತೆ ಪಡೆದಿದ್ದು ಇನ್ನು 8,000 ಮದರಸಾಗಳು ಮಾನ್ಯತೆ ಪಡೆದಿಲ್ಲ ಎಂದು ಅಧಿಕಾರಿಗಳ ತಿಳಿಸಿದ್ದಾರೆ.

ನೋಟಿಸ್ ನೀಡಿರುವ ಮದರಸಾಗಳಿಗೆ ಆದೇಶ ಬಂದ ಮೂರು ದಿನಗಳೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

”ಮದರಸಾಗಳು ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ದಿನಕ್ಕೆ ₹10,000 ದಂಡ ವಿಧಿಸಲಾಗುವುದು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಮುಜಾಫರ್‌ನಗರ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಶುಭಂ ಶುಕ್ಲಾ ಅವರು, ”ಇಲ್ಲಿ ನಡೆಯುತ್ತಿರುವ ನೂರಕ್ಕೂ ಹೆಚ್ಚು ಮದರಸಾಗಳು ಜಿಲ್ಲೆಯಲ್ಲಿ ನೋಂದಣಿ ಅಥವಾ ಮಾನ್ಯತೆ ಹೊಂದಿಲ್ಲ ಮತ್ತು ನಿಯಮಾವಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ತಮ್ಮ ಕಚೇರಿಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಮದರಸಾಗಳಿಗೆ ಶಿಕ್ಷಣ ಇಲಾಖೆಯ ನೀಡಿದ ನೋಟಿಸ್‌ನ್ನು “ಕಾನೂನುಬಾಹಿರ” ಎಂದು ಭಾರತೀಯ ಮುಸ್ಲಿಮರ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್ ಹೇಳಿದೆ.

ಜಮಿಯತ್ ಉಲೇಮಾ-ಎ-ಹಿಂದ್‌ನ ಉತ್ತರ ಪ್ರದೇಶ ಘಟಕದ ಕಾರ್ಯದರ್ಶಿ ಮೌಲಾನಾ ಝಾಕಿರ್ ಹುಸೇನ್ ಮಾತನಾಡಿ, ”ರಾಜ್ಯದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಅಕ್ರಮ ನೋಟಿಸ್‌ಗಳನ್ನು ನೀಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ” ಎಂದು ಹೇಳಿದರು.

”ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ದಿನಕ್ಕೆ ₹ 10,000 ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ” ಎಂದು ಹುಸೇನ್ ಹೇಳಿದರು.

”ರಾಜ್ಯದ ಸುಮಾರು 4,000 ಮದರಸಾಗಳನ್ನು ವಿದೇಶಿ ಹಣದಿಂದ ನಡೆಸಲಾಗುತ್ತಿದೆ ಎಂದು ಲಕ್ನೋದ ಹಿರಿಯ ಅಧಿಕಾರಿಯೊಬ್ಬರು ಆರೋಪ ಮಾಡಿದ್ದಾರೆ.

”4,000 ಮದರಸಾಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ, ಅವುಗಳಲ್ಲಿ ಹೆಚ್ಚಿನವು ಇಂಡೋ-ನೇಪಾಳ ಗಡಿಯಿಂದ ಬರುವ ಹಣದಿಂದ ನಡೆಯುತ್ತಿವೆ, ಅವು ವಿದೇಶದಿಂದ ಹಣವನ್ನು ಪಡೆಯುತ್ತಿವೆ” ಎಂದು ಅಧಿಕಾರಿ ತಿಳಿಸಿದ್ದಾರೆ.

”ಅವರು ಪಡೆದ ಹಣವನ್ನು ಭಯೋತ್ಪಾದನೆ ಅಥವಾ ಬಲವಂತದ ಧಾರ್ಮಿಕ ಮತಾಂತರದಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ಎಸ್‌ಐಟಿ ಪರಿಶೀಲಿಸುತ್ತದೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ರಕ್ತ ವರ್ಗಾವಣೆಯ ನಂತರ 14 ಮಕ್ಕಳಿಗೆ ಎಚ್‌ಐವಿ, ಹೆಪಟೈಟಿಸ್ ಸೋಂಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...