HomeUncategorizedಲಿವ್-ಇನ್ ರಿಲೇಷನ್‌ಶಿಪ್‌ 'ಪ್ರಾಮಾಣಿಕತೆ ಇಲ್ಲದ ಪ್ರೇಮ': ಅಲಹಾಬಾದ್ ಹೈಕೋರ್ಟ್

ಲಿವ್-ಇನ್ ರಿಲೇಷನ್‌ಶಿಪ್‌ ‘ಪ್ರಾಮಾಣಿಕತೆ ಇಲ್ಲದ ಪ್ರೇಮ’: ಅಲಹಾಬಾದ್ ಹೈಕೋರ್ಟ್

- Advertisement -
- Advertisement -

ಪೊಲೀಸ್ ರಕ್ಷಣೆ ಕೋರಿ ಅಂತರ್-ಧರ್ಮೀಯ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿರುವ ಜೋಡಿಗಳು ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ್ದು, ಲಿವ್-ಇನ್ ರಿಲೇಷನ್‌ಶಿಪ್‌ ಎನ್ನುವುದು ಟೈಂಪಾಸ್‌ ಮತ್ತು ಯಾವುದೇ ಸ್ಥಿರತೆ, ಪ್ರಾಮಾಣಿಕತ ಇಲ್ಲದ ಪ್ರೇಮ ಎಂದು ಹೇಳಿದೆ.

ಸುಪ್ರೀಂಕೋರ್ಟ್ ಹಲವಾರು ಸಂದರ್ಭಗಳಲ್ಲಿ ಲಿವ್-ಇನ್ ಸಂಬಂಧಗಳನ್ನು ಮಾನ್ಯ ಮಾಡಿದೆ. ಅರ್ಜಿದಾರರ ವಯಸ್ಸು ಮತ್ತು ಜೊತೆಯಾಗಿ ವಾಸಿಸಿದ ಸಮಯವನ್ನು ಪರಿಗಣಿಸಿ ಇದು ಎಚ್ಚರಿಕೆಯಿಂದ ತೆಗೆದ ನಿರ್ಧಾರವೇ ಎಂದು ಪ್ರಶ್ನಿಸಿದೆ.

20-22 ವರ್ಷ ವಯಸ್ಸಿನಲ್ಲಿ ಎರಡು ತಿಂಗಳ ಅವಧಿಯ ಸಂಬಂಧದಲ್ಲಿ ತಾತ್ಕಾಲಿಕ ಸಂಬಂಧಗಳ ಬಗ್ಗೆ ಜೋಡಿಯು ಗಂಭೀರವಾಗಿ ಯೋಚಿಸಲು ಸಾಧ್ಯವಾಗುತ್ತಾರೆ ಎಂದು ನಾವು ನಿರೀಕ್ಷಿಸಲಾಗುವುದಿಲ್ಲ. ಇದು ಯಾವುದೇ ಪ್ರಾಮಾಣಿಕತೆ ಇಲ್ಲದ ವ್ಯಾಮೋಹವಾಗಿದೆ ಎಂದು ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ಮೊಹಮ್ಮದ್ ಅಜರ್ ಹುಸೇನ್ ಇದ್ರಿಸಿ ಅವರ ದ್ವಿಸದಸ್ಯ ಪೀಠವು ಹೇಳಿದೆ.

ಲಿವ್-ಇನ್ ಸಂಬಂಧಗಳು ತಾತ್ಕಾಲಿಕ ಮತ್ತು ಇದು ದುರ್ಬಲವಾಗಿ ಟೈಂಪಾಸ್ ಆಗಿ ಬದಲಾಗುತ್ತವೆ ಎಂದು ನ್ಯಾಯಾಲಯವು ಹೇಳಿದ್ದು, ಜೀವನವು ಗುಲಾಬಿಗಳ ಹಾಸಿಗೆಯಲ್ಲ. ಈ ರೀತಿಯ ಸಂಬಂಧಗಳು ಸಾಮಾನ್ಯವಾಗಿ ಟೈಂಪಾಸ್ ಆಗಿದೆ. ಇದು ತಾತ್ಕಾಲಿಕವಾಗಿ ದುರ್ಬಲ ಎಂದು ಹೇಳಿದ ಕೋರ್ಟ್‌ ಅರ್ಜಿದಾರರಿಗೆ ತನಿಖೆಯ ಹಂತದಲ್ಲಿ ರಕ್ಷಣೆ ನೀಡಲು ನಿರಾಕರಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 366ರಡಿಯಲ್ಲಿ ಯುವತಿಯ ಚಿಕ್ಕಮ್ಮ ಯುವಕನ ವಿರುದ್ಧ ದಾಖಲಿಸಿದ ಎಫ್‌ಐಆರ್‌ನ್ನು ರದ್ದುಗೊಳಿಸಿ ಪೊಲೀಸ್ ರಕ್ಷಣೆ  ನೀಡುವಂತೆ ಕೋರಿ ಜೋಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಚಿಕ್ಕಮ್ಮ ಮಹಿಳೆಯ ತಾಯಿ ಎಂದು ಹೇಳಿಕೊಂಡು ಪ್ರಕರಣ ದಾಖಲಿಸಿದ್ದರು. ಆ ವ್ಯಕ್ತಿ ಸರಿಯಿಲ್ಲ ಆತ ತನ್ನ ಸೊಸೆಯ ಜೀವನವನ್ನು ಹಾಳು ಮಾಡುತ್ತಾನೆ. ಉತ್ತರ ಪ್ರದೇಶದಲ್ಲಿ ದರೋಡೆಗೆ ಸಂಬಂಧಿಸಿದ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ಈತನ ಮೇಲೆ ಈಗಾಗಲೇ ಕೇಸ್‌ ದಾಖಲಾಗಿದೆ ಎಂದು ದೂರಿನಲ್ಲಿ ಯುವತಿಯ ಚಿಕ್ಕಮ್ಮ ಆರೋಪಿಸಿದ್ದರು.

ಯುವತಿಯು ತನಗೆ 20 ವರ್ಷ ವಯಸ್ಸಾಗಿದ್ದು, ನನ್ನ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ನಾನು ಹೊಂದಿದ್ದೇನೆ. ಈ ವಿಚಾರದಲ್ಲಿ ತನ್ನ ತಂದೆ ಪ್ರಕರಣ ದಾಖಲಿಸಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದಾಳೆ.

ಆದರೆ ವಾದವನ್ನು ಆಲಿಸಿದ ನಂತರ ಎಫ್‌ಐಆರ್ ರದ್ದುಗೊಳಿಸಲು ಸಾಕಷ್ಟು ಆಧಾರ ನೀಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನು ಓದಿ: 2017ರಲ್ಲಿ ಆದಿತ್ಯನಾಥ್‌ ಅಧಿಕಾರ ವಹಿಸಿಕೊಂಡ ಬಳಿಕ 190 ಜನರ ಎನ್‌ಕೌಂಟರ್‌: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...