HomeUncategorizedದೇವರನ್ನು ಅವಮಾನಿಸಿದ ಆರೋಪ: ದಲಿತ ಗಾಯಕನ ತಲೆ ಮೇಲೆ ಚಪ್ಪಲಿ ಇರಿಸಿ ಕ್ಷಮೆ ಕೇಳಿಸಿದ ಸವರ್ಣೀಯರು

ದೇವರನ್ನು ಅವಮಾನಿಸಿದ ಆರೋಪ: ದಲಿತ ಗಾಯಕನ ತಲೆ ಮೇಲೆ ಚಪ್ಪಲಿ ಇರಿಸಿ ಕ್ಷಮೆ ಕೇಳಿಸಿದ ಸವರ್ಣೀಯರು

- Advertisement -
- Advertisement -

ರಾಜಸ್ಥಾನದ ಚಿತ್ತೋರ್‌ಗಢ್‌ನ ದುಗರ್ ಗ್ರಾಮದಲ್ಲಿ 70 ವರ್ಷದ ದಲಿತ ಬಗ್ದಾವತ್ ಭಜನ್ (ಭಕ್ತಿಗೀತೆ) ಗಾಯಕನೊಬ್ಬ ತನ್ನ ಭಜನೆಯಲ್ಲಿ ಸ್ಥಳೀಯ ದೇವರನ್ನು ಅವಮಾನಿಸಿದ ಆರೋಪದ ಮೇಲೆ ‘ಶಿಕ್ಷೆ’ಯ ರೂಪವಾಗಿ ಆತನ ತಲೆಯ ಮೇಲೆ ಚಪ್ಪಲಿಯನ್ನು ಹೊರಿಸಿ, ಕ್ಷಮೆ ಕೇಳುವಂತೆ ಮಾಡಿರುವ ವೀಡಿಯೊ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತಡರಾತ್ರಿ 10 ಜನರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 16 ರಂದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಜನಾ ಗಾಯಕ ದಾಲ್ಚಂದ್ ಬಾಲಾಯ್ ಅವರು ತಮ್ಮ ತಲೆಯ ಮೇಲೆ ಪಾದರಕ್ಷೆಗಳನ್ನು ಹೊತ್ತುಕೊಂಡು ಸುಮಾರು 60 ರಿಂದ 70 ಜನರ ಎದುರು ಸಾರ್ವಜನಿಕವಾಗಿ ‘ಕ್ಷಮೆ’ ಕೇಳುವಂತೆ ಒತ್ತಾಯಿಸಲಾಯಿತು. ಅವರು ಬಗ್ದಾವತ್ ಹಾಡಿನ ನಿರೂಪಣೆಯ ಸಮಯದಲ್ಲಿ ಗುರ್ಜರ್ ಸಮುದಾಯದ ದೇವತೆಯಾದ ಸಾದು ಮಾತೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಹಿಂದಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಘಟನೆ ಬಗ್ಗೆ ಮಾತನಾಡಿದ ಚಿತ್ತೋರ್‌ಗಢ ಪೊಲೀಸ್ ವರಿಷ್ಠಾಧಿಕಾರಿ ರಾಜನ್ ದುಶ್ಯಂತ್, ”ದುಗರ್ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ದಾಲು ಸಾಲ್ವಿ ಈ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಗುಜ್ಜರ್ ಸಮುದಾಯವನ್ನು ಕೆರಳಿಸಿತು ಮತ್ತು ನೂರಾರು ಜನರು ಜಾತಿ ಪಂಚಾಯತಿಗಾಗಿ ಜಮಾಯಿಸಿದರು ಮತ್ತು ಸಾಲ್ವಿಯನ್ನು ಕ್ಷಮೆಯಾಚಿಸಲು ಕೇಳಿದರು” ಎಂದು ತಿಳಿಸಿದ್ದಾರೆ.

ಸಾಲ್ವಿ ಭಯಭೀತರಾಗಿದ್ದರು ಮತ್ತು ಪೊಲೀಸರಿಗೆ ತಿಳಿಸುವ ಮೊದಲು ಕ್ಷಮೆಯಾಚಿಸಲು ತಲೆಯ ಮೇಲೆ ಬೂಟುಗಳನ್ನು ಇಟ್ಟುಕೊಂಡಿದ್ದರು. ಘಟನೆಯ ಬಗ್ಗೆ ನನಗೆ ತಿಳಿದಾಗ, ನಾನು ಸ್ಥಳೀಯ ಠಾಣಾಧಿಕಾರಿಯನ್ನು ಸಾಲ್ವಿ ಅವರ ಮನೆಗೆ ಕಳುಹಿಸಿದೆ ಆದರೆ ಅವರು ದೂರು ನೀಡಲು ನಿರಾಕರಿಸಿದರು. ಘಟನೆಯ ವಿಡಿಯೋ ಬುಧವಾರ ವೈರಲ್ ಆದಾಗ ನಾವು ಪ್ರಕರಣ ದಾಖಲಿಸಿಕೊಂಡೆವು” ಎಂದು ದುಶ್ಯಂತ್ ಹೇಳಿದರು.

”ಸಾಲ್ವಿಯನ್ನು ಈ ರೀತಿಯಾಗಿ ಕ್ಷಮೆಯಾಚಿಸಲು ಪ್ರೇರೇಪಿಸಿದಕ್ಕಾಗಿ ಭಾರತೀಯ ದಂಡ ಸಂಹಿತೆ ಮತ್ತು ಕಟ್ಟುನಿಟ್ಟಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿಯಲ್ಲಿ ಹನ್ನೆರಡು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ದುಶ್ಯಂತ್ ಹೇಳಿದ್ದಾರೆ.

ಸಾಲ್ವಿಯ ಸಹ ಗಾಯಕ ಭೂರಾ ಗುಜ್ಜರ್‌ಗೆ ಜಾತಿ ಪಂಚಾಯತ್ ₹1,100 ದಂಡವನ್ನು ವಿಧಿಸಿದೆ. ಪಂಚಾಯತಿಯು ತನ್ನ ವಿರುದ್ಧ ದಂಡವನ್ನು ಘೋಷಿಸುವ ಮೊದಲು, ಕೆಲವರು ಕೂಗಲು ಪ್ರಾರಂಭಿಸಿದರು ಮತ್ತು ತನ್ನನ್ನು ಹಿಂಸಿಸಲು ಪ್ರಯತ್ನಿಸಿದರು ಎಂದು ಸಾಲ್ವಿ ಪೊಲೀಸರಿಗೆ ತಿಳಿಸಿದರು. ಅವರು ಭಯಭೀತರಾಗಿದ್ದರು ಮತ್ತು ಅದಕ್ಕಾಗಿಯೇ ಅವರು ತಮ್ಮ ಬೂಟುಗಳನ್ನು ತೆಗೆದುಕೊಂಡು ತಮ್ಮ ಮೇಲೆ ಹಲ್ಲೆ ನಡೆಸುತ್ತಾರೆ ಎಂಬ ಭಯದಿಂದ ತಲೆಯ ಮೇಲೆ ಇಟ್ಟುಕೊಂಡರು.

”ಧಾರ್ಮಿಕ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು ಮತ್ತು ಅವರಲ್ಲಿ ಹಲವರು ವೀಡಿಯೊಗಳನ್ನು ಮಾಡುತ್ತಿದ್ದರು. ಆಗ ನನ್ನ ಹೇಳಿಕೆಗೆ ಆಕ್ಷೇಪಗಳು ಬರಲಿಲ್ಲ ಆದರೆ ಒಂದು ವಾರದ ನಂತರ ವ್ಯಕ್ತಿಯೊಬ್ಬರು ನನಗೆ ಫೋನ್ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ” ಎಂದು ಸಾಲ್ವಿ ಹೇಳಿಕೊಂಡಿದ್ದಾರೆ.

ದಲಿತ ಸಂಘಟನೆಗಳು ನನ್ನ ಬೆಂಬಲಕ್ಕೆ ನಿಂತು ಚಿತ್ತೋರ್‌ಗಢ ಜಿಲ್ಲಾಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ನೀಡಿದೆವು. ಆಗ ನಾನು ಪೊಲೀಸ್ ದೂರು ದಾಖಲಿಸಿದೆ ಎಂದು ಸಾಲ್ವಿ ಹೇಳಿದರು.

ಸಾಲ್ವಿಯನ್ನು ಬೆದರಿಸಿದ ವ್ಯಕ್ತಿಗಳನ್ನು ಗುರುತಿಸಲು, ಈ ಪ್ರಕರಣದ ತನಿಖೆ ಮಾಡಲು ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ದುಶ್ಯಂತ್ ಹೇಳಿದರು. ಹೆಚ್ಚಿನ ಬಂಧನಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ದಲಿತರು, ಮುಸ್ಲಿಮರ ಕುರಿತ ರಾಹುಲ್ ಮಾತಿನಲ್ಲಿ ಕಹಿಸತ್ಯವಿದೆ: ಮಾಯಾವತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪರಿಷತ್ ಫಲಿತಾಂಶ ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರನ ಕಪಾಳಮೋಕ್ಷ: ಸಿಎಂ ಸಿದ್ದರಾಮಯ್ಯ

0
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ...