Homeಕರ್ನಾಟಕಕೆನಡಾ ಪ್ರಜೆಗಳಿಗೆ ಭಾರತದ ವೀಸಾ ಸ್ಥಗಿತ ಸೂಚನೆ ತೆಗೆದು ಹಾಕಿದ ವೆಬ್‌ಸೈಟ್‌

ಕೆನಡಾ ಪ್ರಜೆಗಳಿಗೆ ಭಾರತದ ವೀಸಾ ಸ್ಥಗಿತ ಸೂಚನೆ ತೆಗೆದು ಹಾಕಿದ ವೆಬ್‌ಸೈಟ್‌

- Advertisement -
- Advertisement -

ಕೆನಡಾ ಪ್ರಜೆಗಳಿಗೆ ಭಾರತದ ವೀಸಾ ಸ್ಥಗಿತಗೊಳಿಸಿ ವೆಬ್‌ಸೈಟ್‌ನಲ್ಲಿ ಸೂಚನೆ ನೀಡಲಾಗಿತ್ತು. ಆದರೆ ಇದೀಗ ವೀಸಾ ರದ್ಧತಿ ಕುರಿತ ಸೂಚನೆಯನ್ನು ವೆಬ್‌ಸೈಟ್‌ನಿಂದ ತೆಗೆದು ಹಾಕಲಾಗಿದೆ.

ಕೆನಡಾದಲ್ಲಿ ವೀಸಾ ಅರ್ಜಿಗಳನ್ನು ನಡೆಸುತ್ತಿರುವ ಬಿಎಲ್‌ಎಸ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯು ವೀಸಾ ರದ್ಧತಿ ಕುರಿತು ಸಂದೇಶವನ್ನು ಪೋಸ್ಟ್ ಮಾಡಿ, ಮುಂದಿನ ಆದೇಶದವರೆಗೆ ವೀಸಾ ಸೇವೆ ರದ್ದು ಮುಂದುವರಿಯಲಿದೆ ಎಂದು ಹೇಳಿತ್ತು.

ಆದರೆ BLS ಇಂಟರ್‌ನ್ಯಾಶನಲ್‌ನಲ್ಲಿ ತನ್ನ ವೀಸಾ ಅರ್ಜಿಯ ಪುಟವನ್ನು ಮತ್ತೊಮ್ಮೆ ನವೀಕರಿಸಿದೆ. ಮುಂದಿನ ಸೂಚನೆಯವರೆಗೆ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವುದನ್ನು ಉಲ್ಲೇಖಿಸಿದ ಹಿಂದಿನ ಪೋಸ್ಟ್‌ನ್ನು ತೆಗೆದುಹಾಕಿದೆ.

ಸೆ.21ರಿಂದ ಜಾರಿಗೆ ಬರುವಂತೆ, ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಅಮಾನತುಗೊಳಿಸಲಾಗಿತ್ತು. ದಯವಿಟ್ಟು BLS ವೆಬ್‌ಸೈಟ್‌ನ್ನು ಪರಿಶೀಲಿಸುತ್ತಿರಿ ಎಂದು ವೀಸಾ ಅಪ್ಲಿಕೇಶನ್ ಸೆಂಟರ್ ವೆಬ್‌ಸೈಟ್‌ನಲ್ಲಿ ತಿಳಿಸಿತ್ತು. ಆದರೆ ಇದೀಗ ನಿರ್ಬಂಧವನ್ನು ತೆಗೆದು ಹಾಕಿದೆ.

ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಏಜೆಂಟ್‌ಗಳಿಗೆ ಸಂಬಂಧವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಗಳನ್ನು ಮಾಡಿದ್ದರು. ಆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು.

ಈ ಮಧ್ಯೆ ಕೆನಡಾವು ಭಾರತೀಯ ಅಧಿಕಾರಿಯನ್ನು ದೇಶ ತೊರೆಯಲು ಸೂಚಿಸಿದ್ದು, ಇದರ ಬೆನ್ನಲ್ಲೇ ಕೆನಡಾದ ರಾಜತಾಂತ್ರಿಕ ಅಧಿಕಾರಿಯನ್ನು ಭಾರತವು ಉಚ್ಛಾಟನೆ ಮಾಡಿದೆ.

ಕೆನಡಾದ ರಾಜತಾಂತ್ರಿಕ ಅಧಿಕಾರಿಗೆ ದೇಶ ತೊರೆಯಲು ಐದು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಭಾರತ ಮಂಗಳವಾರ ಹೇಳಿದೆ. ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿಕೊಂಡು ಉಚ್ಛಾಟಣೆ ನಿರ್ಧಾರದ ಬಗ್ಗೆ ತಿಳಿಸಿತ್ತು.

ಇದಾದ ಬಳಿಕ ಕೆನಡಾ ಪ್ರಜೆಗಳಿಗೆ ಭಾರತಕ್ಕೆ ತುರ್ತು ಇದ್ದರೆ ಮಾತ್ರ ಪ್ರಯಾಣಿಸಿ ಎಂದು ಕೆನಡಾ ಸಲಹೆ ಬಿಡುಗಡೆ ಮಾಡಿತ್ತು. ಅನಗತ್ಯವಾಗಿ ಭಾರತದಲ್ಲಿರಬೇಡಿ ವಾಪಾಸ್ಸು ಬನ್ನಿ ಎಂದು ಕೂಡ ಕೆನಡಾ ಸರಕಾರ ತಿಳಿಸಿತ್ತು. ಇದರ ಬೆನ್ನಲ್ಲೇ ಭಾರತ ಕೆನಡಾದಲ್ಲಿನ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಸಲಹೆಯನ್ನು ಬಿಡುಗಡೆ ಮಾಡಿ ಎಚ್ಚರಿಕೆಯಿಂದಿರುವಂತೆ ಸೂಚಿಸಿತ್ತು.

ಇದನ್ನು ಓದಿ: ಕೆನಡಾದ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತಗೊಳಿಸಿದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...