ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಬುಧವಾರ ಸಂಜೆಯ ವೇಳೆಗೆ ರಕ್ಷಣಾ ತಂಡ ಕಾರ್ಮಿಕರು ಸಿಲುಕಿಕೊಂಡಿರುವ ಸ್ಥಳದ ಸಮೀಪ ತಲುಪಿದೆ ಎಂದು ತಿಳಿದು ಬಂದಿದೆ.
800 ಮಿಲಿ ಮೀಟರ್ ವ್ಯಾಸದ ಉಕ್ಕಿನ ಪೈಪ್ ಅನ್ನು ಕುಸಿದು ಬಿದ್ದಿರುವ ಕಲ್ಲು ಮಣ್ಣಿನ ಮೂಲಕ ಸುರಂಗದ 45 ಮೀಟರ್‌ವರೆಗೆ ಅಳವಡಿಸಲಾಗಿದೆ. ಮುಂದೆ 12 ಮೀಟರ್ ಕೊರೆದರೆ ಪೈಪ್ ಕಾರ್ಮಿಕರ ಬಳಿ ತಲುಪಲಿದೆ. ಈ ಪೈಪ್ ಮೂಲಕ ಕಾರ್ಮಿಕರು ತೆವಳಿಕೊಂಡು ಹೊರ ಬರಬಹುದು ಎಂದು ಬುಧವಾರ ಸಂಜೆ ಅಧಿಕಾರಿಗಳು ತಿಳಿಸಿದ್ದಾರೆ.
41 ಜನ ಕಾರ್ಮಿಕರ ರಕ್ಷಣೆಗೆ ವಿವಿಧ ರಕ್ಷಣಾ ತಂಡಗಳು ಹಗಲು-ರಾತ್ರಿ ನಿರಂತರವಾಗಿ ಶ್ರಮಿಸುತ್ತಿವೆ. ಸುರಂಗದ ಬಳಿ ಆಂಬ್ಯುಲೆನ್ಸ್ ಸಿದ್ದವಾಗಿಟ್ಟುಕೊಳ್ಳಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಮೀಸಲಿಡಲಾಗಿದೆ. ಸುರಂಗದ ಬಳಿಕ 15 ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಹೆಲಿಕಾಫ್ಟರ್ ಕೂಡ ಸಿದ್ದವಾಗಿ ನಿಂತಿದೆ.
ಮಂಗಳವಾರ ಪೈಪ್ ಮೂಲಕ ಕಾರ್ಮಿಕರ ಬಳಿಗೆ ಕ್ಯಾಮರಾ ಕಳುಹಿಸಲಾಗಿತ್ತು. ಈ ಕ್ಯಾಮರಾ ಮೂಲಕ ಕಾರ್ಮಿಕರು ತಮ್ಮ ಇರುವಿಕೆಯನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪೈಪ್ ಮೂಲಕವೇ ಕಾರ್ಮಿಕರಿಗೆ ಆಹಾರ, ಪಾನಿಯಾ ತಲುಪಿಸಲಾಗ್ತಿದೆ.
ಇದನ್ನೂ ಓದಿ : ಬಿಜೆಪಿಗೆ ಮತ ಹಾಕದವರಿಗೆ ನೀರಿಲ್ಲ: ಮಧ್ಯಪ್ರದೇಶದಲ್ಲಿ ಆಘಾತಕಾರಿ ಬೆಳವಣಿಗೆ


