Homeಮುಖಪುಟಭಾರತದ ವಿರುದ್ಧ ಅಮೆರಿಕದಲ್ಲಿ ಸಿಖ್‌ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಸಂಚು ಆರೋಪ

ಭಾರತದ ವಿರುದ್ಧ ಅಮೆರಿಕದಲ್ಲಿ ಸಿಖ್‌ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಸಂಚು ಆರೋಪ

- Advertisement -
- Advertisement -

ಕೆನಡಾದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿವಾದದ ಮಧ್ಯೆಯೇ ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಅವರ ಹತ್ಯೆಯನ್ನು ಮಾಡುವ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ಹೇಳಿಕೊಂಡಿದೆ.

ಯುಎಸ್ ಈ ಸಂಚನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಈ ವಿಷಯವನ್ನು ಭಾರತ ಸರ್ಕಾರದೊಂದಿಗೆ ಹಿರಿಯ ಮಟ್ಟದಲ್ಲಿ ಪ್ರಸ್ತಾಪಿಸಿದೆ ಎಂದು ಶ್ವೇತಭವನ ಬುಧವಾರ ತಿಳಿಸಿದೆ.

ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ ತನ್ನ ಹತ್ಯೆಯ ಸಂಚನ್ನು ಭಾರತ ಮಾಡಿದೆ ಮತ್ತು ಇದನ್ನು ಅಂತರಾಷ್ಟ್ರೀಯ ಭಯೋತ್ಪಾದನೆ ಎಂದು ಆರೋಪಿಸಿದ್ದಾರೆ. ಇದು ಯುಎಸ್ ಸಾರ್ವಭೌಮತ್ವ, ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ. ಆದ್ದರಿಂದ ನಾನು ಈ  ಬಗ್ಗೆ  ಪ್ರತಿಕ್ರಿಯಿಸಲು ಯುಎಸ್ ಸರ್ಕಾರಕ್ಕೆ ಹೇಳುತ್ತೇನೆ ಎಂದು ಪನ್ನುನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಕಳವಳ ವ್ಯಕ್ತಪಡಿಸಿದ್ದು, ಭಾರತ ಸರ್ಕಾರ ಈ ಸಂಚಿನ ಬಗ್ಗೆ ತಿಳಿದಿರಬಹುದು ಎಂದು ಹೇಳಿದೆ.

ಶ್ವೇತಭವನದ ವಕ್ತಾರ ಆಡ್ರಿಯೆನ್ ವ್ಯಾಟ್ಸನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ತಿಳಿಸಿದಾಗ ಭಾರತೀಯ ಅಧಿಕಾರಿಗಳು ಆಶ್ಚರ್ಯ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಮತ್ತು ಉನ್ನತ ಮಟ್ಟದಲ್ಲಿ ಭಾರತ ಸರ್ಕಾರದೊಂದಿಗೆ ಯುಎಸ್ ಸರ್ಕಾರವು ಇದನ್ನು ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ. ಈ ರೀತಿಯ ಚಟುವಟಿಕೆಯು ಅವರ ನೀತಿಯಲ್ಲ. ಭಾರತ ಸರ್ಕಾರವು ಈ ಸಮಸ್ಯೆಯನ್ನು ಮತ್ತಷ್ಟು ತನಿಖೆ ಮಾಡುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಅದರ ಬಗ್ಗೆ ಪ್ರತಿಕ್ರಿಯೆಯನ್ನು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬೆನ್ನಲ್ಲೇ ಅಮೇರಿಕದಲ್ಲಿ ಕೆನಡಾದ ಪ್ರಜೆ ಗುರ್ಪತ್‌ವಂತ್ ಸಿಂಗ್ ಪನ್ನುನ್ ಅವರನ್ನು ಕೊಲ್ಲುವ ಸಂಚನ್ನು ಯುಎಸ್ ವಿಫಲಗೊಳಿಸಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ಬುಧವಾರ ವರದಿ ಮಾಡಿದೆ.

ಅಮೆರಿಕದ ಅಧಿಕಾರಿಗಳು ಈ ಸಂಚಿನ ಬಗ್ಗೆ ಯಾವಾಗ ಅಥವಾ ಹೇಗೆ ತಿಳಿದುಕೊಂಡರು ಅಥವಾ ಆಪಾದಿತ ಹತ್ಯೆಯು ಹೇಗೆ ತಪ್ಪಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಶ್ವೇತಭವನವು ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದೆ.

ಈ ಮೊದಲು ಭಾರತ ಮತ್ತು ಕೆನಡಾ ಕೆನಡಾದಲ್ಲಿ ಖಲಿಸ್ತಾನ್ ಚಳವಳಿಯೊಂದಿಗೆ ಸಂಪರ್ಕವನ್ನು ಹೊಂದಿದ್ದ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಕೆನಡಾ ಪ್ರಧಾನಿಯ ಆರೋಪದ ಬಳಿಕ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಕೆನಡಾದ ಆರೋಪವನ್ನು ಭಾರತ ತಳ್ಳಿಹಾಕಿತ್ತು.

ಹತ್ಯೆಗೆ ಸಂಚು ಆರೋಪಿಸಿದ ಪನ್ನೂನ್, ಹರ್ದೀಪ್ ಸಿಂಗ್ ನಿಜ್ಜರ್‌ನಂತೆ ದಶಕಗಳ ಕಾಲದ ಸಿಖ್‌ ಪ್ರತ್ಯೇಕವಾದಿ ಪ್ರತಿಪಾದಕನಾಗಿದ್ದಾನೆ.

ಪನ್ನೂನ್ ಗಾರ್ಡಿಯನ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕೆನಡಾದಲ್ಲಿರುವ ಭಾರತೀಯ ಅಧಿಕಾರಿಗಳು ನಿಜ್ಜರ್ ಹತ್ಯೆಯ ತನಿಖೆಯನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಿಜ್ಜರ್‌ ಗುಂಡೇಟಿಗೆ ಬಲಿಯಾಗಿ 5 ತಿಂಗಳಾದರೂ ಯಾರನ್ನೂ ಬಂಧಿಸಲಾಗಿಲ್ಲ. ಸರಣಿ ಹತ್ಯೆಗಳ ಈ ತನಿಖೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಟೊರೊಂಟೊ ಅಥವಾ ವ್ಯಾಂಕೋವರ್‌ನಲ್ಲಿ ನಡೆದ ಸರಳವಾದ ಕೊಲೆಯಲ್ಲ. ಇದು ಖಲಿಸ್ತಾನ್ ಪರ ಕಾರ್ಯಕರ್ತನ ಸುಸಂಘಟಿತ ಕೊಲೆಯಾಗಿದೆ ಎಂದು ಹೇಳಿದ್ದರು.

ಇದನ್ನು ಓದಿ: ಕದನ ವಿರಾಮ: ಒತ್ತೆಯಾಳುಗಳ ಕುಟುಂಬಸ್ಥರಿಗೆ ನಿರಾಶೆ ಉಂಟು ಮಾಡಿದ ಇಸ್ರೇಲ್‌ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...