Homeಮುಖಪುಟಕದನ ವಿರಾಮ: ಒತ್ತೆಯಾಳುಗಳ ಕುಟುಂಬಸ್ಥರಿಗೆ ನಿರಾಶೆ ಉಂಟು ಮಾಡಿದ ಇಸ್ರೇಲ್‌ ಹೇಳಿಕೆ

ಕದನ ವಿರಾಮ: ಒತ್ತೆಯಾಳುಗಳ ಕುಟುಂಬಸ್ಥರಿಗೆ ನಿರಾಶೆ ಉಂಟು ಮಾಡಿದ ಇಸ್ರೇಲ್‌ ಹೇಳಿಕೆ

- Advertisement -
- Advertisement -

ಇಸ್ರೇಲ್ ಮತ್ತು ಹಮಾಸ್ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ನಡೆದಿದ್ದರೂ ಶುಕ್ರವಾರದ ಮೊದಲು ಪ್ಯಾಲೆಸ್ತೀನ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದ್ದಾರೆ. ಈ ಹೇಳಿಕೆಯಿಂದ ಗುರುವಾರ ಒತ್ತೆಯಾಳುಗಳು ಬಿಡುಗಡೆಯಾಗಲಿದ್ದಾರೆ ಎಂಬ ನಿರೀಕ್ಷಯಿಂದಿದ್ದ ಸಂಬಂಧಿಕರಲ್ಲಿ ನಿರಾಶೆ ಉಂಟು ಮಾಡಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ ಕನಿಷ್ಠ 4 ದಿನಗಳ ಕಾಲ ಕದನ ವಿರಾಮಕ್ಕೆ ಒಪ್ಪಿಗೆಯಾಗಿವೆ. ಮಾನವೀಯ ನೆರವು ಮತ್ತು ಇಸ್ರೇಲ್‌ನಲ್ಲಿ ಜೈಲಿನಲ್ಲಿರುವ ಕನಿಷ್ಠ 150 ಪ್ಯಾಲೆಸ್ತೀನಿಯಾದವರಿಗೆ ಬದಲಾಗಿ ಹಮಾಸ್‌ ಹಿಡಿದಿರುವ ಕನಿಷ್ಠ 50 ಒತ್ತೆಯಾಳುಗಳನ್ನು ಬಂಧನ ಮುಕ್ತಗೊಳಿಸುವುದಾಗಿ ಒಪ್ಪಂದವಾಗಿತ್ತು.

ಅ.7ರಂದು ಸೆರೆಯಾಗಿರಿಸಿದ ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡುವ ಸಮಯದ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ. ಗುರುವಾರ ಮಧ್ಯವರ್ತಿಗಳು ಬಿಡುಗಡೆಗೆ ಸಮಯವನ್ನು ಕೋರಿದ್ದಾರೆ ಎಂದು ಈಜಿಪ್ಟ್ ಭದ್ರತಾ ಮೂಲ ತಿಳಿಸಿದೆ.

ನಮ್ಮ ಒತ್ತೆಯಾಳುಗಳ ಬಿಡುಗಡೆಯ ಕುರಿತಾದ ಮಾತುಕತೆಗಳು ಮುಂದುವರಿಯುತ್ತಿವೆ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ತ್ಜಾಚಿ ಹನೆಗ್ಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಡುಗಡೆಯು ದ್ವಿಪಕ್ಷಗಳ ನಡುವಿನ ಮೂಲ ಒಪ್ಪಂದದ ಮೂಲಕ ನಡೆಯುತ್ತದೆ ಮತ್ತು ಶುಕ್ರವಾರದ ಮೊದಲು ಇದು ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಹಮಾಸ್ ಮತ್ತು ಮಧ್ಯವರ್ತಿ ಕತಾರ್ ಒಪ್ಪಂದಕ್ಕೆ ಸಹಿ ಹಾಕದ ಕಾರಣ 24 ಗಂಟೆಗಳ ವಿಳಂಬವಾಗಿದೆ ಎಂದು ಇಸ್ರೇಲ್‌ ಅಧಿಕಾರಿಯೋರ್ವರು ಹೇಳಿರುವ ಬಗ್ಗೆ ಇಸ್ರೇಲ್‌ನ ಮಾದ್ಯಮವೊಂದು ವರದಿ ಮಾಡಿದೆ.

ಮಾದ್ಯಮವನ್ನು ಹೊರತುಪಡಿಸಿ ನಾಳೆ ಒತ್ತೆಯಾಳುಗಳ ಬಿಡುಗಡೆ ನಡೆಯುತ್ತದೆ ಎಂದು ಯಾರೂ ಹೇಳಿಲ್ಲ.  ಶುಕ್ರವಾರದ ಮೊದಲು ಯಾವುದೇ ಬಿಡುಗಡೆಗೆ ತೀರ್ಮಾನಿಸಲಾಗಿಲ್ಲ ಎಂದು ಇಸ್ರೇಲ್‌ ಪ್ರಧಾನ ಮಂತ್ರಿಯ ಕಚೇರಿಯ ಮಾಹಿತಿ ಉಲ್ಲೇಖಿಸಿ ಇಸ್ರೇಲ್‌ ಮಾದ್ಯಮಗಳು ವರದಿ ಮಾಡಿದೆ.

ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ರಾಕೆಟ್‌ ದಾಳಿ ನಡೆಸಿದ ಬಳಿಕ 1,200 ಮಂದಿ ಇಸ್ರೇಲ್‌ ಪ್ರಜೆಗಳು ಮೃತಪಟ್ಟಿದ್ದರು. 240 ಮಂದಿ ಒತ್ತೆಯಾಳುಗಳು ಇನ್ನೂ ಹಮಾಸ್‌ ಸೆರೆಯಲಿದ್ದಾರೆ. ಈ ಮೊದಲು ಹಮಾಸ್‌  ಐವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು.

ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ದಾಳಿ ಆರಂಭಿಸಿದ ಬಳಿಕ ಪ್ಯಾಲೆಸ್ತೀನ್‌ನಲ್ಲಿ ಸುಮಾರು 14,000ಕ್ಕೂ ಅಧಿಕ  ನಾಗರಿಕರ ಹತ್ಯೆಯಾಗಿದ್ದು, ಅದರಲ್ಲಿ 40% ಮಕ್ಕಳು ಸೇರಿದ್ದಾರೆ ಎಂದು ಹಮಾಸ್‌ ವಕ್ತಾರರು ಮಾಹಿತಿ ನೀಡಿದ್ದಾರೆ.

ಬುಧವಾರ ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಒಪ್ಪಂದದ ಅನುಷ್ಠಾನದಲ್ಲಿ ಸಂಭಾವ್ಯ ವಿಳಂಬದ ಬಗ್ಗೆ ನೆತನ್ಯಾಹು ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ. ರೆಡ್ ಕ್ರಾಸ್‌ ಗಾಝಾದಲ್ಲಿ ಉಳಿದಿರುವ  ಒತ್ತೆಯಾಳುಗಳನ್ನು ಭೇಟಿ ಮಾಡಲಿದೆ. ಒತ್ತೆಯಾಳುಗಳು ಜೀವಂತವಾಗಿದ್ದಾರೆಯೇ ಎಂದು ನಾವು ತಿಳಿದುಕೊಳ್ಳಬೇಕು ಎಂದು ಗಿಲಾಡ್ ಕೊರ್ನ್ಗೋಲ್ಡ್ ಹೇಳಿದ್ದಾರೆ. ಅವರ 3 ವರ್ಷದ ಮೊಮ್ಮಗಳು ಸೇರಿದಂತೆ ಅವರ ಕುಟುಂಬದ 7 ಸದಸ್ಯರನ್ನು ಹಮಾಸ್‌ ಒತ್ತೆಯಾಳಾಗಿಟ್ಟುಕೊಂಡಿದೆ.

ಯುದ್ಧ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ, ಎಲ್ಲರೂ ವಾಪಾಸ್ಸು ಬರಬೇಕೆಂದು ನಾವು ಆಶಿಸುತ್ತೇವೆ. ತುಂಬಾ ಕಠಿಣ ನಿರ್ಧಾರ. ಆದರೆ ಮಕ್ಕಳು ಮತ್ತು ಮಹಿಳೆಯರ ಬಿಡುಗಡೆಯಾಗಬೇಕು. ಅವರು ಅತ್ಯಂತ ದುರ್ಬಲರಾಗಿದ್ದಾರೆ. ಇದಾದರೆ ಹೆಚ್ಚಿನ ಸಂಖ್ಯೆಯಲ್ಲಿ ಮಾನವೀಯ ನೆರವನ್ನು ಗಾಝಾಗೆ ತಲುಪಿಸಲಾಗುವುದು ಎಂದು ಅಮೆರಿಕ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...