Homeಮುಖಪುಟಬಿಜೆಪಿಗೆ ಮತ ಹಾಕದವರಿಗೆ ನೀರಿಲ್ಲ: ಮಧ್ಯಪ್ರದೇಶದಲ್ಲಿ ಆಘಾತಕಾರಿ ಬೆಳವಣಿಗೆ

ಬಿಜೆಪಿಗೆ ಮತ ಹಾಕದವರಿಗೆ ನೀರಿಲ್ಲ: ಮಧ್ಯಪ್ರದೇಶದಲ್ಲಿ ಆಘಾತಕಾರಿ ಬೆಳವಣಿಗೆ

- Advertisement -
- Advertisement -

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ನ.17ರಂದು ಶಾಂತಿಯುತವಾಗಿ ಮತದಾನ ನಡೆದಿದೆ. ಆದರೆ ಇದಾದ ಕೇವಲ 2 ದಿನಗಳಲ್ಲೇ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ಆಘಾತಕಾರಿ ಬೆಳವಣಿಗೆ ಕಂಡು ಬಂದಿದ್ದು, ಸರಕಾರಿ ಬೋರ್‌ವೆಲ್‌ನಿಂದ ನೀರು ತೆಗೆಯಬೇಕಿದ್ದರೆ ಬಿಜೆಪಿಗೆ ಮತ ಹಾಕಿದ್ದೇವೆ ಎಂದು ಪ್ರಮಾಣ ವಚನ ಮಾಡುವಂತೆ ಮಹಿಳೆಯರಿಗೆ ಸೂಚಿಸಲಾಗಿದೆ.

ಬಿಜೆಪಿಯ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಪ್ರತಿನಿಧಿಸುವ ಮುಂಗಾವಲಿ ವಿಧಾನಸಭಾ ಕ್ಷೇತ್ರದ ನಯಖೇಡಾ ಗ್ರಾಮದಲ್ಲಿ ಘಟನೆ ನಡೆದಿದೆ.

ಇದು ಸರ್ಕಾರಿ ಬೋರ್‌ವೆಲ್, ನಾನು ಗ್ರಾಮದಲ್ಲಿ 4 ಕೊಳವೆಬಾವಿಯನ್ನು ಮಾಡಿಸಿ ಎಲ್ಲರಿಗೂ ನೀರು ಒದಗಿಸಲು ವ್ಯವಸ್ಥೆ ಮಾಡಿದ್ದೇನೆ. ಚುನಾವಣೆ ನಂತರ ಇಂತಹ ಘಟನೆ ಏಕೆ ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.

ಶ್ಯಾಮ್ ಬಾಯಿ ಎಂಬವರು ಈ ಕುರಿತು ಪ್ರತಿಕ್ರಿಯಿಸಿದ್ದು, ಅವರು ಗ್ರಾಮಸ್ಥರಲ್ಲಿ ಬಿಜೆಪಿಗೆ ಮತ ಹಾಕಿದ್ದಾರೋ ಇಲ್ಲವೋ ಎಂದು ಕೇಳುತ್ತಾರೆ. ನಾವು ಇಲ್ಲ ಎಂದರೆ  ಮೋಟಾರ್ ಸ್ವಿಚ್ ಆಫ್ ಮಾಡಿ ನಮ್ಮನ್ನು ಕಳುಹಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಮತ್ತೋರ್ವ ಯುವತಿ ಈ ಬಗ್ಗೆ ಮಾತನಾಡಿದ್ದು, ಮತದಾನದ ನಂತರ ಅವರು ಬೋರ್‌ವೆಲ್‌ ರನ್ನಿಂಗ್‌ನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ರಾತ್ರಿ ವೇಳೆಯಲ್ಲಿ ನಮಗೆ ತಿಳಿಯದ ಸಮಯದಲ್ಲಿ ಸ್ವಿಚ್ ಆನ್‌ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಇತರ ಗ್ರಾಮಸ್ಥರು ಕೂಡ ಇದೇ ರೀತಿಯ ದೂರುಗಳನ್ನು ನೀಡಿದ್ದಾರೆ. ಕಮಲ ಚಿಹ್ನೆಗೆ ಮತ ಹಾಕದಿದ್ದರೆ ನೀರು ಕೊಡುವುದಿಲ್ಲ ಎಂದು ಹೇಳಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದು, ಬಿಜೆಪಿಯ ಕ್ರೌರ್ಯದ ಪರಮಾವಧಿ ನೋಡಿ, ಮತ ಹಾಕದವರನ್ನು ನೀರಿಲ್ಲದೆ ಕೊಲ್ಲಲು ಮುಂದಾಗಿದ್ದಾರೆ. 18ವರೆ ವರ್ಷಗಳ ನಂತರ ದುಷ್ಕೃತ್ಯಗಳ ಎಲ್ಲಾ ಮಿತಿಗಳನ್ನು ದಾಟಿದ ಬಿಜೆಪಿಗೆ ಇನ್ನೂ ಸಮಾಧಾನವಾಗಿಲ್ಲ. ಭ್ರಷ್ಟಾಚಾರ, ದುರಾಡಳಿತ ಮತ್ತು ದೌರ್ಜನ್ಯಗಳಿಗೆ ಮಧ್ಯಪ್ರದೇಶದ ಜನರು ತಮ್ಮ ಉತ್ತರವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಗೆ ನ.17ರಂದು ಮತಾದಾನ ನಡೆದಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಡಿ.3ರಂದು ಪ್ರಕಟವಾಗಲಿದೆ.

ಇದನ್ನು ಓದಿ: ಕಿರುಕುಳ ನೀಡುವ ಉದ್ದೇಶದಿಂದ ನನ್ನ ವರ್ಗಾವಣೆ ಮಾಡಲಾಗಿತ್ತು: ಜಸ್ಟಿಸ್‌ ದಿವಾಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...