Homeಮುಖಪುಟಕಿರುಕುಳ ನೀಡುವ ಉದ್ದೇಶದಿಂದ ನನ್ನ ವರ್ಗಾವಣೆ ಮಾಡಲಾಗಿತ್ತು: ಜಸ್ಟಿಸ್‌ ದಿವಾಕರ್

ಕಿರುಕುಳ ನೀಡುವ ಉದ್ದೇಶದಿಂದ ನನ್ನ ವರ್ಗಾವಣೆ ಮಾಡಲಾಗಿತ್ತು: ಜಸ್ಟಿಸ್‌ ದಿವಾಕರ್

- Advertisement -
- Advertisement -

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ಛತ್ತೀಸ್‌ಗಢ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ನನ್ನ ವರ್ಗಾವಣೆಯನ್ನು ಕಿರುಕುಳ ನೀಡುವ ಉದ್ದೇಶದಿಂದ ಮಾಡಿತ್ತು ಎಂದು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಹೇಳಿದ್ದಾರೆ.

2009ರ ಮಾ.31ರಂದು ನನ್ನನ್ನು ಛತ್ತೀಸಗಢ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಳಿಸಲಾಗಿದೆ. ನಾನು ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ ಅ.2018ರವರೆಗೆ ನ್ಯಾಯಾಧೀಶನಾಗಿ ತೃಪ್ತಿಯಿಂದ ಕೆಲಸ ನಿರ್ವಹಿಸಿದ್ದೇನೆ. ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಲಹಾಬಾದ್ ಹೈಕೋರ್ಟ್‌ಗೆ ನನ್ನನ್ನು ದಿಡೀರ್‌ ವರ್ಗಾವಣೆ ಮಾಡಿದರು. ನನಗೆ ಈವರೆಗೆ ಯಾಕೆ ವರ್ಗಾವಣೆ ಮಾಡಿದ್ದಾರೆ ಎಂದು ಗೊತ್ತಿಲ್ಲ, ನಾನು 2018ರ ಅ.3ರಂದು ಅಧಿಕಾರವನ್ನು ವಹಿಸಿಕೊಂಡೆ ಎಂದು ಜಸ್ಟಿಸ್ ಪ್ರಿತಿಂಕರ್ ದಿವಾಕರ್ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.

ನನಗೆ ಕಿರುಕುಳ ನೀಡುವ ದುರುದ್ದೇಶದಿಂದ ನನ್ನ ವರ್ಗಾವಣೆ ಆದೇಶವನ್ನು ಹೊರಡಿಸಲಾಗಿದೆ ಎಂದು ತೋರುತ್ತಿದೆ. ಆದರೆ ಅದೃಷ್ಟವಶಾತ್ ನನ್ನ ಸಹವರ್ತಿ ನ್ಯಾಯಾಧೀಶರು ಮತ್ತು ವಕೀಲರು ನನಗೆ ಅಪಾರ ಬೆಂಬಲ ಮತ್ತು ಸಹಕಾರ ನೀಡಿದ್ದರಿಂದ ವರ್ಗಾವಣೆಯು ನನಗೆ ವರವಾಗಿ ಪರಿಣಮಿಸಿತು ಎಂದು ಅವರು ಹೇಳಿದ್ದಾರೆ.

ಈ ಮೊದಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪ್ರಸ್ತುತ ಕೊಲಿಜಿಯಂ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾಯಮೂರ್ತಿ ದಿವಾಕರ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ದಿವಾಕರ್, ನ.1 2000ದಂದು ಛತ್ತೀಸ್‌ಗಢದ ಹೈಕೋರ್ಟ್ ಅಸ್ತಿತ್ವಕ್ಕೆ ಬಂದಿತ್ತು. ಹೀಗಾಗಿ ನಾನು ಬಿಲಾಸ್‌ಪುರಕ್ಕೆ ಸ್ಥಳಾಂತರಗೊಂಡೆ. 2009ರಲ್ಲಿ ಕೊಲಿಜಿಯಂ ನನಗೆ ನ್ಯಾಯಾಧೀಶರ ಸ್ಥಾನವನ್ನು ನೀಡಿದಾಗ, ನಾನು ಅಂತಹ ಪ್ರಸ್ತಾಪವನ್ನು ಸ್ವೀಕರಿಸಲು ಆರಂಭದಲ್ಲಿ ಹಿಂಜರಿದಿದ್ದೆ. ಆದರೆ ಅಂತಿಮವಾಗಿ ನನ್ನ ಕುಟುಂಬ ಮತ್ತು ಹಿತೈಷಿಗಳೊಂದಿಗೆ  ಚರ್ಚೆಯ ನಂತರ ನಾನು ನ್ಯಾಯಾಧೀಶರಾಗಲು ನನ್ನ ಒಪ್ಪಿಗೆಯನ್ನು ನೀಡಿದ್ದೇನೆ. ವಿಶಿಷ್ಟವಾದ ಕಾರ್ಯಶೈಲಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ಈ ಮಹಾನ್ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಯಾವಾಗಲೂ ಹೆಮ್ಮೆಯ ವಿಷಯವಾಗಿದೆ ಎಂದು ನ್ಯಾಯಮೂರ್ತಿ ದಿವಾಕರ್ ಹೇಳಿದರು.

ಭಾರೀ ಕೆಲಸದ ಹೊರೆಯನ್ನು ಸಮತೋಲನಗೊಳಿಸುವುದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಒಂದು ಸವಾಲಾಗಿದೆ. ಇದಲ್ಲದೆ ಈ ನ್ಯಾಯಾಲಯವು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ  ಟೀಕೆಗೆ ಒಳಗಾಗಿತ್ತು. ಆದರೆ ಟೀಕೆ ಮಾಡುವವರು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರುವ ಮೊದಲು ಅಲ್ಲಿನ ಚಾಲ್ತಿಯಲ್ಲಿರುವ ತೊಂದರೆಗಳು ಮತ್ತು ನ್ಯೂನತೆಗಳ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ: ಪ್ರತಿ ಪ್ರೊಡಕ್ಟ್‌ಗೆ 1 ಕೋಟಿ ದಂಡ ಹಾಕುತ್ತೇವೆ: ಬಾಬಾ ರಾಮ್‌ ದೇವ್‌ಗೆ ಕೋರ್ಟ್ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಹಿಂಸೆಗೆ ಪ್ರಚೋದಿಸುವ, ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ

0
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಈ ಮಧ್ಯೆ ತಪ್ಪು ಮಾಹಿತಿಯನ್ನು ಹರಡುವ ಸುದ್ದಿಗಳು,  ವೀಡಿಯೊಗಳು ದೇಶದ ಸಾಮರಸ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಲವಾರು...