Homeಮುಖಪುಟಕೆನಡಿಯನ್ನರಿಗೆ ಇ-ವೀಸಾ ಸೇವೆ ಪುನರಾರಂಭಿಸಿದ ಭಾರತ

ಕೆನಡಿಯನ್ನರಿಗೆ ಇ-ವೀಸಾ ಸೇವೆ ಪುನರಾರಂಭಿಸಿದ ಭಾರತ

- Advertisement -
- Advertisement -

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಎಲ್ಲಾ ವೀಸಾ ಸೇವೆಗಳನ್ನು ನಿಲ್ಲಿಸಲಾಗಿತ್ತು. ಮತ್ತೆ ಇದೀಗ ಭಾರತವು ಕೆನಡಾದ ಪ್ರಜೆಗಳಿಗೆ ಇ-ವೀಸಾ ಅರ್ಜಿಗಳನ್ನು ನೀಡಲು ಪ್ರಾರಂಭಿಸಿದೆ.

ಯಾವುದೇ ಪ್ರಕಟಣೆ ಇಲ್ಲದಿದ್ದರೂ, ಕೆನಡಾದ ಪ್ರಜೆಗಳಿಗೆ ಇ-ವೀಸಾ ಸೇವೆಗಳನ್ನು ಬುಧವಾರ ಪುನರಾರಂಭಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 21ರಂದು, ರಾಜತಾಂತ್ರಿಕ ಸಿಬ್ಬಂದಿಗೆ ‘ಭದ್ರತಾ ಬೆದರಿಕೆ’ ಇದೆ ಎನ್ನುವ ಆರೋಪವನ್ನು ಉಲ್ಲೇಖಿಸಿ ಭಾರತವು ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತು. ಭಾರತೀಯ ರಾಜತಾಂತ್ರಿಕರು ವೀಸಾಗಳನ್ನು ನೀಡುವುದು ಸುರಕ್ಷಿತವಲ್ಲ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದರು. ನವದೆಹಲಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದರೂ ಭಾರತವು ಕೆನಡಿಯನ್ನರಿಗೆ ಇ-ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು.

ಇದೀಗ ಭದ್ರತಾ ಪರಿಶೀಲನೆ ಮಾಡಿದ ಬಳಿಕ ಕೆಲವು ಇತ್ತೀಚಿನ ಕೆನಡಾದ ಕ್ರಮಗಳನ್ನು ಗಣನೆಗೆ ತೆಗೆದುಕೊಂಡು ಪ್ರವೇಶ, ವ್ಯಾಪಾರ, ವೈದ್ಯಕೀಯ ಮತ್ತು ಕಾನ್ಫರೆನ್ಸ್ ವೀಸಾಗಳಿಗಾಗಿ ಸೇವೆಗಳನ್ನು ಭಾಗಶಃ ಪುನರಾರಂಭಿಸುವುದಾಗಿ ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಘೋಷಿಸಿದೆ.

ಭಾರತೀಯ ರಾಜತಾಂತ್ರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಗಣನೀಯ “ಪ್ರಗತಿ” ಕಂಡುಬಂದಲ್ಲಿ ನವದೆಹಲಿಯು ವೀಸಾ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತದೆ ಎಂದು ಈ ಹಿಂದೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದರು.

ಇದನ್ನೂ ಓದಿ: 50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ 4 ದಿನ ಯುದ್ಧ ವಿರಾಮ: ಇಸ್ರೇಲ್ ಒಪ್ಪಿಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...