Homeಮುಖಪುಟರಾಹುಲ್ ಗಾಂಧಿ ಹೋರಾಟಗಾರ, ಆಯೋಗದ ನೋಟಿಸ್‌ಗೆ ಉತ್ತರ ನೀಡುತ್ತಾರೆ: ಸುಪ್ರಿಯಾ ಸುಳೆ

ರಾಹುಲ್ ಗಾಂಧಿ ಹೋರಾಟಗಾರ, ಆಯೋಗದ ನೋಟಿಸ್‌ಗೆ ಉತ್ತರ ನೀಡುತ್ತಾರೆ: ಸುಪ್ರಿಯಾ ಸುಳೆ

- Advertisement -
- Advertisement -

”ರಾಹುಲ್ ಗಾಂಧಿ ಒಬ್ಬ ಹೋರಾಟಗಾರನಾಗಿದ್ದು, ಚುನಾವಣಾ ಆಯೋಗದ ನೋಟಿಸ್‌ಗೆ ಗೌರವಯುತ ಮತ್ತು ಪ್ರಾಮಾಣಿಕವಾಗಿ ಉತ್ತರ ನೀಡಲಿದ್ದಾರೆ” ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಪನ್‌” (ಅಪಶಕುನ) ಎಂದು ಹೇಳಿದ್ದಕ್ಕಾಗಿ ಹಾಗೂ ಮೋದಿ ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಜೇಬುಗಳ್ಳತನ’ದ ಬಗ್ಗೆ ಉಲ್ಲೇಖಿಸಿದ್ದಕ್ಕಾಗಿ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಪ್ರಿಯಾ ಸುಳೆ ಅವರು, ‘ರಾಹುಲ್ ಅವರು ಪ್ರಾಮಾಣಿಕ ಉತ್ತರವನ್ನು ನೀಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಅವರು ಪ್ರಾಮಾಣಿಕರಾಗಿರುವುದರಿಂದ ನಿರ್ಭೀತಿಯಿಂದ ಇರುತ್ತಾರೆ” ಎಂದು ತಿಳಿಸಿದ್ದಾರೆ.

”ಬಿಜೆಪಿಗರು ಜವಾಹರಲಾಲ್ ನೆಹರೂ ಕುಟುಂಬದ ಬಗ್ಗೆ ಮಾತನಾಡಿದ ಹಲವು ಉದಾಹರಣೆಗಳಿವೆ. ಹಾಗಾಗಿ ಅವರು (ಬಿಜೆಪಿಗರು) ಏನಾದರೂ ಮಾತನಾಡಿದರೆ ಬೇಸರಗೊಳ್ಳುವ ಅಗತ್ಯವೇನಿದೆ?” ಎಂದು ಸುಪ್ರಿಯಾ ಪ್ರಶ್ನಿಸಿದ್ದಾರೆ.

ಹಿನ್ನೆಲೆ: 

ಸಾರ್ವಜನಿಕ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಪನೌಟಿ (ಕೆಟ್ಟ ಶಕುನ) ಮತ್ತು ಜೈಬ್‌ಕತ್ರಾ (ಪಿಕ್‌ಪಾಕೆಟ್) ಎಂದು ಕರೆದಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.

ಭಾನುವಾರ ನಡೆದ ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಭಾರತ ಸೋಲಿ ಕಂಡಿತು. ಈ ಪಂದ್ಯ ವೀಕ್ಷಿಸಲು ಪ್ರಧಾನಿ ಮೋದಿ ಹೋಗಿರುವುದನ್ನು ಉಲ್ಲೇಖಿಸಿ ಮೋದಿಯನ್ನು ಕೆಟ್ಟ ಶಕುನ ಎಂದು ಕರೆದರು.

”ಭಾರತದ ಪ್ರಧಾನಮಂತ್ರಿ ಕೆಟ್ಟ ಶಕುನ ಎಂದು ಹೇಳುವುದು ಅತ್ಯಂತ ಖಂಡನೀಯ. ಆಟದಲ್ಲಿ ಸಾಮರ್ಥ್ಯ ಇರುವ ತಂಡ ಗೆಲುವು ಸಾಧಿಸುತ್ತದೆ” ಎಂದು ಬಿಜೆಪಿ ಹೇಳಿದೆ.

ಕೋಟ್ಯಾಧಿಪತಿಗಳ ಸಾಲ ಮನ್ನಾ ಕುರಿತು ಗಾಂಧಿಯವರ ಹೇಳಿಕೆಗಳನ್ನು ಉಲ್ಲೇಖಿಸಿ, ಮೋದಿ ಯಾವುದೇ ಸಾಲವನ್ನು ಮನ್ನಾ ಮಾಡಿಲ್ಲ ಮತ್ತು ಬದಲಿಗೆ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆದೇಶದಂತೆ ಅನುತ್ಪಾದಕ ಆಸ್ತಿಗಳಿಗೆ (ಎನ್‌ಪಿಎ) ನಿಬಂಧನೆಗಳನ್ನು ಮಾಡಬೇಕಾಗಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಹೇಳಿದೆ.

1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123(4) (ಸುಳ್ಳು ಹೇಳಿಕೆಗಳ ಪ್ರಕಟಣೆಗೆ ಸಂಬಂಧಿಸಿದಂತೆ ಭ್ರಷ್ಟ ಆಚರಣೆಗಳು), ಸೆಕ್ಷನ್ 171G (ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಗಳು), 504 (ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು), 499 (ಮಾನನಷ್ಟ) ಭಾರತೀಯ ದಂಡ ಸಂಹಿತೆಯ (IPC), ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಪ್ರಕರಣ ದಾಖಲಿಸುವಂತೆ ಬಿಜೆಪಿ ಕೇಳಿದೆ.

ಬಿಜೆಪಿ ನಿಯೋಗವು ಮುಖ್ಯ ಚುನಾವಣಾ ಆಯುಕ್ತರಿಗೆ ಬುಧವಾರ ಖುದ್ದಾಗಿ ದೂರು ಸಲ್ಲಿಸಿದೆ.

ಆಯೋಗ ನೀಡಿದ ನೋಟಿಸ್‌ನಲ್ಲಿ ಏನಿದೆ? 

ರಾಜಕೀಯ ವಿರೋಧಿಗಳನ್ನು ಉದ್ದೇಶಿಸಿ ಆಧಾರವಿಲ್ಲದೆ ಮಾತನಾಡುವುದು ನೀತಿ ಸಂಹಿತೆಗೆ ವಿರುದ್ಧ ಎಂದು ಆಯೋಗವು ರಾಹುಲ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.

ರಾಹುಲ್ ಅವರು ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ಪದಗಳನ್ನು ಬಳಸಿದ್ದರು. “ಅಪಶಕುನ ಎಂದು ಹೇಳಿರುವುದು, ನಿಷೇಧಿಸಿರುವ ಮಾತುಗಳ ವ್ಯಾಪ್ತಿಗೆ ಬರುತ್ತದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ ಎಂದು ಅಯೋಗವು ಹೇಳಿದೆ.

ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಹಾಗೆಯೇ, ವ್ಯಕ್ತಿಯು ತಾನು ಸಂಪಾದಿಸಿರುವ ಕೀರ್ತಿಯನ್ನು ಕಾಪಾಡಿಕೊಳ್ಳುವ ಹಕ್ಕನ್ನು ಕೂಡ ಹೊಂದಿರುತ್ತಾನೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕೀರ್ತಿಯನ್ನು ಕಾಪಾಡಿಕೊಳ್ಳುವ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಿರುವುದು ಸಾಂವಿಧಾನಿಕ ಅಗತ್ಯ ಎಂದು ಆಯೋಗ ಹೇಳಿದೆ.

“ನಿಮ್ಮ ವಿರುದ್ಧದ ದೂರಿಗೆ ವಿವರಣೆ ನೀಡಬೇಕು. ನೀತಿ ಸಂಹಿತೆಯ ಉಲ್ಲಂಘನೆಯ ಆರೋಪಕ್ಕೆ ಪ್ರತಿಯಾಗಿ, ನಿಮ್ಮ ವಿರುದ್ಧ ಕ್ರಮವನ್ನು ಏಕೆ ಜರುಗಿಸಬಾರದು ಎಂಬುದಕ್ಕೆ ಉತ್ತರ ನೀಡಬೇಕು’ ಎಂದು ಆಯೋಗ ಹೇಳಿದೆ. ಶನಿವಾರ ಸಂಜೆಯೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿದೆ. ಉತ್ತರ ಬಾರದಿದ್ದರೆ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ: ಮೋದಿ ‘ಕೆಟ್ಟ ಶಕುನ’ ಎಂದ ರಾಹುಲ್: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...