Homeಮುಖಪುಟಛತ್ತೀಸ್‌ಗಢದಲ್ಲಿ ಬಿಜೆಪಿ 15 ಸೀಟ್ ಗೆದ್ದು ತೋರಿಸಲಿ: ಸಿಎಂ ಬಘೇಲ್ ಸವಾಲ್

ಛತ್ತೀಸ್‌ಗಢದಲ್ಲಿ ಬಿಜೆಪಿ 15 ಸೀಟ್ ಗೆದ್ದು ತೋರಿಸಲಿ: ಸಿಎಂ ಬಘೇಲ್ ಸವಾಲ್

- Advertisement -
- Advertisement -

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 55 ಸೀಟ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಹಾಲಿ ಸಿಎಂ ಭೂಪೇಶ್ ಬಘೇಲ್ ತಿರುಗೇಟು ನೀಡಿದ್ದಾರೆ. ಅವರು (ಬಿಜೆಪಿ) 15 ಸೀಟ್ ಗೆಲ್ಲಲ್ಲಿ ನೋಡೊಣ ಎಂದಿದ್ದಾರೆ.

ರಮಣ್ ಸಿಂಗ್ ಅವರ ಜನಪ್ರಿಯತೆ ಉತ್ತುಂಗದಲ್ಲಿದ್ದಾಗಲೇ ಬಿಜೆಪಿ 52 ಸೀಟ್ ಗೆದ್ದಿಲ್ಲ. ಹಾಗಿರುವಾಗ ಈಗ ಗೆಲ್ಲಲು ಹೇಗೆ ಸಾಧ್ಯ? ಇದೆಲ್ಲ ಬೋಗಸ್ ಹೇಳಿಕೆ. ಅವರು ತಮ್ಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿ ಚುನಾವಣೆಯಲ್ಲಿ 15 ಸೀಟ್ ಗೆದ್ದು ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.

ಛತ್ತೀಸ್‌ಗಢದ ವಿಧಾನಸಭೆ ಚುನಾವಣೆಯ ಮತದಾನ ನವೆಂಬರ್‌ 7 ಮತ್ತು 17 ರಂದು ನಡೆದಿದೆ. ಆ ಬಳಿಕ ಮಾಜಿ ಸಿಎಂ ರಮಣ್ ಸಿಂಗ್ ಬಿಜೆಪಿ ಜಯಗಳಿಸಿ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಮಣ್ ಸಿಂಗ್ ಹೇಳಿಕೆಯನ್ನು ಸಿಎಂ ಭೂಪೇಶ್ ಬಘೇಲ್ ವ್ಯಂಗ್ಯವಾಡಿದ್ದಾರೆ.

ಮೊದಲ ಹಂತದಲ್ಲಿ ಛತ್ತೀಸ್‌ಗಢದ ಬಸ್ತಾರ್‌ ಜಿಲ್ಲೆಯ 12 ಮತ್ತು ರಾಜ್‌ನಂದಗಾಂವ್‌ನ 8 ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 20 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಉಳಿದ 90 ಕ್ಷೇತ್ರಗಳಿಗೆ ನವೆಂಬರ್ 17 ರಂದು ಎರಡನೇ ಹಂತದಲ್ಲಿ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಮತದಾನ ನಡೆದ 20 ಸ್ಥಾನಗಳಲ್ಲಿ ಬಿಜೆಪಿ ಕನಿಷ್ಠ 14 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಮಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ : ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ಮಸೂದೆ ಬಾಕಿ ಉಳಿಸುವಂತಿಲ್ಲ: ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read