ಗೋಮಾಂಸ ಸೇವಿಸುತ್ತಿದ್ದಾಳೆ, ಹಿಜಾಬ್ ಧರಿಸುತ್ತಿದ್ದಾಳೆ ಎಂದು 7ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕಿ ಕಿರುಕುಳ ನೀಡಿದ ಘಟನೆ ತಮಿಳುನಾಡಿನ ಅಶೋಕಪುರಂನಲ್ಲಿ ನಡೆದಿದೆ. ಈ ಸಂಬಂಧ ವಿದ್ಯಾರ್ಥಿಯನಿಯ ಪೋಷಕರು ಮುಖ್ಯ ಶಿಕ್ಷಣಾಧಿಕಾರಿಗೆ ಗುರುವಾರ ದೂರು ನೀಡಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಗೋಮಾಂಸ ಸೇವಿಸಿ, ಹಿಜಾಬ್ ಧರಿಸಿ ಬರುವುದು ಶಿಕ್ಷಕಿ ಅಭಿನಯ ರಾಜ್‌ಕುಮಾರ್‌ಗೆ ಇಷ್ಟವಿಲ್ಲ. ಆಕೆ, ಪರೋಕ್ಷವಾಗಿ ಅಲ್ಪ ಸಂಖ್ಯಾತ ಮಕ್ಕಳನ್ನು ಗುರಿಯಾಗಿಸಿ ಕಳೆದ ಕೆಲ ತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾಳೆ ಎಂದು ಪೋಷಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
“ಎರಡು ತಿಂಗಳ ಹಿಂದೆ ಶಿಕ್ಷಕಿ ನಮ್ಮ ಮಗುವಿನ ಜೊತೆ ನಮ್ಮ ಉದ್ಯೋಗದ ಕುರಿತು ಕೇಳಿದ್ದರು. ನಮ್ಮ ಮಗಳು ನಾವು ಗೋಮಾಂಸ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಆ ಬಳಿಕ ಗೋಮಾಂಸ ಸೇವನೆ ಕಾರಣ ನೀಡಿ ಶಿಕ್ಷಕಿ ನಮ್ಮ ಮಗಳಿಗೆ ಥಳಿಸಿದ್ದಾರೆ. ನಾವು ಈ ವಿಷಯವನ್ನು ಶಾಲೆಯ ಮುಖ್ಯೋಪಾಧ್ಯಾಯನಿ ರಾಜೇಶ್ವರಿ ಬಳಿ ತಿಳಿಸಿದರೂ, ಆಕೆ ಶಿಕ್ಷಕಿಯ ಪರ ಮಾತನಾಡಿದ್ದಾರೆ. ಹಾಗಾಗಿ, ನಾವು ಶಿಕ್ಷಣಾಧಿಕಾರಿಗೆ ದೂರು ನೀಡಿದ್ದೇವೆ” ಎಂದು ವಿದ್ಯಾರ್ಥಿನಿಯ ತಂದೆ ಹುಸೇನ್ ಹೇಳಿದ್ದಾರೆ.
ಶಿಕ್ಷಕಿ ವಿದ್ಯಾರ್ಥಿಗಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿರುವ ವಿಚಾರ ತಿಳಿದು ಸಹಾಯಕ ಪೊಲೀಸ್ ಕಮಿಷನರ್ ಮತ್ತು ಸ್ಥಳೀಯ ಪೊಲೀಸರು ಶಾಲೆಗೆ ಭೇಟಿ ನೀಡಿ ನಮ್ಮ ಮಗುವಿನ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದರು. ಆದರೆ, ಆ ಬಳಿಕವೂ ಶಿಕ್ಷಕಿಯ ಕಿರುಕುಳ ಮುಂದುವರೆದಿದೆ. ಶಿಕ್ಷಕಿ ನಮ್ಮ ಮಗುವಿಗೆ ಫರ್ದಾ (ಹಿಜಾಬ್/ ಬುರ್ಖಾ) ಬಳಸಿ ಇತರ ಮಕ್ಕಳ ಶೂ ಸ್ವಚ್ಚಗೊಳಿಸುವಂತೆ ಬಲವಂತ ಮಾಡಿದ್ದಾರೆ. ಅಲ್ಲದೆ ಕಪಾಳಮೋಕ್ಷ ಮಾಡಿದ್ದಾರೆ. ಮಗುವಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹುಸೇನ್ ಆರೋಪಿಸಿದ್ದಾರೆ.
ವಿದ್ಯಾರ್ಥಿಯನಿಯ ಪೋಷಕರ ದೂರು ಸ್ವೀಕರಿಸಿರುವ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ವರದಿಗಳ ಪ್ರಕಾರ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಮತಗಟ್ಟೆಗೆ ನುಗ್ಗಿ ಏಜೆಂಟರ ಮೇಲೆ ಹಲ್ಲೆ



Why should any teacher think of the food children consume? It is not her concern, actually this teacher has a anti muslim agenda and definitely the hate Muslims campaigns across the country by hindutva fundamentalists is at work. She doesn’t deserve to be a teacher and be shown the door. She may join the political outfit that she identifies with.