Homeಮುಖಪುಟಯುದ್ಧ ಭೀಕರತೆ: ಗಾಝಾದಲ್ಲಿ ಪತ್ರಕರ್ತರ ಹತ್ಯಾಕಾಂಡ

ಯುದ್ಧ ಭೀಕರತೆ: ಗಾಝಾದಲ್ಲಿ ಪತ್ರಕರ್ತರ ಹತ್ಯಾಕಾಂಡ

- Advertisement -
- Advertisement -

ಇಸ್ರೇಲ್‌ ಯುದ್ಧ ಘೋಷಿಸಿ ಗಾಝಾದ ಮೇಲೆ ವೈಮಾನಿಕ ದಾಳಿ ಆರಂಭಿಸಿದ ಬಳಿಕ ಗಾಝಾದಲ್ಲಿ 53 ಪತ್ರಕರ್ತರು ಕೊಲ್ಲಲ್ಪಟ್ಟಿದ್ದು, ಪ್ಯಾಲೆಸ್ತೀನ್‌ನ ಅಮಾಯಕ ನಾಗರಿಕರ ಜೊತೆಗೆ ಪತ್ರಕರ್ತರ ಕೂಡ ಹತ್ಯಾಕಾಂಡ ನಡೆದಿದೆ.

ಅ.7ರ ಹಮಾಸ್ ದಾಳಿಯ ನಂತರ ಇಸ್ರೇಲ್‌ ಸೈನ್ಯವು ಪಟ್ಟುಬಿಡದೆ ಗಾಝಾ ಮೇಲೆ ಆಕ್ರಮಣವನ್ನು ಮುಂದುವರಿಸಿತ್ತು. ವಿದ್ಯುತ್‌, ನೀರಾವರಿ ಸಂಪರ್ಕಗಳನ್ನು ಕಡಿತಗೊಳಿಸಿತ್ತು. ಇಸ್ರೇಲ್‌ ನಡೆಸಿದ ದಾಳಿಗೆ 15,000ಕ್ಕೂ ಅಧಿಕ ಮಂದಿ ನಾಗರಿಕರು ಗಾಝಾದಲ್ಲಿ ಮೃತಪಟ್ಟಿದ್ದರು. 40,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಗಾಝಾ ನಿವಾಸಿಗಳು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮನೆಗಳು, ವಾಣಿಜ್ಯ ಕಟ್ಟಡಗಳು, ಆಸ್ಪತ್ರೆಗಳು ಇಸ್ರೇಲ್ ಬಾಂಬ್‌ ದಾಳಿಗೆ ಧ್ವಂಸಗೊಂಡಿದೆ.

ಇಸ್ರೇಲ್‌ ಗಾಝಾ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ಹಮಾಸ್‌ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ಎಂದು ಹೇಳಿಕೊಂಡಿದೆ. ಆದರೆ ಯುದ್ಧದಲ್ಲಿ 40% ಮಕ್ಕಳು, ಮಹಿಳೆಯರು, ಪತ್ರಕರ್ತರ ಜೀವಗಳನ್ನು ಬಲಿತೆಗೆದುಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಮರ್ಥನೆಯ ಬಗ್ಗೆ ಟೀಕೆಗೆ ಗುರಿಯಾಗಿದೆ.

ಗಾಝಾದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಈ ಮೊದಲು ಇಸ್ರೇಲ್ ರಾಯಿಟರ್ಸ್ ಮತ್ತು ಎಎಫ್‌ಪಿಗೆ ಸ್ಪಷ್ಟವಾಗಿ ಹೇಳಿತ್ತು. ಇಸ್ರೇಲ್‌ ರಕ್ಷಣಾ ಪಡೆಯ ಕೈಯಲ್ಲಿ 20 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಇವುಗಳಲ್ಲಿ ಹೆಚ್ಚಿನ ಕೊಲೆಗಳು ಗಾಝಾದಲ್ಲಿ ಸಂಭವಿಸಿವೆ.

ಪತ್ರಕರ್ತರನ್ನು ರಕ್ಷಿಸುವ ಸಮಿತಿ (CPJ) ನ.22ಕ್ಕೆ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ ಇಸ್ರೇಲ್‌ ಮಿಲಿಟರಿ ಪಡೆಯ ಕೈಯಲ್ಲಿ 53 ಪತ್ರಕರ್ತರು ಸಾವನ್ನಪ್ಪಿದ್ದಾರೆ. 37 ಪ್ಯಾಲೆಸ್ತೀನ್‌ ಪತ್ರಕರ್ತರು, ನಾಲ್ವರು ಇಸ್ರೇಲ್‌ ಮತ್ತು ಓರ್ವ ಲೆಬನಾನ್‌ನ ಪತ್ರಕರ್ತ ಮೃತಪಟ್ಟಿದ್ದಾರೆ. 11 ಪತ್ರಕರ್ತರು ಗಾಯಗೊಂಡಿದ್ದಾರೆ. ಮೂವರು ಪತ್ರಕರ್ತರು ನಾಪತ್ತೆಯಾಗಿದ್ದಾರೆ. 18 ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ಸಿಪಿಜೆ ವರದಿ ತಿಳಿಸಿದೆ.

ಪತ್ರಕರ್ತರ ಕುಟುಂಬದ ಸದಸ್ಯರ ಮೇಲೆ ದಾಳಿಗಳು ನಡೆದಿದೆ. ಬೆದರಿಕೆಗಳು ಹಾಕಲಾಗಿದೆ. ಪತ್ರಕರ್ತರ ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿದೆ. ದಕ್ಷಿಣ ಗಾಝಾ ನಗರದಲ್ಲಿನ ಖಾನ್ ಯೂನಿಸ್‌ ನಗರದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಫೆಲಸ್ತೀನ್‌ ಚಾನಲ್‌ನ ವರದಿಗಾರ ಮೊಹಮ್ಮದ್ ಅಬು ಹತಾಬ್‌ ಮತ್ತು ಅವರ ಕುಟುಂಬದ 11 ಮಂದಿ ಬಲಿಯಾಗಿದ್ದರು.

ಗಾಝಾ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ ಅಲ್ ಜಝೀರಾ ಅರೇಬಿಕ್ ಬ್ಯೂರೋ ಮುಖ್ಯಸ್ಥ ವೇಲ್ ದಹದೌಹ್ ಅವರ ಪತ್ನಿ, ಮಗ, ಮಗಳು ಮತ್ತು ಮೊಮ್ಮಗ ಸಾವನ್ನಪ್ಪಿದ್ದರು.

ಪತ್ರಿಕಾ ಸ್ವಾತಂತ್ರ್ಯದ ವಿಚಾರದಲ್ಲಿ ಇಸ್ರೇಲ್‌ನ ನಡೆಯು ಏಕಪಕ್ಷೀಯವಾಗಿದೆ. ಎಲ್ಲಾ ಪತ್ರಕರ್ತರನ್ನು ರಕ್ಷಿಸುವ ಅಗತ್ಯವನ್ನು ಇಸ್ರೇಲ್‌ ನಿರ್ಲಕ್ಷಿಸಿದೆ. ಇಸ್ರೇಲ್‌ನ ಸಂಪೂರ್ಣ ನಿಷ್ಕ್ರಿಯತೆಯು ಪತ್ರಿಕಾ ಸ್ವಾತಂತ್ರ್ಯವನ್ನು ನಿಸ್ಸಂಶಯವಾಗಿ ದುರ್ಬಲಗೊಳಿಸುತ್ತದೆ. ಇಸ್ರೇಲ್‌ ನಡೆಯು ಕನಿಷ್ಟ ಪಕ್ಷ ಇಸ್ರೇಲ್‌ ಪಡೆಯಿಂದ ಹತ್ಯೆಯಾದ ಪತ್ರಕರ್ತರು ನ್ಯಾಯಕ್ಕೆ ಯೋಗ್ಯವಾಗಿಲ್ಲ ಎಂಬುವುದನ್ನು ಸೂಚಿಸುತ್ತಿದೆ.

ಇದನ್ನು ಓದಿ: ಯುದ್ಧ ಒಪ್ಪಂದದಂತೆ ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್, ಇಸ್ರೇಲ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read