Homeಮುಖಪುಟಸುಂದರ್ ನಗರದಲ್ಲಿ ಅತಂತ್ರರಾದ ಸ್ಲಂ ನಿವಾಸಿಗಳು

ಸುಂದರ್ ನಗರದಲ್ಲಿ ಅತಂತ್ರರಾದ ಸ್ಲಂ ನಿವಾಸಿಗಳು

- Advertisement -
- Advertisement -

ದೆಹಲಿಯ ಸುಂದರ್ ನಗರದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಮನೆಗಳನ್ನು ತೆರವು ಮಾಡಲಾಗಿದ್ದು, ಇದರಿಂದ ಸ್ಲಂ ನಿವಾಸಿಗಳು ಅತಂತ್ರರಾಗಿದ್ದಾರೆ. ಪುನರ್ವಸತಿಯನ್ನು ಕಲ್ಪಿಸದೆ ಸ್ಲಂ ನಿವಾಸಿಗಳ ಮನೆಗಳನ್ನು ಏಕಾಏಕಿ ತೆರವು ಮಾಡಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸುಂದರ್ ನಗರದಲ್ಲಿ ಕೈಗೊಂಡ ಮನೆಗಳ ತೆರವು ಕಾರ್ಯಾಚರಣೆ 200ಕ್ಕೂ ಹೆಚ್ಚು ಕುಟುಂಬಗಳ  ಮೇಲೆ ಪರಿಣಾಮ ಬೀಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆ ಮನೆಗಳನ್ನು ತೆರವು ಮಾಡಲಾಗಿದೆ ಮತ್ತು ದೆಹಲಿ ಹೈಕೋರ್ಟ್ ತೆರವು ಕಾರ್ಯಚರಣೆಗೆ ತಡೆಯಲು ನಿರಾಕರಿಸಿತ್ತು.

ನ.18 ರಂದು ಪೋಸ್ಟರ್‌ಗಳು ಮತ್ತು ನೋಟಿಸ್‌ಗಳನ್ನು ಹಾಕಲಾಯಿತು ಮತ್ತು ಸ್ಲಂಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಆದೇಶ ನೀಡಲಾಯಿತು. ಇಲ್ಲಿ ವಾಸಿಸುವ ಹೆಚ್ಚಿನವರು ಮಹಿಳೆಯರು ಮತ್ತು ಪುರುಷರು ಚಿಂದಿ ಆಯುವವರು, ರಿಕ್ಷಾ  ಚಾಲಕರು ಮತ್ತು ಮನೆಗೆಲಸ ಮಾಡುವವರು. ಅವರಲ್ಲಿ ಹಲವರು ಬಾಡಿಗೆಗೆ ವಾಸಿಸುತ್ತಿದ್ದಾರೆ. ಕೆಲವರು 40 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು.

ಸುಂದರ್ ನಗರ ಬಸ್ತಿಯಲ್ಲಿರುವ ಮನೆಗಳನ್ನು ಕೆಡವುವಾಗ ಅಧಿಕಾರಿಗಳು 2015ರ ನೀತಿಯಲ್ಲಿ ರೂಪಿಸಲಾದ ದೆಹಲಿ ಸ್ಲಂ ಮತ್ತು ಜೆಜೆ ಪುನರ್ವಸತಿ ಮತ್ತು ಸ್ಥಳಾಂತರ ನೀತಿ ಎಂಬ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕಿತ್ತು. ಆದರೆ ಭೂ ಮತ್ತು ಅಭಿವೃದ್ಧಿ ಕಚೇರಿ (L&DO) ಜನರು ವಾಸಿಸುತ್ತಿದ್ದ ಮನೆಗಳನ್ನು ಕೆಡವುವ ಸಮಯದಲ್ಲಿ ಹಲವಾರು ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

ಸುಂದರ್ ನಗರ ಬಸ್ತಿಯಲ್ಲಿರುವ ಫಾತಿಮಾ ಎಂಬವರ ಮನೆಯನ್ನು ನ.21ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆಡವಲಾಗಿದೆ. ಅವರ ಪತಿ ಟೂರಿಸ್ಟ್ ಟ್ಯಾಕ್ಸಿ ಚಾಲಕರಾಗಿದ್ದು ಆಗ್ರಾಕ್ಕೆ ತೆರಳಿದ್ದರು. ಪ್ರವಾಸಿಗರಿಗೆ ತಾಜ್ ಮಹಲ್ ತೋರಿಸಿ ಮನೆಗೆಂದು ವಾಪಾಸ್ಸು ಬರುವಾಗ ಮನೆಯೇ ನೆಲಸಮಗೊಂಡಿತ್ತು. ಮನೆ ಕಳೆದುಕೊಂಡು ಫಾತಿಮಾ (20) ಬೀದಿಯಲ್ಲಿ ತನ್ನ 4 ತಿಂಗಳ ಮಗಳನ್ನು ತೊಟ್ಟಿಲಲ್ಲಿ ಹಾಕಿಕೊಂಡು ಕುಳಿತಿದ್ದರು. ಪಕ್ಕದ ರಸ್ತೆಯಲ್ಲಿ ಗೃಹೋಪಯೋಗಿ ವಸ್ತುಗಳು ಬಿದ್ದುಕೊಂಡಿದ್ದವು. ಫಾತಿಮಾಳ ಪಕ್ಕದಲ್ಲಿ ಪಾರ್ಶ್ವವಾಯುವಿನಿಂದ ನರಳುತ್ತಿದ್ದ ಅತ್ತಿಗೆ ಕಣ್ಣೀರಿಡುತ್ತಿದ್ದರು.

ಮನೆಗಳನ್ನು ಕೆಡವಲು 15 ದಿನಗಳ ಮೊದಲು ಪರ್ಯಾಯ ಪುನರ್ವಸತಿಯನ್ನು ಒದಗಿಸಬೇಕು ಎಂದು ನಿಯಮವು ಹೇಳುತ್ತದೆ. ಗುಜಿರಿ ಕೆಲಸ ಮಾಡುತ್ತಿದ್ದ ಪ್ಯಾರೆ ಲಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ನ.18 ರಂದು  ಮನೆಗಳನ್ನು ತೆರವುಗೊಳಿಸುವುದಾಗಿ ಪೋಸ್ಟರ್‌ ಹಾಕಿದ್ದಾರೆ. ನೋಟಿಸ್ ನಮ್ಮನ್ನು ಭಯಭೀತರನ್ನಾಗಿ ಮಾಡಿತ್ತು. ತದನಂತರ ಇದ್ದಕ್ಕಿದ್ದಂತೆ ಬುಲ್ಡೋಜರ್‌ಗಳು ಬಂದವು. ನಮ್ಮ ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮನೆ ಕಳೆದುಕೊಂಡವರು ಈ 3 ದಿನಗಳ ಅವಧಿಯಲ್ಲಿ ವಸತಿಗಳನ್ನು ಬಾಡಿಗೆಗೆ ಪಡೆಯಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಅವರಲ್ಲಿ ಬಹುಪಾಲು ದಿನಗೂಲಿದಾರರು, ಮನೆ ಕೆಲಸಗಾರರು ಮತ್ತು ಗುಜಿರಿ ಸಂಗ್ರಹಿಸುವವರಾಗಿದ್ದರು. ಸ್ಥಳಾಂತರಗೊಂಡ ಒಂದು ಕುಟುಂಬಕ್ಕೂ ಪರ್ಯಾಯ ಪುನರ್ವಸತಿ ಒದಗಿಸಲು DUSIB ವಿಫಲವಾಗಿದೆ. ಮನೆಗಳನ್ನು ಕೆಡವಿದ ಸ್ಥಳದಿಂದ 5 ಕಿಲೋಮೀಟರ್‌ಗಳ ಒಳಗೆ ಪರ್ಯಾಯ ಪುನರ್ವಸತಿಯನ್ನು ಒದಗಿಸಬೇಕು ಎಂದು ನೀತಿಯು ಉಲ್ಲೇಖಿಸುತ್ತದೆ. ಆದರೆ ಜನರಿಗೆ ವಸತಿ ವ್ಯವಸ್ಥೆಯನ್ನು ಮಾಡಿರಲಿಲ್ಲ.

ಸುಂದರ್ ನಗರದ ಸ್ಥಳಾಂತರಗೊಂಡ ಕುಟುಂಬಗಳಿಗೆ ಜೀವನೋಪಾಯದ ಮತ್ತು ಮಕ್ಕಳ ಶಿಕ್ಷಣದ ಬಗೆಗೆ ಸಮಸ್ಯೆ ಎದುರಾಗಿದೆ. ನಾಸಿರಾ ಬೀಬಿ (33) ಸಮೀಪದ ಐಷಾರಾಮಿ ಬಂಗಲೆಯಲ್ಲಿ ಮನೆ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾವು ದೂರ ಹೋದರೆ ಇನ್ನು ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಮಕ್ಕಳು ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದರು. ಮನೆಗಳನ್ನು ತೆರವಿನ ಬಳಿಕ ಮಕ್ಕಳ ಭವಿಷ್ಯವು ಅತಂತ್ರವಾಗಿದೆ ಎಂದು ಹೇಳಿದ್ದಾರೆ.

ಶಾಲಾ-ಕಾಲೇಜು ಪರೀಕ್ಷೆಗಳು ನಡೆಯುವಾಗ ಮನೆಗಳನ್ನು ಕೆಡವಬಾರದು ಎಂದು ನಿಯಮವು ಹೇಳುತ್ತದೆ.  ಆದರೆ ಫಲಕ್ ಎಂಬಾಕೆ 12ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆಕೆಯ ಮನೆಯನ್ನು ಕೂಡ ಕೆಡವಲಾಗಿದೆ. ಮುಂದಿನ ತಿಂಗಳು ಅವರ ಪ್ರಿ-ಬೋರ್ಡ್ ಪರೀಕ್ಷೆಗಳು ನಡೆಯಲಿವೆ. ನಾಳೆ ನನಗೆ ವಾರದ ಪರೀಕ್ಷೆ ಇದೆ. ನನಗೆ ಮನಸ್ಸಿಗೆ ಶಾಂತಿ ಇಲ್ಲ ಎಂದು ಫಲಕ್‌ ಅಳಲು ತೋಡಿಕೊಂಡಿದ್ದಾರೆ. ಪ್ರಿಯಾ (38) ಅವರು ಈ ಬಗ್ಗೆ ಮಾತನಾಡಿದ್ದು, ಮಕ್ಕಳ ಮತ್ತು ನಮ್ಮ ಭವಿಷ್ಯಗಳು ಈಗ ಮಂಕಾಗಿವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’: ಕೇಂದ್ರದ ಉತ್ತರದಲ್ಲಿ ಸ್ಪಷ್ಟನೆ ಇಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...