ಭಾರತ್ ಜೋಡೋ ನ್ಯಾಯ ಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದೆ. ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ನಾಗರಿಕರ ಜೊತೆ ಸಂವಾದ ನಡೆಸಿದ್ದು, ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಇಂದು ಅಸ್ಸಾಂನ ಲಖಿಂಪುರ ಜಿಲ್ಲೆಯಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಪುನರಾರಂಭವಾಗಿತ್ತು. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರೆಸ್ಸೆಸ್ ಹಿಂದೂಸ್ತಾನವನ್ನು ದೆಹಲಿಯಿಂದ ಒಂದೇ ಭಾಷೆ, ಒಬ್ಬ ನಾಯಕನಿಂದ ನಡೆಸಬೇಕು ಎಂದು ಬಯಸುತ್ತದೆ. ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವ ಶರ್ಮಾ ಅವರು ದೇಶದ ಅತ್ಯಂತ ಭ್ರಷ್ಟ ಸಿಎಂ ಎಂದು ಹೇಳಿದ್ದಾರೆ.
ಅಸ್ಸಾಂನ ಮಜುಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ಜನತಾ ಪಕ್ಷವು ಆದಿವಾಸಿಗಳನ್ನು ಅರಣ್ಯಕ್ಕೆ ಸೀಮಿತಗೊಳಿಸಲು ಮತ್ತು ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರನ್ನಾಗಿಸಲು ಬಯಸುತ್ತದೆ. ಕಾಂಗ್ರೆಸ್, ಬುಡಕಟ್ಟು ಜನಾಂಗದವರನ್ನು ‘ಆದಿವಾಸಿಗಳು’ (ಮೊದಲ ನಿವಾಸಿಗಳು) ಎಂದು ಉಲ್ಲೇಖಿಸಿದರೆ, ಬಿಜೆಪಿ ಅವರನ್ನು ಕೇವಲ ‘ವನವಾಸಿಗಳು’ (ಅರಣ್ಯವಾಸಿಗಳು) ಎಂದು ಸೀಮಿತಗೊಳಿಸುತ್ತದೆ ಎಂದು ಅವರು ಹೇಳಿದರು.
ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಜನಾಂಗೀಯ ಕಲಹ ಮುಂದುವರಿದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡದಿರುವ ಬಗ್ಗೆ ರಾಹುಲ್ ವಾಗ್ದಾಳಿ ನಡೆಸಿದರು. ಮಣಿಪುರದಲ್ಲಿ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತರ್ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಪ್ರಧಾನಿ ಒಂದೇ ಒಂದು ಬಾರಿಯೂ ರಾಜ್ಯಕ್ಕೆ ಭೇಟಿ ನೀಡಿಲ್ಲ. ಅಸ್ಸಾಂ ಸಿಎಂ ದೇಶದ ಅತ್ಯಂತ ಭ್ರಷ್ಟ ಸಿಎಂ, ಅವರು ಬಿಜೆಪಿಯ ಇತರ ಸಿಎಂಗಳಿಗೆ ಭ್ರಷ್ಟಾಚಾರ ನಡೆಸಲು ಕಲಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜೆಂಗ್ರೈಮುಖ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೌರವ್ ಗೊಗೋಯ್, ಯಾತ್ರೆ ಮೂಲಕ ನಾವು ಜನರ ಪ್ರಮುಖ ಸಮಸ್ಯೆಯನ್ನು ಎತ್ತಿ ತೋರಿಸುತ್ತೇವೆ. ಮಣಿಪುರದಲ್ಲಿ ನಾವು ಯಾತ್ರೆ ಪ್ರಾರಂಭಿಸಿದ್ದೇವೆ, ಅಲ್ಲಿ ಹಿಂಸಾಚಾರ ನಡೆಯುತ್ತಿದೆ. ನಾಗಾಲ್ಯಾಂಡ್‌ನಲ್ಲಿ ಯಾತ್ರೆ ಸಾಗಿದೆ ಅಲ್ಲಿ ಶಾಂತಿ ಒಪ್ಪಂದದ ಭರವಸೆ ಈಡೇರಿಸಿಲ್ಲ. ಅಸ್ಸಾಂನಲ್ಲಿ ಜನರು ನಮಗೆ ಉದ್ಯೋಗಗಳು ಸಿಗುತ್ತಿಲ್ಲ, ಬೆಲೆಗಳು ಹೆಚ್ಚಿವೆ ಆದರೆ ಇವುಗಳನ್ನು ಪರಿಹರಿಸುವ ಬದಲು ಸಿಎಂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಅವರ ಕುಟುಂಬ ಮತ್ತು ಅವರ ಆಪ್ತರನ್ನು ಶ್ರೀಮಂತರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ಹೇಳಿದರು. ಅದಕ್ಕಾಗಿಯೇ ಭ್ರಷ್ಟಾಚಾರದತ್ತ ಗಮನ ಹರಿಸಲಾಗಿದೆ ಎಂದು ಗೌರವ್ ಗೊಗೋಯ್ ಹೇಳಿದ್ದಾರೆ.
7ನೇ ದಿನದ ಭಾರತ್ ಜೋಡೋ ನ್ಯಾಯ ಯಾತ್ರೆ ಅರುಣಾಚಲ ಪ್ರದೇಶದಲ್ಲಿ ಸಮಾಪ್ತಿಯಾಗಲಿದೆ. ಜೋರ್ಹತ್ ಪಟ್ಟಣದಲ್ಲಿ ಅನುಮತಿಸಲಾದ ಮಾರ್ಗ ಬದಲಿಸಿದ್ದಕ್ಕೆ ಯಾತ್ರೆ ಮುಖ್ಯ ಸಂಘಟಕ ಕೆಬಿ ಬೈಜು ವಿರುದ್ಧ ಜೋರ್ಹತ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಯಾತ್ರೆಯ ಹಾದಿಯಲ್ಲಿ ದಿಢೀರ್ ಬದಲಾವಣೆಯಿಂದಾಗಿ ಸಂಚಾರ ವ್ಯತ್ಯಯವುಂಟಾಗಿತ್ತಲ್ಲದೆ ಬೈಜಿಯು ಮತ್ತಿತರರು ಟ್ರಾಫಿಕ್ ಬ್ಯಾರಿಕೇಡುಗಳನ್ನು ಮುರಿಯಲು ನೆರೆದಿದ್ದವರನ್ನು ಪ್ರಚೋದಿಸಿದರು ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯು 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಸಾಗಲಿದೆ. ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.
Visuals of Congress MP Rahul Gandhi's Bharat Jodo Nyay Yatra from Lakhimpur, Assam.#BharatJodoNayaYatra pic.twitter.com/Ei0dXpkniD
— Press Trust of India (@PTI_News) January 20, 2024
लखीमपुर, असम में बस से उतरकर स्कूली बच्चों और युवाओं से मुलाकात की#BharatJodoNyayYatra pic.twitter.com/GtDISHNQlQ
— Bharat Jodo Nyay Yatra (@bharatjodo) January 20, 2024
ಇದನ್ನು ಓದಿ: ಇಂದೋರ್: ಅನಾಥಾಶ್ರಮದಲ್ಲಿ ಮಕ್ಕಳ ಮೇಲೆ ದೌರ್ಜನ್ಯ


