Homeಮುಖಪುಟಗ್ರಹಾಂ ಸ್ಟೇನ್ಸ್ ಮತ್ತು ಇಬ್ಬರು ಮಕ್ಕಳ 'ಮಿಡ್‌ನೈಟ್‌' ಮರ್ಡರ್‌ : ಬಲಪಂಥೀಯ ಕ್ರೌರ್ಯಕ್ಕೆ 25...

ಗ್ರಹಾಂ ಸ್ಟೇನ್ಸ್ ಮತ್ತು ಇಬ್ಬರು ಮಕ್ಕಳ ‘ಮಿಡ್‌ನೈಟ್‌’ ಮರ್ಡರ್‌ : ಬಲಪಂಥೀಯ ಕ್ರೌರ್ಯಕ್ಕೆ 25 ವರ್ಷ!

- Advertisement -
- Advertisement -

ಒಡಿಶಾದ ಕಿಯೋಂಜಾರ್ ಜಿಲ್ಲೆಯ ಮನೋಹರಪುರ ಹಳ್ಳಿಯ ನಿವಾಸಿಗಳು ಮಾನವೀಯತೆಯನ್ನು ಅಣಕಿಸಿರುವ ಆಸ್ಟ್ರೇಲಿಯಾದ ಮಿಷನರಿ ‘ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ಪುತ್ರರ’ ಜೀವಂತ ದಹನದ ನೆನಪಿನಲ್ಲಿ 25ನೇ ಪುಣ್ಯತಿಥಿಯನ್ನು ಆಚರಿಸಿದ್ದಾರೆ.

ಜನವರಿ 22, 1999ರ ರಾತ್ರಿ ಮನೋಹರಪುರದಲ್ಲಿ ಜಂಗಲ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ದಹನ ಮಾಡಲಾಗಿತ್ತು. ಬಿಜೆಪಿಯ ಸಂಬಂಧ ಹೊಂದಿರುವ ಬಲಪಂಥೀಯ ಬಜರಂಗದಳದ ಕಾರ್ಯಕರ್ತರ ಗುಂಪು ಈ ಕೃತ್ಯವನ್ನು ಎಸಗಿತ್ತು.

ಜಂಗಲ್ ಶಿಬಿರವು ಈ ಪ್ರದೇಶದ ಕ್ರಿಶ್ಚಿಯನ್ನರಿಗೆ ಸಾಮಾಜಿಕ ವೇದಿಕೆಯಾಗಿ ಕಾರ್ಯನಿರ್ವಹಿಸಿತ್ತು. ಭೀಕರ ಘಟನೆಯ ಸಮಯದಲ್ಲಿ ಅವರು ವ್ಯಾನ್‌ನಲ್ಲಿ ಮಲಗಿದ್ದರು. ಬಲಪಂಥೀಯ ಗುಂಪುಗಳು ಸ್ಟೇನ್ಸ್ ಬಲವಂತದ ಮತಾಂತರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿತ್ತು.

ಘಟನೆ ನಡೆದು 25 ವರ್ಷಗಳು ಕಳೆದರೂ ಈ ಘಟನೆಯು ನಮ್ಮ ಸ್ಮರಣೆಯಿಂದ ಎಂದಿಗೂ ಅಳಿಸಿಹೋಗುವುದಿಲ್ಲ. ಆದರೆ ಜನವರಿ 22 ನಮಗೆ ಚಿಂತನಶೀಲ ದಿನವಾಗಿದೆ. ಸ್ಟೇನ್ಸ್ ತನ್ನ ಜೀವಿತಾವಧಿಯಲ್ಲಿ ಅಭ್ಯಾಸ ಮಾಡಿದ ಮಾನವೀಯತೆಯ ತತ್ವಶಾಸ್ತ್ರವನ್ನು ಮುಂದುವರಿಸಲು ನಾವು ನಿರ್ಧರಿಸುತ್ತೇವೆ ಎಂದು 40 ವರ್ಷದ ಜೊಹಾನ್ ಮುರ್ಮು ಹೇಳಿದ್ದಾರೆ.

ಒಡಿಶಾದ ರಾಜಧಾನಿ ಭುವನೇಶ್ವರದಿಂದ 200 ಕಿಮೀ ದೂರದಲ್ಲಿರುವ ಮನೋಹರಪುರದಲ್ಲಿ 260 ಕುಟುಂಬಗಳಿವೆ. ಅದರಲ್ಲಿ 45 ಕುಟುಂಬಗಳು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದಾರೆ. ಜನವರಿ 23ರ ಮಧ್ಯರಾತ್ರಿ ಈ ಕೊಲೆ ನಡೆದಿತ್ತು. ಅದು ರಾತ್ರಿಯ ಸಮಯವಾದ್ದರಿಂದ ಮನೋಹರಪುರವು ಪ್ರತಿ ವರ್ಷ ಜನವರಿ 22ರಂದು ಮರಣ ವಾರ್ಷಿಕೋತ್ಸವವನ್ನು ಆಚರಿಸುತ್ತದೆ ಆದರೆ ಜನವರಿ 23ರಂದು ಮಯೂರ್ಭಂಜ್ ಜಿಲ್ಲೆಯ ಜಿಲ್ಲಾ ಕೇಂದ್ರ ಪಟ್ಟಣವಾದ ಬರಿಪಾಡಾದಲ್ಲಿ ಸ್ಮರಣಾರ್ಥ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅಲ್ಲಿ ಈ ಮಿಷನರಿಗಳು ಕುಷ್ಠ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದರು.

ಬಿಜೆಪಿಯಲ್ಲಿ ಸಕ್ರಿಯನಾಗಿದ್ದ ದಾರಾ ಸಿಂಗ್ ಮತ್ತು ತಂಡ

ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ದಹನ ಮಾಡಿದ್ದ ತಂಡದಲ್ಲಿದ್ದ ದಾರಾ ಸಿಂಗ್ ಬಿಜೆಪಿಯ ಸದಸ್ಯನಾಗಿದ್ದ. ಆತ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನಾಗಿದ್ದ, ಗೋ ಸುರಕ್ಷಾ ಸಮಿತಿಯ ಸಕ್ರಿಯ ಸದಸ್ಯನಾಗಿದ್ದ. ಈತ 1998ರ ಚುನಾವಣೆಯ ಸಮಯದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ರ್ಯಾಲಿಗಳಲ್ಲಿ ತೊಡಗಿಸಿಕೊಂಡಿದ್ದ. ಇದಲ್ಲದೆ 1991ರ ಚುನಾವಣೆಯ ಸಮಯದಲ್ಲಿ ಪಾಟ್ನಾದಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದ. ಹಿಂದುತ್ವದ ಬಲವಾದ ಪ್ರತಿಪಾದಕನಾಗಿದ್ದ.

ದನದ ವ್ಯಾಪಾರಿಗಳನ್ನು ಟಾರ್ಗೆಟ್‌ ಮಾಡಿ ದುಷ್ಕೃತ್ಯ ನಡೆಸುತ್ತಿದ್ದ ಗಂಗಾನದಿ ಬಯಲು ಪ್ರದೇಶದ ಬಜರಂಗದಳದ ಕಾರ್ಯಕರ್ತ ದಾರಾ ಸಿಂಗ್, ಕುಷ್ಠರೋಗದ ಸಂತ್ರಸ್ತರ ಸೇವೆ ಮಾಡುತ್ತಿದ್ದ ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೈನ್ಸ್(58) ಮತ್ತು ಅವನ ಇಬ್ಬರು ಮಕ್ಕಳಾದ ಫಿಲಿಪ್ (10) ಮತ್ತು ತಿಮೋತಿ(6) ಅವರನ್ನು ಜೀವಂತ ಸುಟ್ಟು ಹಾಕಿದ್ದ. ಈ ಘಟನೆ 1999ರ ಜನವರಿ 21-22 ರಾತ್ರಿ ವೇಳೆ ನಡೆದಿದೆ. ಘಟನೆ ನಡೆದು ಇಂದಿಗೆ 25 ವರ್ಷವಾಗಿದೆ. ಪ್ರಕರಣದಲ್ಲಿ ದಾರಾ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯ ಈ ಪ್ರಕರಣದಲ್ಲಿ ಕೊಲೆಗಾರನ ಸಿದ್ದಾಂತವನ್ನು ಅರ್ಥಮಾಡಿಕೊಂಡಿಲ್ಲ ಎಂದು ಕ್ರಿಶ್ಚಿಯನ್ ಸಮುದಾಯವು ಹೇಳಿಕೊಂಡಿತ್ತು.

ಆಸ್ಟ್ರೇಲಿಯಾದಿಂದ ಒರಿಸ್ಸಾ(ಒಡಿಶಾ)ಗೆ ಬಂದು ನೆಲೆಸಿದ್ದ ಗ್ರಹನ್ ಸ್ಟೇನ್ಸ್ ಸ್ಥಳೀಯ ಭಾಷೆ ಕಲಿತು ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದರು. ರಾಜ್ಯದ ಮಯೂರ್‌ ಬಂಜ್ ಎಂಬ ಊರಿನಲ್ಲಿ ಕುಷ್ಠರೋಗಿಗಳ ಚಿಕಿತ್ಸೆಗಾಗಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇವರು ಎರಡನೇ ಮದರ್ ತೆರೇಸಾ ಎಂದು ಕೂಡ ಕರೆಯಲ್ಪಟ್ಟಿದ್ದರು. ಗ್ರಹನ್ ಸ್ಟೇನ್ಸ್ ಹತ್ಯೆಯನ್ನು ಘಟನೆಯನ್ನು ಅಂದಿನ ಭಾರತದ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ರಾಷ್ಟ್ರಕ್ಕೆ ಕಪ್ಪು ಚುಕ್ಕೆ ಎಂದು ಕರೆದಿದ್ದರು. ಇದಲ್ಲದೆ ಬಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಕೂಡ ಇದೇ ರೀತಿಯ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಒರಿಸ್ಸಾ ರಾಜ್ಯದ ಹೊಸ ಹೆಸರಾದ ಒಡಿಶಾದಲ್ಲಿ ಗ್ರಹನ್ ಸ್ಟೇನ್ಸ್ ಪತ್ನಿ ಗ್ಲಾಡಿಸ್ ಸ್ಟೇನ್ಸ್ ಇನ್ನೂ ಇದ್ದಾರೆ. ಆಕೆಯ ಬದುಕುಳಿದ ಮಗು, ಮಗಳು, ಈಗ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿದ್ದಾರೆ. ದುಷ್ಕರ್ಮಿಗಳು ಜೀಪಿಗೆ ಬೆಂಕಿ ಹಚ್ಚಿದಾಗ ಗ್ರಹನ್ ಮತ್ತು ಅವರ ಮಕ್ಕಳು ಎಚ್ಚರಗೊಂಡು ಹೊರಬರಲು ಪ್ರಯತ್ನಿಸಿದರೂ ದಾರಾ ಸಿಂಗ್‌ನ ತಂಡ ಅವರನ್ನು ಲಾಠಿ ಬಳಸಿ ಬೆಂಕಿಗೆ ತಳ್ಳಿಹಾಕಿ ಜೀವಂತವಾಗಿ ದಹನ ಮಾಡಿತ್ತು. ತನ್ನ ಕುಟುಂಬದ ಮೇಲೆ ಅನ್ಯಾಯ ನಡೆದರೂ ಗ್ರಹನ್ ಅವರ ಪತ್ನಿ ಗ್ಲ್ಯಾಡಿಸ್ ಅವರು, ನನ್ನ ಗಂಡ ಮತ್ತು ನನ್ನ ಇಬ್ಬರು ಮಕ್ಕಳನ್ನು ಕೊಂದವರನ್ನು ನಾನು ಕ್ಷಮಿಸುತ್ತೇನೆ ಎಂದು ಹೇಳಿದ್ದರು. ತನ್ನ ಪ್ರೀತಿಯ‌ ಗಂಡ ಮತ್ತು ಇಬ್ಬರು ಕಂದಮ್ಮಗಳನ್ನು ಕೊಂದ ಆರೋಪಿಗಳನ್ನು ಕ್ಷಮಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ ಗ್ಲ್ಯಾಡ್ಲಿಸ್ ಧರ್ಮ ಅಂದರೆ ಏನು ಎಂದು ತೋರಿಸಿಕೊಟ್ಟರು. ಆದರೆ ಅಪರಾಧಿಗಳಿಗೆ ಕ್ಷಮೆ ನೀಡುವ ಕಾನೂನು ಭಾರತದಲ್ಲಿ ಇಲ್ಲ.

ಸಂಘ ಪರಿವಾರ ಗುಂಪುಗಳು ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ಹಿಂಸಾಚಾರ ನಡೆಸುತ್ತಿದೆ ಎಂದು ಈ ವೇಳೆ ಪಾಶ್ಚಿಮಾತ್ಯ ಜಗತ್ತು ಕಳವಳ ವ್ಯಕ್ತಪಡಿಸಿತ್ತು. 2007 ಮತ್ತು 2008ರಲ್ಲಿ ಒಡಿಶಾದಲ್ಲಿ ಸಂಘ ಪರಿವಾರವು ಮತ್ತೊಮ್ಮೆ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿತ್ತು. ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಯಿತು, 6,000 ಕ್ಕೂ ಹೆಚ್ಚು ಮನೆಗಳು ಮತ್ತು 300 ಚರ್ಚ್‌ಗಳನ್ನು ಸುಟ್ಟುಹಾಕಲಾಯಿತು ಮತ್ತು 60,000 ಜನರನ್ನು ಸ್ಥಳಾಂತರಿಸಲಾಗಿತ್ತು.

ಇದನ್ನು ಓದಿ: ಭದ್ರತೆ ಹಿಂಪಡೆದ ಬಳಿಕ ಭಯದಿಂದ ಬದುಕುತ್ತಿರುವ ಗುಜರಾತ್‌ ಗಲಭೆ ಸಾಕ್ಷಿಗಳು

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....