ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆ ಜಾರ್ಖಾಂಡ್‌ನಲ್ಲಿ 4ನೇ ದಿನ ಮುಂದುವರಿದಿದ್ದು, ರಾಮಗಢ ಜಿಲ್ಲೆಯ ಕಲ್ಲಿದ್ದಲು ಪ್ರದೇಶದಲ್ಲಿ ರಾಹುಲ್ ಗಾಂಧಿ ಕಾರ್ಮಿಕರ ಜೊತೆ ಸಂವಾದವನ್ನು ನಡೆಸಿದ್ದಾರೆ.
ಭಾನುವಾರ ರಾತ್ರಿ ಜಿಲ್ಲೆಯ ಸಿದ್ದು-ಕನ್ಹು ಮೈದಾನದಲ್ಲಿ ಯಾತ್ರೆ ತಂಗಿತ್ತು, ಇಂದು ಬೆಳಗ್ಗೆ ಮಹಾತ್ಮ ಗಾಂಧಿ ಚೌಕ್‌ನಿಂದ ಯಾತ್ರೆ ಪುನರಾರಂಭಗೊಂಡು ಚುಟುಪಾಲು ಕಣಿವೆಗೆ ತೆರಳಿ ಅಲ್ಲಿ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್ ಶೇಖ್ ಭಿಖಾರಿ ಮತ್ತು ಟಿಕಾಯ್ತ್ ಉಮಾರೋ ಸಿಂಗ್ ಅವರಿಗೆ ಗೌರವವನ್ನು ಸಲ್ಲಿಕೆ ಮಾಡಿದ್ದಾರೆ.
1857 की क्रांति में अंग्रेज़ी हुकूमत के अन्याय से लोहा लेने वाले वीर बलिदानी, शहीद शेख भिखारी और टिकैत उमराव सिंह जी को शत शत नमन!
आपका बलिदान न्याय के इस युद्ध में हमारा प्रेरणास्रोत है। #BharatJodoNyayYatra pic.twitter.com/gL980bva8O
— Bharat Jodo Nyay Yatra (@bharatjodo) February 5, 2024
ಯಾತ್ರೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವು ಜಲ್-ಜಂಗಲ್-ಜಮಿನ್ (ನೀರು, ಅರಣ್ಯ ಮತ್ತು ಭೂ ಸಂಪನ್ಮೂಲಗಳ) ವಿಚಾರದಲ್ಲಿ ಆದಿವಾಸಿಗಳ ಹಕ್ಕುಗಳ ಪರವಾಗಿ ಸದಾ ನಿಂತುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ರಾಜ್ಯದ ಉಕ್ಕಿನ ಕಾರ್ಖಾನೆಗಳನ್ನು ತಮ್ಮ ಕೋಟ್ಯಾಧಿಪತಿ ಸ್ನೇಹಿತರಿಗೆ ಹಸ್ತಾಂತರಿಸಲಿದ್ದಾರೆ, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ರಾಷ್ಟ್ರದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಕೆಲವೇ ಕೈಗಳಿಗೆ ಹಸ್ತಾಂತರಿಸುವ ಮೂಲಕ ಆರ್ಥಿಕ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನಾನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಷ್ಟ್ರವನ್ನು ಒಗ್ಗೂಡಿಸಲು ಮತ್ತು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ದ್ವೇಷದ ವಿರುದ್ಧ ಹೋರಾಡಲು ಭಾರತ್ ಜೋಡೋ ಯಾತ್ರೆ ಕೈಗೊಂಡಾಗ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಾಂಗ್ರೆಸ್ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಾವು ಯಶಸ್ವಿಯಾಗಿದ್ದೆವು. ಈ ಬಾರಿ ಮಣಿಪುರದಿಂದ ಮಹಾರಾಷ್ಟ್ರಕ್ಕೆ ಯಾತ್ರೆ ಸಾಗುತ್ತಿದ್ದು ನ್ಯಾಯ ಎಂಬ ಇನ್ನೊಂದು ಪದವನ್ನು ಸೇರಿಸಿದ್ದೇವೆ, ಜನರಿಗೆ ಆಗುತ್ತಿರುವ ಆರ್ಥಿಕ ಅನ್ಯಾಯದಂತಹ ಕೆಲವು ಅನ್ಯಾಯಗಳ ವಿರುದ್ಧ ನ್ಯಾಯಕ್ಕಾಗಿ ಒತ್ತಾಯಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯು ದೇಶದ ಸಂಪತ್ತನ್ನು ಕೆಲವು ಆಯ್ಕೆಯ ಮಿಲಿಯನೇರ್‌ಗಳಿಗೆ ವರ್ಗಾಯಿಸುವ ಪ್ರಯತ್ನದ ಅನ್ಯಾಯದ ವಿರುದ್ಧ ನಿಲ್ಲುವ ಗುರಿಯನ್ನು ಹೊಂದಿದೆ ಮತ್ತು ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದಿಂದ ಉಂಟಾದ ನಿರುದ್ಯೋಗದ ವಿರುದ್ಧ ಪ್ರತಿಭಟಿಸುತ್ತದೆ. ಕೇಂದ್ರ ಸರ್ಕಾರವು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಅದು ಆದಿವಾಸಿಗಳಂತಹ ಸಾಮಾನ್ಯ ಜನರನ್ನು ಉದ್ಯೋಗದಿಂದ ವಂಚಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜನವರಿ 14ರಂದು ಮಣಿಪುರದಲ್ಲಿ ಆರಂಭವಾದ ಭಾರತ್ ಜೋಡೋ ನ್ಯಾಯ ಯಾತ್ರೆ 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಸಂಚರಿಸಿ ಮಾ.20ರಂದು ಮುಂಬೈನಲ್ಲಿ ಸಮಾಪ್ತಿ ಯಾಗಲಿದೆ.
इतने वज़न को साइकिल पर संभाल पाना कोई आसान काम नहीं है। लेकिन कोयला खदान के मज़दूर मजबूर हैं।
आज यात्रा के दौरान, साइकिल पर कोयला ढोते कुछ श्रमिकों से राहुल गांधी ने मुलाकात की, उनकी परेशानियों को समझा और न्याय दिलाने का आश्वासन दिया।#ShramikNyay#BharatJodoNyayYatra pic.twitter.com/Z9LG8eckuj
— Bharat Jodo Nyay Yatra (@bharatjodo) February 5, 2024
चले हैं सीना तानकर, लड़ने न्याय की लड़ाई।
भरी हुंकार अन्याय के ख़िलाफ़ जब,
साथ देश की जनता आई!#BharatJodoNyayYatra pic.twitter.com/po1KCZBtvL— Bharat Jodo Nyay Yatra (@bharatjodo) February 4, 2024
ಇದನ್ನು ಓದಿ: ಸಾವಿತ್ರಿಬಾಯಿ ಫುಲೆ ವಿವಿಯಲ್ಲಿ ABVP ಕಾರ್ಯಕರ್ತರಿಂದ ದಾಂಧಲೆ: ಕ್ರಮ ಕೈಗೊಳ್ಳದ ಅಧಿಕಾರಿ ಅಮಾನತು


