‘ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸತ್ಯವನ್ನು ರಕ್ಷಿಸುವಲ್ಲಿ ಮಾಧ್ಯಮಗಳು ವಿಫಲವಾಗಿವೆ’ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್ (ಸಿಜೆಎಆರ್) ದೆಹಲಿಯಲ್ಲಿ ಆಯೋಜಿಸಿದ್ದ ಸೆಮಿನಾರ್‌ನಲ್ಲಿ ಮಾತನಾಡಿದ ಅವರು, “ಸತ್ಯವನ್ನು ನಿರ್ಭೀತಿಯಿಂದ ಹೇಳಲು ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತವೆಂದರೆ ಸಂವಿಧಾನದ ನಾಲ್ಕನೇ ಸ್ತಂಭವು ದೇಶವನ್ನು ವಿಫಲಗೊಳಿಸಿದೆ” ಎಂದಿದ್ದಾರೆ.
“ಈ ಸಮ್ಮೇಳನಕ್ಕೂ ಮುನ್ನ ನಾವು ಕೆಲವು ವಿಷಯಗಳನ್ನು ಚರ್ಚಿಸಿದ್ದೇವೆ. ಆ ಎಲ್ಲಾ ವಿಷಯಗಳು ಕೆಲ ಡಿಜಿಟಲ್ ಮಾಧ್ಯಮಗಳು ಹೊರತುಪಡಿಸಿದರೆ, ಇತರ ಯಾವುದಾದರು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆಯಾ? ಯಾವುದಾದರು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅವುಗಳನ್ನು ನೋಡಲು ಸಾಧ್ಯವಿದೆಯಾ?” ಎಂದು ಪ್ರಶ್ನಿಸಿದ್ದಾರೆ.
“ನಿರ್ಭೀತಿಯಿಂದ ಸತ್ಯ ಹೇಳಲು ಆಗುತ್ತಿಲ್ಲ. ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತವೆಂದರೆ ನಾಲ್ಕನೇ ಸ್ತಂಭವು ದೇಶವನ್ನು ವಿಫಲಗೊಳಿಸಿದೆ. ಮೊದಲ ಮೂರು ಸ್ತಂಭಗಳ ಬಗ್ಗೆ ಮರೆತುಬಿಡಿ. ನಾಲ್ಕನೇ ಸ್ತಂಭ ಮಾಧ್ಯಮವಾಗಿದ್ದು, ಅದು ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ರಕ್ಷಿಸುವಲ್ಲಿ, ಸತ್ಯವನ್ನು ಸಮರ್ಥಿಸುವಲ್ಲಿ ವಿಫಲವಾಗಿದೆ” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ.
‘ಶಿಳ್ಳೆ ಹೊಡೆಯುವವರು’ ಪ್ರಸ್ತುತ ಭರವಸೆ ಎಂದ ಅವರು, ‘ಐದನೇ ಸ್ತಂಭ’ ಎಂದು ಕರೆಯಲ್ಪಡುವ ಶಿಳ್ಳೆ ಹೊಡೆಯುವವರನ್ನು(ವಿಸ್ಲ್-ಬ್ಲೋವರ್) ರಕ್ಷಿಸಲು ಕರೆ ನೀಡಿದ್ದಾರೆ.
“ಇತ್ತೀಚೆಗೆ ಶಿಳ್ಳೆ ಹೊಡೆಯಲೂ ಸಾಧ್ಯವಾಗುತ್ತಿಲ್ಲ. ಬಹುಶ ಕೋವಿಡ್ ಬಳಿಕ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಿರಬಹುದು. ಇಂದು ದೇಶದಲ್ಲಿ ಶ್ವಾಸಕೋಶಗಳಿಗೆ ಹಾನಿಯಾಗಿದೆ. ಹಾಗಾಗಿ, ಯಾರೂ ಶಿಳ್ಳೆ ಹೊಡೆಯುತ್ತಿಲ್ಲ. ಇದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ನಾವು ಬೆಂಬಲಿಸಬೇಕು, ಎದ್ದು ನಿಲ್ಲಬೇಕು, ಮಾತನಾಡಬೇಕು, ಜಾಗರೂಕರಾಗಿರಬೇಕು. ದೇಶದಲ್ಲಿ ಉಳಿದಿರುವ ಕೆಲವೇ ಕೆಲವು ಶಿಳ್ಳೆ ಹೊಡೆಯುವವರಲ್ಲಿ ನಾವೂ ಒಂದಾಗಬೇಕು” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ: ತೀರ್ಪು ಪ್ರಶ್ನಿಸಿದ್ದ ಅರ್ಜಿ ವಜಾ


