Homeಫ್ಯಾಕ್ಟ್‌ಚೆಕ್Fact Check: ಪಾಕಿಸ್ತಾನದಿಂದ ಕಾಂಗ್ರೆಸ್‌ ₹10 ಕೋಟಿ ದೇಣಿಗೆ ಪಡೆದಿದೆ ಎಂದು ಸುಳ್ಳು ಸುದ್ದಿ ಹರಡಿದ...

Fact Check: ಪಾಕಿಸ್ತಾನದಿಂದ ಕಾಂಗ್ರೆಸ್‌ ₹10 ಕೋಟಿ ದೇಣಿಗೆ ಪಡೆದಿದೆ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ಚುನಾವಣಾ ಬಾಂಡ್‌ ಯೋಜನೆ’ಯನ್ನು ‘ಅಸಂವಿಧಾನಿಕ’ ಎಂದಿರುವ ಸುಪ್ರೀಂ ಕೋರ್ಟ್ ಫೆಬ್ರವರಿ 15,2024ರಂದು ರದ್ದುಗೊಳಿಸಿತ್ತು. ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ಸೂಚಿಸಿತ್ತು. ಆರಂಭದಲ್ಲಿ ಸಮಯ ವಿಸ್ತರಣೆ ಕೋರಿದ್ದ ಎಸ್‌ಬಿಐ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ಆ ಮಾಹಿತಿಯನ್ನು ಚುನಾವಣಾ ಆಯೋಗ ಮಾರ್ಚ್ 14 ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ಬಾಂಡ್‌ಗಳ ಕುರಿತು ಎರಡು ಪಟ್ಟಿಗಳನ್ನು ಪ್ರಕಟಿಸಲಾಗಿದೆ. 337 ಪುಟಗಳ ಮೊದಲ ಪಟ್ಟಿಯಲ್ಲಿ ಬಾಂಡ್‌ಗಳ ಮುಖಬೆಲೆ ಮತ್ತು ದಿನಾಂಕಗಳೊಂದಿಗೆ ಅವುಗಳನ್ನು ಖರೀದಿಸಿದ ಕಂಪನಿಗಳನ್ನು ಒಳಗೊಂಡಿವೆ. 426 ಪುಟಗಳ ಎರಡನೇ ಪಟ್ಟಿಯಲ್ಲಿ ರಾಜಕೀಯ ಪಕ್ಷಗಳ ಹೆಸರು, ಬಾಂಡ್‌ಗಳ ಮುಖಬೆಲೆ ಮತ್ತು ಅವುಗಳನ್ನು ನಗದೀಕರಿಸಿದ ದಿನಾಂಕಗಳು ಒಳಗೊಂಡಿವೆ. ಬಾಂಡ್‌ಗಳ ಸೀರಿಯಲ್ ನಂಬರ್ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿಲ್ಲ. ಹಾಗಾಗಿ, ಎರಡು ಪಟ್ಟಿಗಳನ್ನು ಪರಸ್ಪರ ಸಂಬಂಧಿಸಲು ಮತ್ತು ಯಾವ ಕಂಪನಿ, ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ.

ಈ ಕುರಿತ ಸುದ್ದಿ ಇಲ್ಲಿದೆ 

ಬಾಂಡ್‌ಗಳ ಸೀರಿಯಲ್ ನಂಬರ್‌ ಮಾಹಿತಿಯನ್ನೂ ಒದಗಿಸುವಂತೆ ಮಾರ್ಚ್ 15ರಂದು ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ಗೆ ಸೂಚಿಸಿದೆ. ಈ ಮೂಲಕ ಯಾವ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ ಎಂಬ ಮಾಹಿತಿ ಪಡೆಯಲು ಸಾಧ್ಯವಾಗಬಹುದು.

ಚುನಾವಣಾ ಬಾಂಡ್‌ ಮಾಹಿತಿ ಬಿಡುಗಡೆಯಾದ ಬಳಿಕ ಬಲಪಂಥೀಯ ಯೂಟ್ಯೂಬ್‌ ಚಾನೆಲ್ ‘ಟಿವಿ ವಿಕ್ರಮ’ ‘ಪಾಕಿಸ್ತಾನದಿಂದ 10 ಕೋಟಿ ದೇಣಿಗೆ ಪಡೆದ ಕಾಂಗ್ರೆಸ್ ಸ್ಪೋಟಕ ಮಾಹಿತಿ ಕೊಟ್ಟ ಎಸ್‌ಬಿಐ’ ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್‌ ಮಾಡಿದೆ.

ಯೂಟ್ಯೂಬ್ ವಿಡಿಯೋ ಲಿಂಕ್ ಇಲ್ಲಿದೆ 

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ಚಂಡೀಗಢ ಕೂಡ ಇದೇ ಆರೋಪವನ್ನು ಬಿಜೆಪಿಯ ಮೇಲೆ ಮಾಡಿದೆ. “ಶಾಕಿಂಗ್, ಪಾಕಿಸ್ತಾನ ಮೂಲದ ಹಬ್ ಪವರ್ ಕಂಪನಿ ಪುಲ್ವಾಮಾ ದಾಳಿ ನಡೆದ ವಾರಗಳ ನಂತರ ಚುನಾವಣಾ ಬಾಂಡ್‌ಗಳನ್ನು ದೇಣಿಗೆ ನೀಡಿದೆ. ನಮ್ಮ 40 ವೀರ ಯೋಧರ ಸಾವಿನಿಂದ ಇಡೀ ದೇಶ ನೋವಿನಲ್ಲಿದ್ದ ಸಮಯ ಕೆಲವರು ಪಾಕಿಸ್ತಾನದಿಂದ ದೇಣಿಗೆ ಪಡೆದು ಖುಷಿ ಪಟ್ಟಿದ್ದರು. ಈಗ ಹೇಳಿ, ಪುಲ್ವಾಮ ದಾಳಿಯ ಬಗ್ಗೆ ಯಾಕೆ ಯಾವುದೇ ತನಿಖೆ ನಡೆದಿಲ್ಲ ಮತ್ತು ಯಾರಿಗೂ ಶಿಕ್ಷೆಯಾಗಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಫ್ಯಾಕ್ಟ್‌ಚೆಕ್‌: ಟಿವಿ ವಿಕ್ರಮದ ನಿರೂಪಕಿ ಮುಮ್ತಾಝ್ ಹೇಳಿರುವಂತೆ ಕಾಂಗ್ರೆಸ್ ಮತ್ತು ಚಂಡೀಗಢ ಕಾಂಗ್ರೆಸ್ ಹೇಳಿರುವಂತೆ ಬಿಜೆಪಿ ಪಾಕಿಸ್ತಾನದಿಂದ 10 ಕೋಟಿ ರೂ. ದೇಣಿಗೆ ಪಡೆದಿದೆಯಾ? ಎಂದು ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ.

ಇದಕ್ಕಾಗಿ ಮೊದಲು ನಾವು ಹಬ್ ಪವರ್ ಕಂಪನಿಯ ಮೂಲವನ್ನು ಹುಡುಕಾಡಿದ್ದೇವೆ. ಆ ಕಂಪನಿ ಭಾರತದ್ದಾ? ಇಲ್ಲಾ ಪಾಕಿಸ್ತಾನದ್ದಾ ಎಂಬ ಮಾಹಿತಿಯನ್ನು ಹುಡುಕಿದ್ದೇವೆ. ಈ ವೇಳೆ ಹಬ್ ಪವರ್ ಕಂಪನಿಯು ಭಾರತದ ಜಿಎಸ್‌ಟಿ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿರುವುದು ಕಂಡು ಬಂದಿದೆ. 07BWNPM0985J1ZX ಇದು ಆ ಕಂಪನಿಯ ಜಿಎಸ್‌ಟಿ ನಂಬರ್ ಆಗಿದೆ. ಅದರಲ್ಲಿ ಕಂಪನಿಯ ಮೂಲ ಭಾರತವಾಗಿದ್ದು, ಅದರ ಕೇಂದ್ರ ಕಚೇರಿ ದೆಹಲಿಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ಹಬ್ ಪವರ್ ಕಂಪನಿಯು ರವಿ ಮೆಹ್ರಾ ಎಂಬ ವ್ಯಕ್ತಿಯ ಒಡೆತನದಲ್ಲಿದೆ. ಇದನ್ನು ನವೆಂಬರ್ 12, 2018 ರಂದು ನೋಂದಾಯಿಸಲಾಗಿದೆ. ಇದರ ಪ್ರಮುಖ ವ್ಯಾಪಾರ ಸ್ಥಳವು ನವದೆಹಲಿಯ ಗೀತಾ ಕಾಲೋನಿಯಲ್ಲಿರುವ ವಿಳಾಸವಾಗಿದೆ.

ಮೇಲ್ಗಡೆ ನಾವು ಉಲ್ಲೇಖಿಸಿದ ಮಾಹಿತಿ ಪ್ರಕಾರ ಕಂಪನಿ ಭಾರತದ್ದಾಗಿರುವುದರಿಂದ ಇಲ್ಲಿ ಯಾವುದೇ ರಾಜಕೀಯ ಪಕ್ಷ ದೇಣಿಗೆ ಪಡೆದಿದ್ದರೂ, ಅದು ಪಾಕಿಸ್ತಾನದ್ದು ಎಂದು ಎನಿಸುವುದಿಲ್ಲ. ಆದ್ದರಿಂದ ಮೊದಲನೆಯದಾಗಿ ಪಾಕಿಸ್ತಾನದಿಂದ ದೇಣಿಗೆ ಪಡೆಯಲಾಗಿದೆ ಎಂಬುವುದು ಸುಳ್ಳು.

ಹಾಗಾದರೆ, ಹಬ್ ಪವರ್ ಕಂಪನಿ ಪಾಕಿಸ್ತಾನದ್ದು ಎಂಬ ಸುದ್ದಿ ಹೇಗೆ ಹಬ್ಬಿತು ಎಂಬುವುದರ ಬಗ್ಗೆ ನಾವು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಪಾಕಿಸ್ತಾನದ ‘ಹಬ್ಕೋ’ ಎಂಬ ಕಂಪನಿಯ ಹೆಸರು ನಮಗೆ ಸಿಕ್ಕಿದೆ. ಅದರ ಸಾಮಾಜಿಕ ಜಾಲತಾಣ ಎಕ್ಸ್‌ ಪರಿಶೀಲಿಸಿದಾಗ ಅಲ್ಲೊಂದು ಮಾಧ್ಯಮ ಪ್ರಕಟನೆ ನಮಗೆ ಲಭ್ಯವಾಗಿದೆ.

ಮಾರ್ಚ್ 15, 2024ರಂದು ಪೋಸ್ಟ್ ಮಾಡಲಾದ ಮಾಧ್ಯಮ ಪ್ರಕಟನೆಯಲ್ಲಿ, “ಭಾರತದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ನಮ್ಮ ಹಬ್ಕೋ ಕಂಪನಿಯ ಹೆಸರನ್ನು ತಪ್ಪಾಗಿ ಬಳಸಿಕೊಳ್ಳಲಾಗ್ತಿದೆ. ಭಾರತದ ಹಬ್‌ ಪವರ್ ಎಂಬ ಕಂಪನಿಯೆಂದು ನಮ್ಮ ಕಂಪನಿಯ ಹೆಸರನ್ನು ಚುನಾವಣಾ ಬಾಂಡ್‌ಗೆ ತಳುಕು ಹಾಕಲಾಗಿದೆ. ನಮ್ಮ ಕಂಪನಿಯು ಪಾಕಿಸ್ತಾನದಲ್ಲಿ ನೋಂದಾಯಿತ ಕಂಪನಿಯಾಗಿದೆ. ಭಾರತದಲ್ಲಿ ನಾವು ಯಾವುದೇ ವ್ಯವಹಾರ ಹೊಂದಿಲ್ಲ. ಅಲ್ಲದೆ, ಭಾರತದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಮಾಡಿರುವ ಪಾವತಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಪಾಕಿಸ್ತಾನದಿಂದ ಹೊರಗೆ ಯಾವುದಾದರೂ ಪಾವತಿ ಮಾಡುವುದಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಅನುಮತಿ ಪಡೆದೇ ಮಾಡುತ್ತೇವೆ. ತಪ್ಪು ಮಾಹಿತಿಯನ್ನು ಹರಡಲು ಕಾರಣವಾಗುವ ಯಾವುದೇ ವಿಷಯವನ್ನು ಪ್ರಕಟಿಸುವ ಮೊದಲು ಸತ್ಯವನ್ನು ಪರಿಶೀಲಿಸಲು ನಾವು ಎಲ್ಲರನ್ನು ಒತ್ತಾಯಿಸುತ್ತೇವೆ. ಯಾವುದೇ ಹೆಚ್ಚಿನ ವಿಚಾರಣೆಗಳು ಅಥವಾ ಸ್ಪಷ್ಟೀಕರಣಗಳಿಗಾಗಿ, ನಮ್ಮ ಅಧಿಕೃತ ವೆಬ್‌ಸೈಟ್ www.hubpower.com ನಲ್ಲಿನ ವಿವರಗಳ ಪ್ರಕಾರ ನಮ್ಮನ್ನು ಸಂಪರ್ಕಿಸಬಹುದು” ಎಂದು ಹೇಳಿದೆ.

ಈ ಮಾಧ್ಯಮ ಪ್ರಕಟಣೆ ಮತ್ತು ಮೇಲ್ಗಡೆ ನಾವು ಉಲ್ಲೇಖಿಸಿರುವ ಜಿಎಸ್‌ಟಿ ನೋಂದಣಿಯ ಪ್ರಕಾರ, ಹಬ್‌ಪವರ್ ಮತ್ತು ಹಬ್ಕೋ ಎರಡು ಬೇರೆ ಕಂಪನಿಗಳಾಗಿದೆ. ಹಬ್‌ಪವರ್‌ ಭಾರತದ್ದು ಮತ್ತು ಹಬ್ಕೋ ಪಾಕಿಸ್ತಾನದ ಕಂಪನಿಯಾಗಿದೆ. ಹಾಗಾಗಿ, ಪಾಕಿಸ್ತಾನದ ಕಂಪನಿಯಿಂದ ದೇಣಿಗೆ ಪಡೆಯಲಾಗಿದೆ ಎಂಬುವುದು ಸುಳ್ಳು. ಇಲ್ಲಿ ಹಬ್ಕೋ ಕಂಪನಿಗೆ ‘ಹಬ್‌ಪವರ್’ ಎಂದೂ ಹೆಸರಿದೆ. ಹಾಗಾಗಿ ಜನರು ಗೊಂದಲ ಮಾಡಿಕೊಂಡಿರುವ ಸಾಧ್ಯತೆ ಇದೆ.

ಮತ್ತೊಂದು ಮಹತ್ವದ ಮಾಹಿತಿಯೆಂದರೆ, ಚುನಾವಣಾ ಆಯೋಗ ಪ್ರಕಟಿಸಿರುವ ಚುನಾವಣಾ ಬಾಂಡ್‌ಗಳ ಮಾಹಿತಿಯಲ್ಲಿ ಯಾವ ಕಂಪನಿ ದೇಣಿಗೆ ನೀಡಿದೆ ಎಂಬುವುದು ಇದೆಯೇ ಹೊರತು, ಸ್ಪಷ್ಟವಾಗಿ ಇದೇ ರಾಜಕೀಯ ಪಕ್ಷಕ್ಕೆ ನೀಡಿದೆ ಎಂದಿಲ್ಲ. ಹಾಗಾಗಿ, ಹಬ್‌ಪವರ್ ಕಾಂಗ್ರೆಸ್‌ಗೇ 10 ಕೋಟಿ ನೀಡಿದೆ ಎಂಬುವುದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ : Fact Check: ಗುಜರಾತ್‌ನಲ್ಲಿ ಮುಸ್ಲಿಮರಿಂದ ಹಿಂದೂ ದೇವಾಲಯ ತೆರವುಗೊಳಿಸಲಾಗಿದೆ ಎಂಬುವುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...