Homeಮುಖಪುಟ'ಮಿಥ್ ವರ್ಸಸ್ ರಿಯಾಲಿಟಿ..'; ಸುಳ್ಳು ಸುದ್ದಿಗಳ ಪತ್ತೆಗೆ ಚುನಾವಣಾ ಆಯೋಗದಿಂದ ಹೊಸ ಯೋಜನೆ

‘ಮಿಥ್ ವರ್ಸಸ್ ರಿಯಾಲಿಟಿ..’; ಸುಳ್ಳು ಸುದ್ದಿಗಳ ಪತ್ತೆಗೆ ಚುನಾವಣಾ ಆಯೋಗದಿಂದ ಹೊಸ ಯೋಜನೆ

- Advertisement -
- Advertisement -

2024ರ ಲೋಕಸಭಾ ಚುನಾವಣೆಯ ದಿನಾಂಕಗಳ ಘೋಷಣೆಗೆ ಮುಂಚಿತವಾಗಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿ ಹರಡುವುದರ ವಿರುದ್ಧ ಎಚ್ಚರಿಕೆ ನೀಡಿದರು. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಪತ್ತೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಶೀಘ್ರದಲ್ಲೇ “ಮಿಥ್ ವರ್ಸಸ್ ರಿಯಾಲಿಟಿ” ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿದರು.

‘ಮಿಥ್ ವರ್ಸಸ್ ರಿಯಾಲಿಟಿ’ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಸುದ್ದಿ ಮತ್ತು ನಿರೂಪಣೆಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ವಿವರಗಳನ್ನು ಒದಗಿಸಲಿದೆ. ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದದ್ದು,ಸುಳ್ಳು ಸುದ್ದಿಗಳನ್ನು ಹುಟ್ಟುಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.

ಮಿಥ್ ವರ್ಸಸ್ ರಿಯಾಲಿಟಿಯು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಸಲಹೆ ನೀಡಲಾಗಿದೆ. ನಕಲಿ ಸುದ್ದಿಗಳ ಹುಟ್ಟುದಾರರನ್ನು ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕಠಿಣವಾಗಿ ಶಿಕ್ಷಿಸಲಾಗುತ್ತದೆ. ಐಟಿ ಕಾಯಿದೆಯ ವಿಭಾಗ 79 (3)(B) ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು ಪ್ರತಿ ರಾಜ್ಯದಲ್ಲಿ ನೋಡಲ್ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.

ಸುದ್ದಿಗಳ ನಕಲಿ ನಿರೂಪಣೆಗಳಿಗೆ ಕಡಿವಾಣ ಹಾಕುವ ಜತೆಗೆ ನಕಲಿ ಸುದ್ದಿಗಳ ವಿರುದ್ಧ ತ್ವರಿತ ಪ್ರತಿಕ್ರಿಯೆಗಾಗಿ ಎಸ್‌ಒಪಿ ಜಾರಿ. ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿ ನಕಲಿಗಳ ಬಗ್ಗೆ ಪೂರ್ವಭಾವಿ ಸಂವಹನವನ್ನು ಮಿಥ್ ವರ್ಸಸ್ ರಿಯಾಲಿಟಿ ಮಾಡಲಿದೆ.

ರಾಜಕೀಯ ಪಕ್ಷಗಳಿಗೆ ಆಯೋಗದಿಂದ ಸಲಹೆ:

ಮುಂಬರುವ ಲೋಕಸಭೆ ಚುನಾವಣೆ 2024ಕ್ಕೆ ರಾಜಕೀಯ ಪಕ್ಷಗಳಿಗೆ ಭಾರತೀಯ ಚುನಾವಣಾ ಆಯೋಗವು (ಇಸಿಐ) ಸಲಹೆಯನ್ನು ಬಿಡುಗಡೆ ಮಾಡಿತು. ವಿಭಜಿಸುವ ಬದಲು ಪ್ರೇರೇಪಿಸುವ ರಾಜಕೀಯ ಭಾಷಣವನ್ನು ಪೋಷಿಸಬೇಕು ಎಂದು ಹೇಳಿದರು. ಸಿಇಸಿ ರಾಜೀವ್ ಕುಮಾರ್ ಅವರು ಪಕ್ಷಗಳು ಸಮಸ್ಯೆ ಆಧಾರಿತ ಪ್ರಚಾರದಲ್ಲಿ ತೊಡಗಬೇಕು ಮತ್ತು ದ್ವೇಷದ ಭಾಷಣಗಳನ್ನು ತಪ್ಪಿಸಬೇಕು ಎಂದು ಒತ್ತಿ ಹೇಳಿದರು.

ಆಯೋಗದ ಸಲಹೆಯಲ್ಲಿರುವ ಇತರ ಅಂಶಗಳು

ಯಾವುದೇ ಜಾತಿ ಅಥವಾ ಧಾರ್ಮಿಕ ಪ್ರಚೋಧನೆ ಇರಬಾರದು. ಖಾಸಗಿ ಜೀವನದ ಯಾವುದೇ ಅಂಶದ ಬಗ್ಗೆ ಯಾವುದೇ ಟೀಕೆಗಳನ್ನು ಮಾಡುವಂತಿಲ್ಲ. ಪರಿಶೀಲಿಸದ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದ ದೂರವಿರುವುದು; ಜಾಹೀರಾತುಗಳನ್ನು ಸುದ್ದಿಯಾಗಿ ಮರೆಮಾಚುವಂತಿಲ್ಲ. ಪ್ರತಿಸ್ಪರ್ಧಿಗಳನ್ನು ನಿಂದಿಸುವ/ಅವಮಾನಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೇಲೆ ಸಂಯಮ ಇರಬೇಕು.

ಇದನ್ನೂ ಓದಿ; ‘ಪ್ರಚಾರದ ವೇಳೆ ಕೆಂಪು ಗೆರೆ ದಾಟಬೇಡಿ..’; ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read