ಚೀನಾ ದೇಶವು ನೆರೆಯ ಭಾರತ ದೇಶದಿಂದ ಎಷ್ಟು ಭೂಮಿ ವಶಪಡಿಸಿಕೊಂಡಿದೆ ಎಂಬುದನ್ನು ಬಹಿರಂಗಪಡಿಸಲು ಲಡಾಕ್‌ನಿಂದ ಸುಮಾರು 10,000 ಜನರು ಈ ತಿಂಗಳು ಚೀನಾದ ಗಡಿ ಉದ್ದಕ್ಕೂ ಮೆರವಣಿಗೆ ನಡೆಸಲಿದ್ದಾರೆ ಎಂದು ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ.
ವಾಂಗ್ಚುಕ್ ಅವರು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ಆರನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯತ್ವ ಮತ್ತು ಸಾಂವಿಧಾನಿಕ ರಕ್ಷಣೆಗಳ ಬೇಡಿಕೆಯ ಮುಂದಿಟ್ಟು ಕಳೆದ 14 ದಿನಗಳಿಂದ ಲೇಹ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ವಾಂಗ್ಚುಕ್ ಉಪ್ಪು ನೀರು ಕುಡಿದು ಲೇಹ್‌ನಲ್ಲಿ ಶೂನ್ಯ ತಾಪಮಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಾವು ಯಾವಾಗಲೂ ಹೋಗುತ್ತಿದ್ದ ಸ್ಥಳಗಳಿಗೆ ಹೋಗಲು ಈಗ ನಮಗೆ ಅನುಮತಿಸಲಾಗುತ್ತಿಲ್ಲ. ನಿರ್ದಿಷ್ಟ ಪ್ರದೇಶಗಳಲ್ಲಿ,ನಾವು ಹಿಂದೆ ಹೋಗುತ್ತಿದ್ದ ಸ್ಥಳ ತಲುಪುವ ಕಿಲೋಮೀಟರ್‌ಗಳ ಮೊದಲು ನಮ್ಮನ್ನು ತಡೆಯಲಾಗುತ್ತಿದೆ. ನಾವು ಅಲ್ಲಿಗೆ ಹೋಗಿ ಭೂಮಿ ನಮ್ಮಿಂದ ಕಳೆದುಹೋಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತೇವೆ ಎಂದು ವಾಂಗ್ಚುಕ್ ಹೇಳಿದ್ದಾರೆ.
ಇತರ ಪ್ರತಿಭಟನಾಕಾರರೊಂದಿಗೆ ನೆಲದ ವಾಸ್ತವವನ್ನು ಹೊರಗಿನ ಪ್ರಪಂಚಕ್ಕೆ ಎತ್ತಿ ತೋರಿಸಲು ಶೀಘ್ರದಲ್ಲೇ ಗಡಿಗೆ ಮೆರವಣಿಗೆಯನ್ನು ಆಯೋಜಿಸುತ್ತೇವೆ, ನಮ್ಮ ಅಲೆಮಾರಿಗಳು ದಕ್ಷಿಣಕ್ಕೆ ಬೃಹತ್ ಭಾರತೀಯ ಕೈಗಾರಿಕಾ ಸ್ಥಾವರಗಳಿಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಉತ್ತರಕ್ಕೆ ಚೀನಾದ ಅತಿಕ್ರಮಣದಿಂದ ಪ್ರಧಾನ ಹುಲ್ಲುಗಾವಲು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಸ್ಥಾವರಗಳಿಂದ ಅಲೆಮಾರಿಗಳು 1,50,000 ಚದರ ಕಿಲೋಮೀಟರ್ ಅವಿಭಾಜ್ಯ ಹುಲ್ಲುಗಾವಲು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತೊಂದೆಡೆ ಅವರು ಉತ್ತರದಿಂದ ಚೀನಾ ಅತಿಕ್ರಮಣದಿಂದ ಹುಲ್ಲುಗಾವಲು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ, ಚೀನೀಯರು ಕಳೆದ ಕೆಲವು ವರ್ಷಗಳಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಈ ನೆಲದ ವಾಸ್ತವತೆಯನ್ನು ತೋರಿಸಲು ನಾವು ಶೀಘ್ರದಲ್ಲೇ ರೈತರು ಸೇರಿದಂತೆ 10,000 ಜನರು ಗಡಿಗೆ ಮೆರವಣಿಗೆ ತೆರಳಲಿದ್ದೇವೆ. ಡೆಮ್‌ಚೋಕ್, ಚುಶುಲ್ ಸೇರಿದಂತೆ ಚೀನಾದೊಂದಿಗಿನ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಯಲ್ಲಿ ಮೆರವಣಿಗೆಯನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಜೂನ್ 15, 2020ರಂದು ಗಾಲ್ವಾನ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ಘಟನೆಯ ನಂತರ ಎರಡು ಸೇನೆಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ ಮತ್ತು ಬಫರ್ ವಲಯಗಳು ಅಥವಾ ನಿಷೇಧಿತ ಪ್ರದೇಶಗಳ ರಚನೆಗೆ ಕಾರಣವಾಗಿವೆ.
ಮಾರ್ಚ್ 4ರಂದು ಲಡಾಖ್ ನಾಗರಿಕ ಸಮಾಜದ ಮುಖಂಡರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ಮಾತುಕತೆಯ ವಿಫಲತೆಯ ನಂತರ ಸ್ಥಳೀಯರು ವಾಂಗ್ಚುಕ್ ಅವರ ಪ್ರತಿಭಟನೆಗೆ ಭಾರೀ ಬೆಂಬಲವನ್ನು ಸೂಚಿಸಿದ್ದಾರೆ. ಲಡಾಖ್‌ನಲ್ಲಿ ಬೌದ್ಧ ಬಹುಸಂಖ್ಯಾತ ಮತ್ತು ಶಿಯಾ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳನ್ನು ಪ್ರತಿನಿಧಿಸುವ ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸದಸ್ಯರು ಜಂಟಿಯಾಗಿ ಲಡಾಖ್‌ಗೆ ರಾಜ್ಯ ಸ್ಥಾನಕ್ಕಾಗಿ ಪ್ರತಿಭಟಿಸುತ್ತಿದ್ದಾರೆ.
Around 10,000 people from Ladakh will march to the border along China this month to showcase how much land has been lost to the neighbouring country, climate activist and education reformer Sonam Wangchuk said on Tuesday.
I ✍️ https://t.co/QTBVkFQPXd— Vijaita Singh (@vijaita) March 20, 2024
END OF DAY 14 OF #CLIMATEFAST
Many of you have been asking about my health. Well I'm more than alive & … just a bit less than kicking. And my claim is backed by proof now. Today the Physician paid a visit and after test found this:
BP: 120/70
Pulse: 72
Blood oxygen : 94%… pic.twitter.com/vReeqmYtMn— Sonam Wangchuk (@Wangchuk66) March 19, 2024
ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಪ್ರಕಾಶ್ ಅಂಬೇಡ್ಕರ್


