Homeಮುಖಪುಟಸಿಎಎ: ಮುಸ್ಲಿಂ ಸಮುದಾಯದ ವಿರುದ್ಧದ ಬಿಜೆಪಿಯ ಇನ್ನೊಂದು ಆಯುಧ!

ಸಿಎಎ: ಮುಸ್ಲಿಂ ಸಮುದಾಯದ ವಿರುದ್ಧದ ಬಿಜೆಪಿಯ ಇನ್ನೊಂದು ಆಯುಧ!

- Advertisement -
- Advertisement -

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಬೃಹತ್ ಹಗರಣ ಬಯಲಾಗುತ್ತಿದ್ದಂತೆ, ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಬಿಜೆಪಿ ಅನುಸರಿಸುತ್ತಿರುವ ರಾಜಕೀಯದ ಮಾದರಿಯನ್ನು ಗಮನಿಸಿದರೆ, ಚುನಾವಣಾ ಬಾಂಡ್ ಹಗರಣ ತನ್ನಗಾಗಿಸಲು ಸಿಎಎ ಅನುಷ್ಠಾನ ಮಾಡಲಾಗಿದೆ ಎಂದ ಗಮನಿಸಬಹುದು ಮತ್ತು ಮುಸ್ಲಿಂ ಸಮುದಾಯದ ವಿರುದ್ಧದ ಬಿಜೆಪಿಯ ಇನ್ನೊಂದು ಆಯುಧ ಇದಾಗಿದೆ ಎಂದು ರಾಮ್ ಪುನಿಯಾನಿ ದಿ ವೈರ್‌ನಲ್ಲಿ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಅಸ್ಸಾಂನಲ್ಲಿ ಕೈಗೊಂಡ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ನಂತರ ಭಾರತದಲ್ಲಿ ಸಿಎಎ ಮುನ್ನೆಲೆಗೆ ಬಂದಿದೆ. ಜನರಲ್ಲಿ ತಮ್ಮ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಕೇಳಲಾಯಿತು. ಅಸ್ಸಾಂನಲ್ಲಿ 15 ಮಿಲಿಯನ್ ಬಾಂಗ್ಲಾದೇಶಿ ಮುಸ್ಲಿಮರು ನುಸುಳಿದ್ದಾರೆ ಮತ್ತು ಈ ಕ್ರಮವು ಅವರನ್ನು ಹೊರಹಾಕಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿತ್ತು. ಅವರನ್ನು ಗೆದ್ದಲುಗಳು ಎಂದು ಕರೆಯಲಾಯ್ತು, ಬಂಧನ ಕೇಂದ್ರಗಳಲ್ಲಿಡಲಾಯತು. ಈಗ ಅಸ್ಸಾಂ NRCಯ ಫಲಿತಾಂಶಗಳು ಆಶ್ಚರ್ಯಕರವಾಗಿವೆ. ಸರಿಯಾದ ದಾಖಲೆಗಳಿಲ್ಲದ ಸುಮಾರು 19 ಲಕ್ಷ ಜನರಲ್ಲಿ 7 ಲಕ್ಷ ಮುಸ್ಲಿಮರು ಎನ್ನುವುದು ಗಮನಾರ್ಹವಾಗಿದೆ.

ಸಿಎಎ ಪ್ರಕಾರ, ಡಿಸೆಂಬರ್ 2014ರ ಮೊದಲು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಜೈನರಿಗೆ ಪೌರತ್ವ ನೀಡಬೇಕಾಗಿತ್ತು. ಕುತೂಹಲಕಾರಿಯಾಗಿ, ಮುಸ್ಲಿಮರನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ. ಇದು ದೇಶದಾದ್ಯಂತ ಬಲವಾದ ಪ್ರತಿಭಟನೆಗಳಿಗೆ ಕಾರಣವಾಯಿತು ಮತ್ತು ವಿಶೇಷವಾಗಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (AMU) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪ್ರತಿಭಟನೆಗಳನ್ನು ಕ್ರೂರವಾಗಿ ಹತ್ತಿಕ್ಕಲಾಗಿತ್ತು. ಇದು ಹೊಸದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ಸ್ವತಂತ್ರ ಭಾರತದ ಅತಿದೊಡ್ಡ ಜನಾಂದೋಲನಕ್ಕೆ ಕಾರಣವಾಯಿತು. ಈ ಪ್ರತಿಭಟನೆಗಳು ದೇಶದಾದ್ಯಂತ ಮುಸ್ಲಿಂ ಮಹಿಳೆಯರ ನೇತೃತ್ವದಲ್ಲಿ ನಡೆದವು. ಕೈಯಲ್ಲಿ ಸಂವಿಧಾನ ಮತ್ತು ಹೃದಯದಲ್ಲಿ ಗಾಂಧಿಯನ್ನು ಇಟ್ಟುಕೊಂಡು ಪ್ರತಿಭಟನೆಗಳು ನಡೆದಿದ್ದವು. ಆ ಸಮಯದಲ್ಲಿ ಬಿಜೆಪಿಯ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ಈ ಪ್ರತಿಭಟನೆಗಳು ಹಿಂದೂಗಳಿಗೆ ಬೆದರಿಕೆಯಾಗಿದ್ದು, ಪ್ರತಿಭಟನಾಕಾರರು ಅವರನ್ನು ಅತ್ಯಾಚಾರ ಮಾಡಿ ಕೊಲ್ಲಬಹುದು ಎಂದು ಹೇಳಿದ್ದರು. ಮತ್ತೊಬ್ಬ ಬಿಜೆಪಿ ನಾಯಕ ಕಪಿಲ್ ಶರ್ಮಾ, ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳಿಸದಿದ್ದರೆ ಅವರೇ ಅದನ್ನು ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆಲ್ಲ ಕಡಿವಾಣ ಹಾಕಲು ಆಗಿನ ರಾಜ್ಯ ಸಚಿವ ಔನ್ರಾಗ್ ಠಾಕೂರ್ ‘ಗೋಲಿ ಮಾರೋ’ ಎಂಬ ಘೋಷಣೆಯನ್ನು ನೀಡಿದರು. ಶೀಘ್ರದಲ್ಲೇ ರಾಜಧಾನಿಯಲ್ಲಿ ದಂಗೆಗಳು ನಡೆದವು – 51 ಜನರು ಪ್ರಾಣ ಕಳೆದುಕೊಂಡರು ಅದರಲ್ಲಿ 38 ಮಂದಿ ಮುಸ್ಲಿಮರಾಗಿದ್ದರು. ಇದು ಮುಸ್ಲಿಮರ ವಿರುದ್ಧ ಪ್ರಚೋದಿಸಲು ಸಿಎಎಯನ್ನು ಆಯುಧವಾಗಿ ಬಳಸಿಕೊಂಡಿರುವುದನ್ನು ಸ್ಪಷ್ಟಪಡಿಸುತ್ತದೆ.

ನೆರೆಯ ದೇಶಗಳಿಂದ ಕಿರುಕುಳಕ್ಕೊಳಗಾದ ಜನರಿಗೆ ಆಶ್ರಯ ನೀಡುವ ಮಾನದಂಡಗಳು ಯಾವುವು? ಇಂದಿರಾ ಜೈಸಿಂಗ್ ಅವರು ಗಮನಸೆಳೆದಿದ್ದಾರೆ; ಸಂವಿಧಾನವು ಯಾವುದೇ ಧರ್ಮವನ್ನು ಲೆಕ್ಕಿಸದೆ ಹುಟ್ಟು, ವಂಶಸ್ಥರು ಮತ್ತು ವಲಸೆಯ ಮೂಲಕ ಪೌರತ್ವವನ್ನು ನೀಡುತ್ತದೆ, ಪೌರತ್ವದ ಕಾಯಿದೆ -1955ರ ಕಾಯಿದೆಯು ಪೌರತ್ವವನ್ನು ನೀಡಲು ಧರ್ಮವನ್ನು ಮಾನದಂಡವನ್ನಾಗಿ ಮಾಡುವುದಿಲ್ಲ ಎಂದು ಹೇಳುತ್ತದೆ. ಆದರೆ ತಿದ್ದುಪಡಿ ನಿಯಮ ಕೇವಲ ಧರ್ಮದ ಆಧಾರದ ಮೇಲೆ ನೈಸರ್ಗಿಕೀಕರಣದ ಮೂಲಕ ಪೌರತ್ವವನ್ನು ನೀಡುತ್ತದೆ. ಈ ತಿದ್ದುಪಡಿಯು ಆರ್ಟಿಕಲ್ 14 ನ್ನು ಉಲ್ಲಂಘಿಸುತ್ತದೆ, ಆರ್ಟಿಕಲ್ 14 ಧರ್ಮವನ್ನು ಲೆಕ್ಕಿಸದೆ ಕಾನೂನಿನ ಮುಂದೆ ಸಮಾನತೆ ಮತ್ತು ಸಮಾನ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ. ಆರ್ಟಿಕಲ್ 14 ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುತ್ತದೆ. CAA ಮುಸ್ಲಿಮರಿಗೆ ತ್ವರಿತ ಪೌರತ್ವವನ್ನು ನಿರಾಕರಿಸುತ್ತದೆ. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಹೊರತುಪಡಿಸಿ ಇತರ ದೇಶಗಳ ಜನರನ್ನು ಹೊರಗಿಡುತ್ತದೆ. ಪಾಕಿಸ್ತಾನದಲ್ಲಿರುವ ಅಹ್ಮದೀಯ ಮುಸ್ಲಿಮರು ಅತ್ಯಂತ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಲ್ಲಿ ಒಬ್ಬರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಆದರೆ ಧಾರ್ಮಿಕ ಮಾನದಂಡಗಳ ಕಾರಣದಿಂದಾಗಿ ಸಿಎಎ ಮೂಲಕ ಅವರಿಗೆ ಪೌರತ್ವವನ್ನು ನಿರಾಕರಿಸಲಾಗಿದೆ.

ನೆರೆಯ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ತ್ವರಿತ ಪೌರತ್ವವನ್ನು ಒದಗಿಸಲು CAAನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ. ಆದರೂ, ಕಾಯಿದೆಯ ಕಾನೂನು ಅಥವಾ ನಿಯಮಗಳು ಕಿರುಕುಳವನ್ನು ಉಲ್ಲೇಖಿಸುವುದಿಲ್ಲ ಮತ್ತು ಪೌರತ್ವವನ್ನು ನೀಡುವ ಮೊದಲು ಕಿರುಕುಳದ ಪುರಾವೆ ಅಗತ್ಯವಿಲ್ಲ ಎಂದು ಹೇಳುತ್ತಿದೆ. CAA ನಿಯಮಗಳ ಅಡಿಯಲ್ಲಿ, ಮೂರು ದೇಶಗಳ ವಲಸಿಗರು ತಮ್ಮ ಧರ್ಮ, ಭಾರತೀಯ ಪ್ರವೇಶ ದಿನಾಂಕ ಮತ್ತು ಮೂಲದ ದೇಶ ಮತ್ತು ಭಾರತೀಯ ಭಾಷೆಯ ಜ್ಞಾನವನ್ನು ಮಾತ್ರ ಸಾಬೀತುಪಡಿಸಬೇಕು. ಮೂಲದ ದೇಶದ ಪುರಾವೆಗೆ ಸಂಬಂಧಿಸಿದ ನಿಯಮಗಳನ್ನು ಗಣನೀಯವಾಗಿ ಸಡಿಲಿಸಲಾಗಿದೆ. ಭಾರತದಿಂದ ಮಾನ್ಯವಾದ ವಸತಿ ಪರವಾನಗಿ ಮತ್ತು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನೀಡಿದ ಮಾನ್ಯವಾದ ಪಾಸ್‌ಪೋರ್ಟ್‌ನ ಹಿಂದಿನ ಅಗತ್ಯವನ್ನು ತೆಗೆದುಹಾಕಲಾಗಿದೆ. ಕಿರುಕುಳದ ಪುರಾವೆಯನ್ನು ಕೇಳಲಾಗಿಲ್ಲ ಎನ್ನವುದು ಗಮನಾರ್ಹ.

ಈ ದೇಶಗಳಲ್ಲಿರುವ ಹಿಂದೂಗಳು ಮಾತ್ರ ಭಾರತಕ್ಕೆ ಬರಬಹುದು ಮತ್ತು ಮುಸ್ಲಿಮರು ಇಸ್ಲಾಂ ಧರ್ಮವನ್ನು ಅನುಸರಿಸುವ ಯಾವುದೇ ದೇಶಕ್ಕೆ ಹೋಗಬಹುದು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಈ ತರ್ಕವು ದೋಷಪೂರಿತವಾಗಿದೆ. ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತ ಸಮುದಾಯಗಳನ್ನು ಹೊರತುಪಡಿಸಿ, ಅಹ್ಮದೀಯರು ಮತ್ತು ಕಡಿಯಾನಿಗಳು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಶೋಷಣೆಗೆ ಒಳಗಾದ ಸಮುದಾಯಗಳಿಗೆ ನಾವು ಆಶ್ರಯ ನೀಡುವ ಬಗ್ಗೆ ಮಾತನಾಡುವಾಗ ನಮ್ಮ ಮಾನವೀಯ ಮೌಲ್ಯಗಳು ಮುನ್ನೆಲೆಗೆ ಬರಬೇಕು. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಕಿರುಕುಳಕ್ಕೊಳಗಾದ ಗುಂಪುಗಳು ಶ್ರೀಲಂಕಾದಲ್ಲಿ ಹಿಂದೂಗಳು (ತಮಿಳರು) ಮತ್ತು ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳು. ಭಾರತದಲ್ಲಿ ಪೌರತ್ವ ನೀಡುವವರ ಪಟ್ಟಿಯಿಂದ ಅವರನ್ನು ಏಕೆ ಕೈಬಿಡಲಾಗಿದೆ? ಇದು ಭಾರತದಲ್ಲಿನ ಮುಸ್ಲಿಂ ಸಮುದಾಯದ ವಿರುದ್ಧ ಬಳಸಲಿರುವ ಮತ್ತೊಂದು ಸಾಧನವಾಗಿದೆ. ಮುಸ್ಲಿಂ ಸಮುದಾಯದ ವಿರುದ್ಧ ಭಾರತದಲ್ಲಿ ವ್ಯಾಪಕವಾದ ದ್ವೇಷ ಹಿಂಸೆಯಂತಹ ಘಟನೆಗಳು ನಾವು ಕಂಡಿದ್ದೇವೆ. ಬಿಜೆಪಿ ತನ್ನ ಚುನಾವಣಾ ಶಕ್ತಿಯನ್ನು ಬಲಪಡಿಸಲು ಭಾವನಾತ್ಮಕ ಮತ್ತು ವಿಭಜಕ ವಿಷಯಗಳನ್ನು ನಿರಂತರವಾಗಿ ಮುನ್ನೆಲೆಗೆ ತಂದಿದೆ. ಅದರ ಒಂದು ಭಾಗವೇ CAA ಎನ್ನುವುದು ಗೌಪ್ಯವಾಗಿ ಉಳಿದಿಲ್ಲ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಪ್ರಕಾಶ್ ಅಂಬೇಡ್ಕರ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...