ಇತಿಹಾಸಕಾರ ರಾಮಚಂದ್ರ ಗುಹಾ ಅವರಿನ್ನು ಈ ವರ್ಷದ ಗೌರವ ವಿದೇಶಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಮೆರಿಕನ್ ಹಿಸ್ಟಾರಿಕಲ್ ಅಸೋಸಿಯೇಷನ್ ಸೋಮವಾರ ಪ್ರಕಟಿಸಿದೆ. ಜದುನಾಥ್ ಸರ್ಕಾರ್ ಮತ್ತು ರೊಮಿಲಾ ಥಾಪರ್ ನಂತರ 1886 ರಿಂದ ಈ ಪ್ರಶಸ್ತಿಯನ್ನು ಪಡೆದ ಮೂರನೇ ಭಾರತೀಯ ಇತಿಹಾಸಕಾರ ಗುಹಾರವರಾಗಿದ್ದಾರೆ.
ಈ ಪ್ರಶಸ್ತಿಯು ಅಮೆರಿಕದ ಹೊರಗೆ ಕೆಲಸ ಮಾಡುವ ಇತಿಹಾಸಕಾರು, ತಮ್ಮ ದೇಶದಲ್ಲಿನ ಅಮೇರಿಕನ್ ವಿದ್ವಾಂಸರಿಗೆ ನೀಡಿದ ವಿಶೇಷ ವಿದ್ಯಾರ್ಥಿವೇತನ ಮತ್ತು ಸಹಾಯಕ್ಕಾಗಿ ಕೊಡಲಾಗುತ್ತದೆ. ಜನವರಿ 3 ರಂದು ನ್ಯೂಯಾರ್ಕ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಗುಹಾರವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
Deeply honoured to be on this list of AHA awardees. At times like this one most remembers those to whom one owes the most. Three people made me a scholar; my wife Sujata, my teacher (the late) Anjan Ghosh, and my first (and finest) editor, Dr Rukun Advani. https://t.co/hgLn0tuYXL
— Ramachandra Guha (@Ram_Guha) October 8, 2019
ಗುಹಾ ಮಂಗಳವಾರ ಎಎಚ್‌ಎ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದನ್ನು “ಮಹತ್ವದ ಗೌರವ” ಎಂದು ಹೇಳಿದರು. “ಈ ಸಮಯದಲ್ಲಿ ಒಬ್ಬರು ಹೆಚ್ಚು ಋಣಿಯಾಗಿರುವವರನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ” “ಮೂರು ಜನರು ನನ್ನನ್ನು ವಿದ್ವಾಂಸರನ್ನಾಗಿ ಮಾಡಿದರು; ನನ್ನ ಪತ್ನಿ ಸುಜಾತಾ, ನನ್ನ ಶಿಕ್ಷಕ (ದಿವಂಗತ) ಅಂಜನ್ ಘೋಷ್ ಮತ್ತು ನನ್ನ ಮೊದಲ (ಮತ್ತು ಅತ್ಯುತ್ತಮ) ಸಂಪಾದಕ ಡಾ. ರುಕುನ್ ಅಡ್ವಾಣಿ.” ಎಂದು ಅವರು ಟ್ವೀಟ್ ಮಾಡಿದ್ದಾರೆ.


