Homeಅಂತರಾಷ್ಟ್ರೀಯಇರಾನ್‌ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು ಯುಎಸ್‌, ಇಸ್ರೇಲ್‌ ಅಲ್ಲ: ವರದಿ

ಇರಾನ್‌ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು ಯುಎಸ್‌, ಇಸ್ರೇಲ್‌ ಅಲ್ಲ: ವರದಿ

- Advertisement -
- Advertisement -

ಇಸ್ರೇಲ್‌ ಮೇಲೆ ಇರಾನ್‌ ಏಪ್ರಿಲ್ 13ರಂದು ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಇರಾನ್ ಇಸ್ರೇಲ್ ಕಡೆಗೆ ಉಡಾಯಿಸಿದ ಬಹುಪಾಲು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಯುನೈಟೆಡ್ ಸ್ಟೇಟ್ಸ್ ತಡೆದು ಹೊಡೆದುರುಳಿಸಿತು, ಇಸ್ರೇಲ್ ಅಲ್ಲ ಎಂದು ದಾಳಿಯ ಡೇಟಾವನ್ನು ವಿಶ್ಲೇಷಿಸುವ ವರದಿ ಹೇಳಿದೆ.

ಅಮೆರಿಕದ ಸುದ್ದಿವಾಹಿನಿ ದಿ ಇಂಟರ್‌ಸೆಪ್ಟ್‌ನೊಂದಿಗೆ ಮಾತನಾಡಿದ ಯುಎಸ್ ಮಿಲಿಟರಿ ಅಧಿಕಾರಿಗಳು, ಇಸ್ರೇಲ್ ತಲುಪುವ ಮೊದಲು ಇರಾನ್‌ ಉಡಾಯಿಸದ ಅರ್ಧಕ್ಕಿಂತ ಹೆಚ್ಚು ಕ್ಷಿಪಣಿಗಳನ್ನು ಇಸ್ರೇಲ್‌ ತಲುಪುವ ಮೊದಲು ಯುಎಸ್ ಹೊಡೆದುರುಳಿಸಿದೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ, ಇರಾನ್ ಶನಿವಾರ ಇಸ್ರೇಲ್ ಮೇಲೆ ನೇರ ದಾಳಿ ನಡೆಸಿದೆ. 300ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲ್‌ ಕಡೆ ಹಾರಿಸಿದೆ. ದಾಳಿಯ ನಂತರ ಮಿತ್ರರಾಷ್ಟ್ರಗಳಾದ US, ಜೋರ್ಡಾನ್, ಫ್ರಾನ್ಸ್ ಮತ್ತು ಬ್ರಿಟನ್ ಸಹಾಯದಿಂದ 99 ಪ್ರತಿಶತಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್‌ ಹೇಳಿತ್ತು.

ಇರಾನ್‌ನ ಅರ್ಧದಷ್ಟು ಶಸ್ತ್ರಾಸ್ತ್ರಗಳು ಕೆಲವು ರೀತಿಯ ತಾಂತ್ರಿಕ ವೈಫಲ್ಯವನ್ನು ಅನುಭವಿಸಿವೆ. ಉಳಿದ ಕ್ಷಿಪಣಿಗಳಲ್ಲಿ 80ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಯುಎಸ್ ನಾಶಪಡಿಸಿದೆ ಎಂದು ಯುಎಸ್ ಮಿಲಿಟರಿ ಪ್ರಾಥಮಿಕವಾಗಿ ಅಂದಾಜಿಸಿದೆ.

ಆದರೆ ಯುಎಸ್‌ ಎಲ್ಲಿ ಈ ಕ್ಷಿಪಣಿಗಳನ್ನು ತಡೆದಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಸೌದಿ ಅರೇಬಿಯಾದಲ್ಲಿ ಯುಎಸ್ ಸಕ್ರಿಯ ಮಿಲಿಟರಿ ನೆಲೆಯನ್ನು ಹೊಂದಿದೆ. ಇಸ್ರೇಲ್ ರಕ್ಷಣಾ ಪಡೆ (IDF) ಈ ಕುರಿತು ಹೇಳಿಕೆಯನ್ನು ಹೊರಡಿಸಿದ್ದು, ಸರಿಸುಮಾರು 25 ಕ್ರೂಸ್ ಕ್ಷಿಪಣಿಗಳನ್ನು ಐಎಎಫ್ (ಇಸ್ರೇಲಿ ಏರ್ ಫೋರ್ಸ್) ಫೈಟರ್ ಜೆಟ್‌ಗಳು ದೇಶದ ಗಡಿಯ ಹೊರಗೆ ತಡೆಹಿಡಿದಿದೆ ಎಂದು ಹೇಳಿದ್ದಾರೆ.

ಬ್ರಿಟನ್‌ನ ರಾಯಲ್ ಏರ್ ಫೋರ್ಸ್ (RAF) ಹಲವಾರು ಇರಾನಿನ ಕ್ಷಿಪಣಿಗಳನ್ನು ತಡೆದಿದೆ ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ, ಆದರೆ ಜೋರ್ಡಾನ್ ಸರ್ಕಾರವು ಇರಾನಿನ ಶಸ್ತ್ರಾಸ್ತ್ರಗಳನ್ನು ಉರುಳಿಸಿರುವ ಬಗ್ಗೆ ಮಾಹಿತಿ ನೀಡಿದೆ, ಆದರೆ ಉರುಳಿಸಿದ ಕ್ಷಿಪಣಿಗಳ ಬಗ್ಗೆ ಯಾವುದೇ ಸ್ಪಷ್ಟ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿಲ್ಲ.

ಇಸ್ರೇಲ್ ಪ್ರಕಾರ, ಇರಾನ್ 330ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ 30 ಕ್ರೂಸ್ ಕ್ಷಿಪಣಿಗಳು, ಸರಿಸುಮಾರು 180 ಶಾಹೆಡ್ ಡ್ರೋನ್‌ಗಳು ಮತ್ತು 120 ಎಮಾಡ್ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಒಳಗೊಂಡಿತ್ತು. ಇದರಲ್ಲಿ ಎಲ್ಲಾ ಡ್ರೋನ್‌ಗಳು ಮತ್ತು  ಕ್ಷಿಪಣಿಗಳನ್ನು ಇರಾನ್ ಭೂಪ್ರದೇಶದಿಂದ ಉಡಾಯಿಸಲಾಗಿದ್ದರೆ, ಕೆಲವು ಕ್ಷಿಪಣಿಗಳನ್ನು ಯೆಮೆನ್‌ನಿಂದ ಉಡಾವಣೆ ಮಾಡಲಾಗಿದೆ.

ಎಪ್ರಿಲ್ 1ರಂದು ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ವೈಮಾನಿಕ ದಾಳಿ ನಡೆಸಿತ್ತು. ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC)ನ ಹಿರಿಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಉಪ ಜನರಲ್ ಮೊಹಮ್ಮದ್ ಹಾದಿ ಹಜ್ರಿಯಾಹಿಮಿ ಸೇರಿದಂತೆ ಏಳು ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರ ತೀರಿಸುವುದಾಗಿ ಇರಾನ್‌ ಹೇಳಿತ್ತು.  ಇದರ ಬೆನ್ನಲಿ ಇಸ್ರೇಲ್ ಲೆಬನಾನ್‌ ಮೇಲೂ ವೈಮಾನಿಕ ದಾಳಿಯನ್ನು ನಡೆಸಿತ್ತು. ದಕ್ಷಿಣ ಲೆಬನಾನ್‍ನ ಅಸ್-ಸುಲ್ತಾನಿಯಾ ಪ್ರದೇಶದಲ್ಲಿ ಇಸ್ರೇಲ್‍ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ `ರದ್ವಾನ್ ಪಡೆ’ಯ ಕಮಾಂಡರ್ ಅಲಿ ಅಹ್ಮದ್ ಹುಸೈನ್ ಮೃತಪಟ್ಟಿದ್ದರು. ಗಾಝಾದಲ್ಲಿ ಹತ್ಯಾಕಾಂಡವನ್ನು ನಡೆಸಿದ್ದ ಇಸ್ರೇಲ್‌ನಿಂದ ಲೆಬನಾನ್‌, ಇರಾನ್‌ ಗುರಿಯಾಗಿಸಿಕೊಂಡು ನಡೆದಿದ್ದ ದಾಳಿ ಪ್ರಾದೇಶಿಕ ಸಂಘರ್ಷದ ಭೀತಿಯನ್ನು ಹಟ್ಟು ಹಾಕಿತ್ತು.

ಇದನ್ನು ಓದಿ: ಸಾಂವಿಧಾನಿಕ ಸಂಸ್ಥೆಗಳು ಪ್ರಧಾನಿಯ ವೈಯಕ್ತಿಕ ಸ್ವತ್ತಲ್ಲ: ರಾಹುಲ್‌ ಗಾಂಧಿ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ: ಇಂದು ಭಾರತದಲ್ಲಿ ಶೋಕಾಚರಣೆ

0
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿಗೆ ಗೌರವಾರ್ಥವಾಗಿ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ...