HomeಮುಖಪುಟFACT CHECK: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ

FACT CHECK: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ

- Advertisement -
- Advertisement -

“ರಸ್ತೆಯಲ್ಲಿ ನಮಾಜ್ ಮಾಡದಂತೆ ನೀವು ತಡೆಯುವುದಾದರೆ, ಉದ್ಯಾನವನಗಳಲ್ಲಿ ಯೋಗ ಕೂಡ ಮಾಡುವುದನ್ನು ನಾವು ತಡೆಯುತ್ತೇವೆ-ಪ್ರಿಯಾಂಕಾ ವಾದ್ರಾ”

“ಹಿಂದೂಗಳೇ, ಕಾಂಗ್ರೆಸ್ ಪಕ್ಷ ನೇರವಾಗಿ ಹಿಂದೂಗಳ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ನೀವಿನ್ನೂ ನಿಮ್ಮ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಬೆಂಬಲಿಸಿ ಇಂತಹ ದೇಶದ್ರೋಹಿಗಳಿಗೆ ಬಲ ತುಂಬುತ್ತೀರಾ?”

ಈ ರೀತಿ ಹೇಳಲಾದ ಪೋಸ್ಟರ್ ಒಂದು ಬಿಜೆಪಿ ಪರ ಮಾಧ್ಯಮ ಪೋಸ್ಟ್‌ ಕಾರ್ಡ್ ಹೆಸರಿನಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್ : ಪೋಸ್ಟ್‌ ಕಾರ್ಡ್ ಹೆಸರಿನ ಪೋಸ್ಟರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಹೇಳಿಕೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಷಯದ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.

ಇದಕ್ಕಾಗಿ ನಾವು ಮೊದಲು ಪ್ರಿಯಾಂಕಾ ಗಾಂಧಿ ಆ ರೀತಿಯ ಹೇಳಿಕೆ ನೀಡಿದ್ದಾರೆಯೇ? ಎಂದು ತಿಳಿದುಕೊಳ್ಳಲು ಗೂಗಲ್‌ನಲ್ಲಿ ಹುಡುಕಾಡಿದ್ದೇವೆ.

ನಮ್ಮ ಪರಿಶೀಲನೆ ವೇಳೆ “ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿರುವ ಯಾವುದೇ ಮಾಧ್ಯಮ ವರದಿಗಳು ನಮಗೆ ದೊರೆತಿಲ್ಲ. ಹಾಗಾಗಿ, ವೈರಲ್ ಪೋಸ್ಟರ್‌ನಲ್ಲಿರುವ ವಿಚಾರ ಸುಳ್ಳು ಎಂದು ಖಚಿತಪಡಿಸಬಹುದು.

ವೈರಲ್ ಪೋಸ್ಟರ್‌ನಲ್ಲಿರುವ ವಿಷಯದ ಕುರಿತು ನಾವು ಇನ್ನಷ್ಟು ಸರ್ಚ್‌ ಮಾಡಿದಾಗ ಮೇ 27,2020ರಂದು ಇಂಗ್ಲಿಷ್ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ factly.in ಈ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಿರುವುದು ಗೊತ್ತಾಗಿದೆ. factly.in ಕೂಡ ಪ್ರಿಯಾಂಕಾ ಗಾಂಧಿ ಆ ರೀತಿಯ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈ ಬಗ್ಗೆ ಯಾವುದೇ ಮಾಧ್ಯಮ ವರದಿಗಳು ದೊರೆತಿಲ್ಲ ಎಂದು ಹೇಳಿದೆ.

ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದ ಅಂಶವೇನೆಂದರೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಪ್ರಿಯಾಂಕಾ ಗಾಂಧಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹಿಂದಿಯಲ್ಲಿ ಸುಳ್ಳು ಪೋಸ್ಟರ್ ಮಾಡಿ ಹಂಚಿಕೊಳ್ಳಲಾಗಿತ್ತು. ಅದನ್ನು ನೋಡಿ ಕನ್ನಡದ ಪೋಸ್ಟ್ ಕಾರ್ಡ್‌ ಪೋಸ್ಟರ್‌ ಮಾಡಿ ಹಂಚಿರುವ ಸಾಧ್ಯತೆಯಿದೆ.

ಇದನ್ನೂ ಓದಿ : Fact Check : ನಿರುದ್ಯೋಗ ಕುರಿತ ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ‘ಡೀಪ್ ಫೇಕ್’ ಅಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಎಎ ಅಡಿ ಪೌರತ್ವ ನೀಡಿದ ಕೇಂದ್ರ ಸರ್ಕಾರ: ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ಮುಸ್ಲಿಂ ಲೀಗ್

0
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಇಲಾಖೆ ಪ್ರಾರಂಭಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 300ಕ್ಕೂ ಅಧಿಕ...