ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ (ಮೈತ್ರಿ ಅಭ್ಯರ್ಥಿ) ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರ ಬೆಂಬಲಿಗ ರೈತನ ತೋಟಕ್ಕೆ ಕಾಂಗ್ರೆಸ್ಸಿಗರು ಅಥವಾ ಡಿ.ಕೆ ಸುರೇಶ್ ಬೆಂಬಲಿಗರು ಬೆಂಕಿಯಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನು ಅಲ್ಲಗಳೆದಿರುವ ಕಾಂಗ್ರೆಸ್, ವಿಡಿಯೋ ಹಂಚಿಕೊಂಡಿದೆ.
ಇಂದು (ಏ.16) ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಬಿಜೆಪಿ, “ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಕೊತ್ವಾಲ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆ ದಿನಗಳ ಗೂಂಡಾಗಳು ಈ ದಿನಗಳಲ್ಲೇ ಬೆಂಕಿ ಹಿಡಿದು ಭಸ್ಮ ಮಾಡಲು ನಿಂತಿದ್ದಾರೆ. ಡಾ. ಸಿ. ಎನ್. ಮಂಜುನಾಥ್ ಅವರನ್ನು ಕುಣಿಗಲ್ ತಾಲೂಕಿನ ರೈತ ಪ್ರೇಮ್ ಕುಮಾರ್ ಬೆಂಬಲಿಸಿದ ಕಾರಣಕ್ಕೆ ತೋಟವನ್ನೇ ಸುಟ್ಟು ಕರಕಲು ಮಾಡಿದ್ದಾರೆ. ಒಂದು ಕಡೆ ಚುನಾವಣಾ ಅಧಿಕಾರಿಗಳಿಂದ ಊಟ ಬಡಿಸಿಕೊಳ್ಳುವ ಉಪಮುಖ್ಯಮಂತ್ರಿಗಳು, ಎಲ್ಲೆಡೆ ಮತದಾರರನ್ನು ಬೆದರಿಸುತ್ತಾ ಧಮ್ಕಿ ಹಾಕಿದ ಪರಿಣಾಮವೇ ಈ ಘಟನೆಗೆ ಕಾರಣ” ಎಂದು ಆರೋಪಿಸಿತ್ತು.
ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಕೊತ್ವಾಲ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ.
ಡಿಸಿಎಂ @DKShivakumar ಅವರ ಆ ದಿನಗಳ ಗೂಂಡಾಗಳು ಈ ದಿನಗಳಲ್ಲೇ ಬೆಂಕಿ ಹಿಡಿದು ಭಸ್ಮ ಮಾಡಲು ನಿಂತಿದ್ದಾರೆ.
ಡಾ. ಸಿ. ಎನ್. ಮಂಜುನಾಥ್ ಅವರನ್ನು ಕುಣಿಗಲ್ ತಾಲೂಕಿನ ರೈತ ಪ್ರೇಮ್ ಕುಮಾರ್ ಬೆಂಬಲಿಸಿದ ಕಾರಣಕ್ಕೆ ತೋಟವನ್ನೇ ಸುಟ್ಟು ಕರಕಲು ಮಾಡಿದ್ದಾರೆ.
ಒಂದು… pic.twitter.com/Pvuib2SGA7
— BJP Karnataka (@BJP4Karnataka) April 16, 2024
ಈ ಆರೋಪ ಸುಳ್ಳು ಎಂದು ಕಾಂಗ್ರೆಸ್ ಮತ್ತೊಂದು ವಿಡಿಯೋ ಹಂಚಿಕೊಂಡಿದೆ. “ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ತನ್ನ ಫೇಕ್ ಫ್ಯಾಕ್ಟರಿಗೆ ಹೆಚ್ಚಿನ ಕೆಲಸ ಕೊಟ್ಟು ಹಗಲೂ ರಾತ್ರಿ ದುಡಿಯುತ್ತಿದೆ. ಬೆಂಕಿ ಹೇಗೆ ಹತ್ತಿದೆ ಎಂದು ಆರೋಪಿಸಿದ ರೈತನಿಗೆ ಗೊತ್ತಿಲ್ಲ, ಬೆಂಕಿ ಯಾರು ಹಚ್ಚಿದರು ಎನ್ನುವುದೂ ಆತನಿಗೆ ಗೊತ್ತಿಲ್ಲ” ಎಂದಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆಯೇ @BJP4Karnataka ತನ್ನ ಫೇಕ್ ಫ್ಯಾಕ್ಟರಿಗೆ ಹೆಚ್ಚಿನ ಕೆಲಸ ಕೊಟ್ಟು ಹಗಲೂ ರಾತ್ರಿ ದುಡಿಯುತ್ತಿದೆ.
ಬೆಂಕಿ ಹೇಗೆ ಹತ್ತಿದೆ ಎಂದು ಆರೋಪಿಸಿದ ರೈತನಿಗೆ ಗೊತ್ತಿಲ್ಲ, ಬೆಂಕಿ ಯಾರು ಹಚ್ಚಿದರು ಎನ್ನುವುದೂ ಆತನಿಗೆ ಗೊತ್ತಿಲ್ಲ,
ಹೇಡಿಯ ಕೊನೆಯ ಅಸ್ತ್ರ ಅಪಪ್ರಚಾರ ಎನ್ನುವಂತೆ ಬಿಜೆಪಿ ಹಾಗೂ ಜೆಡಿಎಸ್… https://t.co/y4PPL3RI3A pic.twitter.com/jLvivJxknl
— Karnataka Congress (@INCKarnataka) April 16, 2024
“ಹೇಡಿಯ ಕೊನೆಯ ಅಸ್ತ್ರ ಅಪಪ್ರಚಾರ ಎನ್ನುವಂತೆ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರಿಗಳು ಸೇರಿ ಆತನಿಗೆ ಬೆದರಿಕೆ ಒಡ್ಡಿ ಕಾಂಗ್ರೆಸ್‌ನವರ ಮೇಲೆ, ಗೆಲುವಿನ ಸಮೀಪದಲ್ಲಿರುವ ಡಿ.ಕೆ ಸುರೇಶ್ ಅವರ ಮೇಲೆ, ಡಿ.ಕೆ ಶಿವಕುಮಾರ್ ಅವರ ಮೇಲೆ ನಕಲಿ ಅಸ್ತ್ರ ಪ್ರಯೋಗಿಸಿದ್ದಾರೆ. ಆದರೆ, ಅದೇ ವ್ಯಕ್ತಿಯಿಂದ ಜೆಡಿಎಸ್, ಬಿಜೆಪಿಯ ಕುತಂತ್ರಗಳು ಬಯಲಾಗಿದೆ” ಎಂದು ಹೇಳಿದೆ. “ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಆಧಾರ ರಹಿತ ಸುಳ್ಳು ಆಪಾದನೆಗಳನ್ನು ವ್ಯಾಪಕವಾಗಿ ಮಾಡುತ್ತಿದ್ದರೂ ಕ್ರಮ ಕೈಗೊಳ್ಳದೇ ಸುಮ್ಮನಿರುವುದೇಕೆ?” ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ.
ಬಿಜೆಪಿ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ತೋಟಕ್ಕೆ ಕಾಂಗ್ರೆಸಿಗರು ಬೆಂಕಿ ಹಚ್ಚಿದ್ದಾರೆ ಎಂದು ಹೇಳುವುದನ್ನು ಕೇಳಬಹುದು. ಆದರೆ, ಆ ವ್ಯಕ್ತಿಯ ಮುಖ ಕಾಣುತ್ತಿಲ್ಲ. ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಮೊದಲು ವ್ಯಕ್ತಿಯೊಬ್ಬರು ತನ್ನ ತೋಟಕ್ಕೆ ಕಾಂಗ್ರೆಸ್‌ನವರು ಬೆಂಕಿ ಹಚ್ಚಿದ್ದಾರೆ ಎಂದು ಹೇಳಿರುವುದು ಮತ್ತು ಅದೇ ವ್ಯಕ್ತಿ ಜೆಡಿಎಸ್‌ನವರು ಬೆದರಿಸಿ ಹೀಗೆ ಹೇಳಿಸಿದ್ದಾರೆ ಎಂದಿರುವುದು ಇದೆ. ಇಲ್ಲಿ ಸತ್ಯ ಯಾವುದು ಎಂಬುವುದು ಸೂಕ್ತ ತನಿಖೆಯಿಂದ ತಿಳಿದು ಬರಬೇಕಿದೆ.
ಇದನ್ನೂ ಓದಿ : ‘ನಮ್ಮದು ಪ್ರಜಾಪ್ರಭುತ್ವ; ಪ್ರಧಾನಮಂತ್ರಿ ಏಕಚಕ್ರಾಧಿಪತಿ ಅಲ್ಲ..’; ದೇವೇಗೌಡರಿಗೆ ‘ಫೆಡರಲಿಸಂ’ ಪಾಠ ಮಾಡಿದ ಸಿಎಂ


