Homeಮುಖಪುಟಬರಪರಿಹಾರ: ಮೋದಿಗೆ ಶ್ಲಾಘಿಸಿ ಕನ್ನಡಿಗರಿಂದ ಉಗಿಸಿಕೊಂಡ ಬಿಜೆಪಿ ನಾಯಕರು: ರಿಪೋರ್ಟ್ ಓದಿ..

ಬರಪರಿಹಾರ: ಮೋದಿಗೆ ಶ್ಲಾಘಿಸಿ ಕನ್ನಡಿಗರಿಂದ ಉಗಿಸಿಕೊಂಡ ಬಿಜೆಪಿ ನಾಯಕರು: ರಿಪೋರ್ಟ್ ಓದಿ..

- Advertisement -
- Advertisement -

ಕೇಂದ್ರ ಸರಕಾರ ನಿನ್ನೆ ರಾಜ್ಯಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಕೇಂದ್ರ ಸರಕಾರ ಪೇಚೆಗೆ ಸಿಲುಕಿ ರಾಜ್ಯಕ್ಕೆ ಬಾಕಿಯಿದ್ದ ಬರ ಪರಿಹಾರದ ಸಣ್ಣ ಭಾಗವನ್ನು ಮಾತ್ರ ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಬರಬೇಕಿದ್ದ 18,171.44 ಕೋಟಿ ರೂ. ಪರಿಹಾರದಲ್ಲಿ ಬಂದಿರುವುದು ಕೇವಲ 20% ಮಾತ್ರ ಎಂದು ರಾಜ್ಯದ ಕಾಂಗ್ರೆಸ್‌ ಸರಕಾರ ಹೇಳಿದೆ. ಬರ ಪರಿಹಾರದ ಎಲ್ಲಾ ಮೊತ್ತವನ್ನು ಪಡೆಯಲು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಆದರೆ ಈ ಹಿಂದೆ ರಾಜ್ಯಕ್ಕೆ ಬರ ಪರಿಹಾರ ಬಾಕಿಯೇ ಇಲ್ಲ ಎಂದಿದ್ದ ಬಿಜೆಪಿ ನಾಯಕರು ಇದೀಗ ಮೋದಿಗೆ ಬರ ಪರಿಹಾರ ಬಿಡುಗಡೆ ಮಾಡಿದ್ದಾರೆಂದು ಶ್ಲಾಘಿಸಿ ಪೋಸ್ಟ್ ಮಾಡುತ್ತಿದ್ದು, ಜನರು ಬಿಜೆಪಿ ನಾಯಕರಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಬರಪರಿಹಾರ ಬಿಡುಗಡೆ ಕುರಿತು ರಾಜ್ಯ ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕಕ್ಕೆ 3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡಿದೆ.

 

ಬಿಜೆಪಿಯ ಸಮರ್ಥನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದ್ದು, ಮುತ್ತುರಾಜ್ಎಂಬವರು ಕುರಿತು ಪ್ರತಿಕ್ರಿಯಿಸಿ, ಬರ ಪರಿಹಾರ ಕೊಟ್ಟಿಲ್ಲವೆಂದು ರಾಜ್ಯ ಸರ್ಕಾರ ದೂರು ಕೊಟ್ಟಿತ್ತು, ಸುಪ್ರೀಂ ಕೋರ್ಟ್ ಕ್ಯಾಕರಿಸಿ ಕೇಂದ್ರಕ್ಕೆ ಉಗಿದಿತ್ತು. ಹಾಗಾಗಿ ಇಂದು ನಮಗೆ ಬರ ಪರಿಹಾರ ಸಿಕ್ಕಿದೆ. ನಿಮಗೆ ನಾಚಿಕೆ ಮಾನ ಮರ್ಯಾದೆ ಏನೂ ಇಲ್ಲ. ರಾಜ್ಯ ಸರ್ಕಾರ ಹೋರಾಡಿ ಬರ ಪರಿಹಾರ ತಂದಿದೆ, ಈಗ ನಾವೆ ಕೊಟ್ವಿ ಅಂತ ಬೆನ್ನು ತಟ್ಟಿಕೊಳ್ಳುತ್ತಿದ್ದೀರಿ. ಥೂ.. ಅಸಹ್ಯ ಎಂದು ಬರೆದುಕೊಂಡಿದ್ದಾರೆ.

ಸುಷ್ಮಾ ಅಯ್ಯಂಗಾರ್ಎಂಬವರು ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ಇದಕ್ಕೆ ನಮ್ಮ ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟ್ ಹತ್ತೋ ಹಾಗೆ ಮಾಡಿದ ನಿಮ್ಮ ದರಿದ್ರ ಸರ್ಕಾರಕ್ಕೆ ನಾವು ಯಾಕೆ ಧನ್ಯವಾದ ಹೇಳಬೇಕು? ಬಿಜೆಪಿ ರಾಜ್ಯಘಟಕ ಮೂರು ಬಿಟ್ಟಿರುವ ಒಂದು ಸಂಸ್ಥೆ ಎಂದು ಟೀಕಿಸಿದ್ದಾರೆ.

ಸಂತೋಷ್ಎಂಬವರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ರೈತರ ಕಾಳಜಿ ಇರೋದು ಕಾಂಗ್ರೆಸ್ಸ್ ಸರ್ಕಾರಕ್ಕೆ ಮಾತ್ರ ಅನ್ನೋದು ಮತ್ತೆ ಸಾಬೀತಾಗಿದೆ. ಹೋರಾಡಿ ಗೆದ್ದು ಬಂದ ಸಿದ್ದರಾಮಯ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

ಗಿರೀಶ್ಹೆಚ್ಸಿ ಎಂಬವರು ಪ್ರಧಾನಿಗೆ ಧನ್ಯವಾದ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯಿಸಿದ್ದು, ಧನ್ಯವಾದಗಳು ಯಾಕ್ರಪ್ಪ..? ಯಾರೇ ಪ್ರಧಾನಿ ಆದ್ರೂ, ಅವರ ಸ್ವಂತ ದುಡ್ಡಿಂದ ಕೊಡಲ್ಲ. ನಮ್ಮ ದುಡ್ಡು ಇಟ್ಕೊಂಡ್, ಅದ್ರಿಂದ ಲಾಭ ಮಾಡ್ಕೊಂಡು ಕೊನೆಗೆ ನಮ್ ಸಂಕಷ್ಟಕ್ಕೆ ಕೊಡೋಕೆ ನಾವೇ ಕೋರ್ಟು ಮೂಲಕ ತಗೋಬೇಕು. ಈ ಘನಕಾರ್ಯಕ್ಕೆ ಧನ್ಯವಾದ ಯಾಕೆ ಎಂದು ಪ್ರಶ್ನಿಸಿದ್ದಾರೆ.

ನವೀನ್ ಎಂಬವರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ಎಮ್ಮೆ ಚರ್ಮ ಅಂದ್ರೆ ಇದು. ಸುಪ್ರೀಂ ಕೋರ್ಟು ಉಗಿದ ಮೇಲೂ ಇನ್ನೂ ಬುದ್ಧಿ ಬಂದಿಲ್ಲ ನಿಮಗೆ. ನಿರ್ಮಲ, ಮೋದಿ, ಕುಮಾರಸ್ವಾಮಿ, ಅಶೋಕ್ ಅವರೂ ಸೇರಿ ಇಡೀ ರಾಜ್ಯ ಬಿಜೆಪಿಯ ಮುಖವಾಡ ಕಳಚಿ ಬಿದ್ದಿದೆ ಎಂದು ಟೀಕಿಸಿದ್ದಾರೆ.

ವಿದ್ಯಾ ಎಂಬವರು ಪ್ರತಿಕ್ರಿಯಿಸಿ  ನಾಚಿಕೆ ಅನ್ನೋದೇ ಇಲ್ವ ನಿಮ್ಗಳ್ಗೇ ಎಂದು ಪ್ರಶ್ನಿಸಿದ್ದಾರೆ. ಜಗದೀಶ್ಎನ್ನುವವರು ಪ್ರತಿಕ್ರಿಯಿಸಿ, ಇನ್ನು ಎಷ್ಟು ಸುಳ್ಳು ಹೇಳ್ತೀರಾ ನಿಮ್ಮ ಕಾರ್ಯಕರ್ತರೆ ನಿಮ್ಮನ್ನು ನಂಬುತ್ತಿಲ್ಲ, ಮೋದಿಜಿ ಸುಳ್ಳಿನ ಸಾಮ್ರಾಟ ಎಂದು ಬರೆದುಕೊಂಡಿದ್ದಾರೆ.

ಮಂಜು ಮಧುಗಿರಿ ಎಂಬವರು ಪ್ರತಿಕ್ರಿಯಿಸಿ, ನಾಚಿಕೆ ಮಾನ ಮರ್ಯಾದೆ ಏನಾದರೂ ಇದೀಯ? ಇಪ್ಪತ್ತೈದು ಜನ ಸಂಸದರನ್ನ‌ ಕೊಟ್ಟರೂ ಕೋರ್ಟ್‌ಗೆ ಹೋಗಿ ರಾಜ್ಯಕ್ಕೆ ಪರಿಹಾರ ಪಡೆಯುವ ಸ್ಥಿತಿಗೆ ತಂದಿಟ್ಟಿದ್ದೀರಿ ಎಂದು ಹೇಳಿದ್ದಾರೆ. ಮಂಜು ಎಂಬವರು ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಮೆಟ್ಟು ತಗೊಂಡು ಹೊಡೆದ ಮೇಲೆ ಕೊಟ್ಟಿದ್ದು ಅಲ್ವಾ ಅಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಶಿವ ಆಚಾರ್ಯ ಎಂಬವರು ಪ್ರತಿಕ್ರಿಯಿಸಿ, ಹೊಟ್ಟೆಗೇನು ತಿಂತೀರ ಕಮಂಗಿಗಳಾ? ಸುಪ್ರೀಂ ಕೋರ್ಟ್ ಮೋದಿ ಸರಕಾರಕ್ಕೆ ಕ್ಯಾಕರಿಸಿ ಉಗಿದ ಬಳಿಕ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಹಣ ಬಿಡುಗಡೆ ಆಗಿದ್ದು. ತಾವರೆಯನ್ನು ಭಕ್ತರ ಕಿವಿ ಮೇಲೆ ಇಟ್ಟಿರಿ, ಕನ್ನಡಿಗರು ದಡ್ಡರಲ್ಲ ಎಂದು ಬರೆದುಕೊಂಡಿದ್ದಾರೆ.

ಸಾಗರ್ರವಿನಾಥ್ಎಂಬವರು ಪ್ರತಿಕ್ರಿಯಿಸಿದ್ದು, ಕೊಡಬೇಕಾದ ದುಡ್ಡು ಕೊಡದೆ ಸತಾಯಿಸಿ ಕೋರ್ಟ್‌ಗೆ ಹೋದ ಮೇಲೆ ಅಲ್ಪ ಮೊತ್ತ ಕೊಟ್ಟು ಇದನ್ನೇ ಸಾಧನೆಯೆಂಬಂತೆ ಬಿಂಬಿಸುವ ನೀಚ ಮನ ಸ್ಥಿತಿಗೆ ಧಿಕ್ಕಾರವಿರಲಿ! ಕರ್ನಾಟಕ ಜನತೆಯನ್ನು ಮೂರ್ಖಾರಾಗಿ ಕಾಣುತ್ತಿದ್ದೀರಾ? ಈ ಚುನಾವಣೆಯಲ್ಲಿ ಕರ್ನಾಟಕದ ಜನತೆ ತಕ್ಕ ಶಾಸ್ತಿ ಮಾಡುತ್ತಾರೆ. ಕಾದು ನೋಡಿ ಎಂದು ಬರೆದುಕೊಂಡಿದ್ದಾರೆ.

ಸುರೇಶ್ರಾವ್ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ಅಲ್ಲಾ, ಯಾರಿಗೂ ಗೊತ್ತಾಗದ ಹಾಗೆ ಹೇಳಿದ್ರೆ ಸುಳ್ಳನ್ನು ನಿಜವೆಂದು ನಂಬಬಹುದು, ಆದರೆ ಇದು ಇತಿಹಾಸಲ್ಲೇ ಮೊದಲು ನ್ಯಾಯಾಲಯ ಆದೇಶದ ಮೇರೆಗೆ (sry ನ್ಯಾಯಾಲಯ ಉಗಿದ ಮೇಲೆ) ನಮ್ಮ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ  ಬೇರೆ ದಾರಿ ಇಲ್ಲದೆ ಕೊಡೋದನ್ನು ಈ ರೀತಿಯ ಡಂಗೂರ ಸಾರೋತರ ಹೇಳ್ತಿರಲ್ಲಾ ನಿಜವಾಗ್ಲು ನೀವು ಕರ್ನಾಟಕದವರೇನಾ? ಎಂದು ಪ್ರಶ್ನಿಸಿದ್ದಾರೆ.

ಇಬ್ನ್ಅಹ್ಮದ್ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ಮೋದಿಯವರಿಗೆ ಧನ್ಯವಾದಗಳು! ಬರ ಪರಿಹಾರ ಬಿಡುಗಡೆ ಮಾಡಲು ವಿಳಂಬ ಮಾಡಿ ರಾಜ್ಯದ ಜನತೆ ಬಿಜೆಪಿಗೆ ಓಟು ಹಾಕುವುದನ್ನು ತಡೆದಿರುವುದಕ್ಕೆ. 18 ಸಾವಿರ ಕೋಟಿ ಬದಲಿಗೆ 3.4ಕೋಟಿ ಕೊಟ್ಟು ಮಹಾ ಸಾಧನೆ ಮಾಡಿದ್ದಕ್ಕೆ. ಮತ್ತು ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡದ್ದಕ್ಕೆ. 10 ವರ್ಷದ ದುರಾಡಳಿತಕ್ಕೆ ಮತ್ತು ಜೂನ್ ನಾಲ್ಕರಂದು ನಿವೃತ್ತಿ ಜೀವನಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಎಪಿ ವಿನಯ್ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ಮಾನ, ಮರ್ಯಾದೆ, ನಾಚಿಕೆ ಇಲ್ಲದೆ ವಿಷಯಗಳನ್ನು ತಿರುಚಿ, ಸುಳ್ಳು ಸುದ್ದಿ ಎಬ್ಬಿಸಿ, ಎಲ್ಲೆಡೆ ಮೋದಿ ಫೋಟೋ ಹಾಕಿ ಮಾನ ಹರಾಜು ಮಾಡಿ, ರಾಜ್ಯದಲ್ಲಿ ಬಿಜೆಪಿಯ ಸೋಲಿಗೆ ಅಡಿಪಾಯ ಹಾಕುತ್ತಿರುವ ನಿಮಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಮೋದಿಗೆ ಶ್ಲಾಘಿಸಿ ಆರ್‌. ಅಶೋಕ್ಪೋಸ್ಟ್

ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗು ನಿರ್ಲಕ್ಷ್ಯದಿಂದ ಭೀಕರ ಬರಗಾಲದಲ್ಲೂ ಬರ ಪರಿಹಾರ ಸಿಗದೆ ಕಂಗಾಲಾಗಿದ್ದ ರೈತರ ನೆರವಿಗೆ ಪ್ರಧಾನಿ ಮೋದಿ ಅವರ ಸರ್ಕಾರ ಧಾವಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ನಾಡಿನ ರೈತರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕಕ್ಕೆ 3,454 ಕೋಟಿ ಬರ ಪರಿಹಾರ ನೀಡಿದ್ದಾರೆ. ಈಗಲಾದರೂ ರಾಜ್ಯ ಸರ್ಕಾರ ವಿಳಂಬ ಮಾಡದೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 3,454 ಕೋಟಿ ರೂಪಾಯಿ ಜೊತೆಗೆ ರಾಜ್ಯ ಸರ್ಕಾರವೂ ಅದಕ್ಕೆ ಅಷ್ಟೇ ಮೊತ್ತ ಸೇರಿಸಿ ರೈತರಿಗೆ ದುಪ್ಪಟ್ಟು ಪರಿಹಾರ ನೀಡಬೇಕು. ಮುಂಗಾರು ಮಳೆ ಕೈಕೊಟ್ಟಾಗ ಬರ ಪರಿಹಾರ ನೀಡಲು ವಿಳಂಬ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದ ರೀತಿ ತಡ ಮಾಡದೆ, ಹಿಂಗಾರು ಹಂಗಾಮಿನ ಬರ ಘೋಷಣೆ ಮಾಡಬೇಕು, ಪ್ರತಿ ಹೆಕ್ಟೇರ್ ಗೆ 25,000 ರೂಪಾಯಿ ಪರಿಹಾರ ನೀಡಬೇಕು, ರೈತರು ಸಹಕಾರ ಸಂಘಗಳಲ್ಲಿ ಮಾಡಿರುವ 5 ಲಕ್ಷದವರೆಗಿನ ಸಾಲ ಮನ್ನಾ ಮಾಡಬೇಕು. ಇನ್ನಾದರೂ ಬರ ಪರಿಹಾರದಂತಹ ವಿಷಯದಲ್ಲಿ ರಾಜಕಾರಣ ಮಾಡದೆ ಜವಾಬ್ದಾರಿಯುತವಾಗಿ ವರ್ತಿಸಲಿ. ತನ್ನ ಪಾಲಿನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲಿ ಎಂದು ಆಗ್ರಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕುರಿತು ಸಂಪತ್ ಕುಮಾರ್ಎಂಬವರು ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷದ ನಾಯಕರು ನಮ್ಮ ರಾಜ್ಯದಲ್ಲಿ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಚಂದ್ರಶೇಖರ್ಎಂಬವರು ಪ್ರತಿಕ್ರಿಯಿಸಿದ್ದು, ಮಾನ ಮರ್ಯಾದೇ ಇದ್ದಿದ್ದರೆ ಈ ತರಹದ ಹೇಳಿಕೆ ನೀಡುತ್ತಿರಲಿಲ್ಲ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಧಾವೆ ಹೂಡಿದ್ದಕ್ಕೆ ನಿಮ್ಮ ಟೀ ಮಾರುವ ಪ್ರಧಾನಿ ಬರ ಪರಿಹಾರ ಹಣ ನೀಡಿದ್ದು, ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ. ನರಸತ್ತ ನಾಮರ್ದರು ಬಿಜೆಪಿ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರಸಿಮ್ಮ ಮೂರ್ತಿ ಎಂಬವರು ಪ್ರತಿಕ್ರಿಯಿಸಿದ್ದು, ನಾಲಾಯಕ್ ವಿರೋಧ ಪಕ್ಷದ ನಾಯಕರೇ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕ್ಯಾಕರಿಸಿ ಉಗಿದು ಸಂವಿಧಾನಬದ್ಧವಾಗಿ ಕೊಡಬೇಕಾದ ಪರಿಹಾರ ಕೊಡಿಸಿದೆ ನಾಚಿಕೆಯಾಗಬೇಕು ನಿಮಗೆ ಎಂದು ಬರೆದುಕೊಂಡಿದ್ದಾರೆ.

ಮಲ್ಲಪ್ಪ ಎಂಬವರು ಪ್ರತಿಕ್ರಿಯಿಸಿದ್ದು, ಕನ್ನಡಿಗರೂ ಬೆವರು ಸುರಿಸಿ ಕೇಂದ್ರ ಸರ್ಕಾರಕ್ಕೆ Tax ಕೊಡ್ತಾ ಇಲ್ಲವಾ??? ಅವರು ನಮಗೇ ನೀಡ್ತಾ ಇರೋದು ನಮ್ಮ ಹಕ್ಕು, ನಮ್ಮ ಪಾಲು, ರಾಜ್ಯ ಬಿಜೆಪಿ ನಾಯಕರಿಗೆ ಮಾತ್ರ ಇದು ಬಿಕ್ಷೆ ಇದ್ದಹಾಗೆ, ಕನ್ನಡಕ್ಕೆ ಕನ್ನಡಿಗರಿಗೆ ಆದ್ಯತೆ ಕೊಡೋದನ್ನ ಕಲಿರಿ,  ಇಲ್ಲ ಅಂದ್ರೆ ರಾಜ್ಯದಿಂದ ಬಿಜೆಪಿ ಅನ್ನು ಒದ್ದು ಓಡಿಸೋ ಕಾಲ ತುಂಬಾ ಸಮೀಪ ಎಂದು ಬರೆದುಕೊಂಡಿದ್ದಾರೆ.

 

ಪ್ರಧಾನಿಗೆ ಶ್ಲಾಘಿಸಿ ಸುಮಲತಾ ಅಂಬರೀಶ್ಪೋಸ್ಟ್

ಕರ್ನಾಟಕದಲ್ಲಿ ಹಿಂದೆಂದೂ ನೋಡಿರದ ಬರ ಪರಿಸ್ಥಿತಿ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೆ ರಾಜ್ಯ ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣ ಹಾಗೂ ಪುಗಸಟ್ಟೆ ಭಾಗ್ಯಗಳನ್ನು ನೀಡಲು ನಿರತವಾಗಿತ್ತು. ರಾಜ್ಯ ಸರ್ಕಾರ ರೈತರಿಗಾಗಿ ಏನನ್ನೂ ಮಾಡದೆ ಬರೀ ಕೇಂದ್ರದತ್ತ ಬೊಟ್ಟು ಮಾಡುತ್ತಿತ್ತು.

ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಬರೆದುಕೊಂಡಿದ್ದಾರೆ.

ಜೈ ಚಂದ್ರ, ಮಂಜುನಾಥ, ರಘು ಶಿವರಾಮ್ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ನಿಮಗೆಲ್ಲರಿಗೂ ಕನಿಷ್ಠ ಮಿದಳಾದ್ರು ಕೆಲಸ ಮಾಡ್ತಾ ಇದ್ಯಾ, ಸುಪ್ರೀಂಕೋರ್ಟ್ ಉಗಿದ ಮೇಲೆ ಕೊಟ್ಟಿರೋದು ಎಂದು ಬರೆದುಕೊಂಡಿದ್ದಾರೆ.

ಶಿವ ಶಂಕರಯ್ಯ ಚಿಕ್ಕಯ್ಯ ಎಂಬವರು ಕುರಿತು ಪ್ರತಿಕ್ರಿಯಿಸಿದ್ದು ಮಾಜಿ ಸಂಸದರು ಇಷ್ಟೊಂದು ಬಕೀಟ್ ಹಿಡಿಯಬಾರದು. ತಾಳ್ಮೆ ಇರಲಿ ಏನಾದರೂ ಕೊಡುತ್ತಾರೆ. ನಮ್ಮ ರಾಜ್ಯಕ್ಕೆ ಏನೇ ಪರಿಹಾರ ಬಂದ್ರು ಅದು ಸುಪ್ರೀಂ ಕೋರ್ಟಿನ ಮೂಲಕ ಹೋರಾಟ ಮಾಡಿ ಪಡೆದುಕೊಳ್ಳುವ ಪರಿಸ್ಥಿತಿ ಬಂದಿರೋದು ವಿಪರ್ಯಾಸ ಆದ್ರೆ ಹೆಚ್ಚು ತೆರಿಗೆ ಕಟ್ಟೋದ್ರಲ್ಲಿ ನಮ್ಮದು ಎರಡನೇ ರಾಜ್ಯ, ಪರಿಹಾರಕ್ಕೆ ಮಾತ್ರ ಭಿಕ್ಷೆ ಬೇಡಬೇಕು, ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಲು ಸಹಾಯ ಮಾಡಿದ ನಮ್ಮ ಸರ್ವೋಚ್ಚ ನ್ಯಾಯಾಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ವಿನೋದ್ಮಡಿವಾಳ್ಎಂಬವರು ಪ್ರತಿಕ್ರಿಯಿಸಿ, ನಿಮ್ಮ ಮೋದಿ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕಾಯಿತು. ನೀವು ಸಂಸಧರಾಗಿದ್ದಾಗ ಕೇಳಿ ತಂದ ಪರಿಹಾರವಲ್ಲ ಎಂದು ಬರೆದುಕೊಂಡಿದ್ದಾರೆ.

ಪ್ರಾನ್ಸಿಸ್ಲೋಬೋ ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ಮಾಜಿ ಸಂಸದರಾದ ಇವರಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲಾ ಅನ್ಸುತ್ತೆ, ಇಂತವರೆಲ್ಲಾ ಸಂಸದರಾಗಿದ್ದಕ್ಕೆ ಅಣ್ಣ ಅಲ್ಲಿ ಸಕ್ಕತ್ ಮಾರ್ಕೆಟಿಂಗ್ ಮಾಡಿ ನಮ್ಮ ಎಲ್ಲಾ ಸಾರ್ವಜನಿಕ ಆಸ್ತಿಯಾದ ವಿಮಾನ ನಿಲ್ದಾಣ, ರೈಲ್ವೆ, ಬಂದರು, ಎಲ್ಐಸಿ ಷೇರ್, ವಿದ್ಯುತ್ ತೈಲ ನಿಕ್ಷೇಪಗಳು, ಹೆದ್ದಾರಿ ಟೋಲ್‌ಗಳು ಸೇರಿ ಹತ್ತು ಹಲವು ಖಾಸಗೀಕರಣವಾಗಿದೆ. ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಲು ಸಹಾಯ ಮಾಡಿದ ನಮ್ಮ ಸರ್ವೋಚ್ಚ ನ್ಯಾಯಾಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸುನಿಲ್ ಗೌಡ ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ರಾಜಕೀಯ ಮಾಡಬೇಕು ಆದರೆ ನಿಮ್ಮಷ್ಟು ಕೀಳು ಮಟ್ಟದ ರಾಜಕೀಯ ಮಾಡಬಾರದು. ಸುಪ್ರೀಂ ಕೋರ್ಟ್ ಕ್ಯಾಕರ್ಸ್ ಉಗಿದು ಬರ ಪರಿಹಾರ ಬಿಡುಗಡೆ ಮಾಡುಸ್ತಿರೋದು ನಿಮಗೂ ಗೊತ್ತು, ಇಡೀ ರಾಜ್ಯಕ್ಕೆ ಗೊತ್ತು ಆದರೂ ಈ ಇಷ್ಟಪಟ್ಟಿರುವ ಯಾವುದಾದರೂ ಹುದ್ದೆ ತಗೋಬಹುದು ಅನ್ನೋದು ನಿಮ್ಮನ್ಸಲ್ಲಿದ್ರೆ ದಯವಿಟ್ಟು ನಿಲ್ಲಿಸಿ ಕನಿಷ್ಠ ಮರ್ಯಾದೆ ಸಿಗುತ್ತೆ ಮಂಡ್ಯದಲ್ಲಿ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿಗೆ ಶ್ಲಾಘಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪೋಸ್ಟ್

ಕೊಟ್ಟ ಮಾತು-ಇಟ್ಟ ಹೆಜ್ಜೆ ಎಂದೂ ಹಿಂತೆಗೆಯದ, ದೇಶದ ಅಭಿವೃದ್ಧಿ ಹಾಗೂ ನೆರವು ಕಾರ್ಯದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಜೀ ಅವರ ಸರ್ಕಾರ ಇಂದು ಕರ್ನಾಟಕ ರಾಜ್ಯಕ್ಕೆ 3,454 ಕೋಟಿ ರೂ ಬರ ಪರಿಹಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ರಾಜ್ಯದ ಜನತೆಯ ಪರವಾಗಿ ವಿಶೇಷವಾಗಿ ರೈತ ಸಮುದಾಯದ ಪರವಾಗಿ ಪ್ರಧಾನಿ ಮೋದಿ ಜೀ ಅವರನ್ನು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತೇನೆ. ಸುಳ್ಳು, ಅಪಪ್ರಚಾರ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ, ಬರ ಪರಿಹಾರ ಪಡೆಯುವಲ್ಲಿ ಎಸಗಿದ ಲೋಪಗಳನ್ನು ಮರೆಮಾಚಿ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರವನ್ನೇ ಬಂಡವಾಳ ಮಾಡಿಕೊಂಡಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ ಆಧಾರರಹಿತ ಗೊಂದಲ ಸೃಷ್ಟಿಸಲು ಯತ್ನಿಸಿತು, ಆದರೆ ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಅನುಮತಿ ಪಡೆದು ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಿದೆ. ಸಂಕಷ್ಟದ ವಿಷಯಗಳನ್ನೂ ರಾಜಕೀಯ ದಾಳವನ್ನಾಗಿಸಿಕೊಳ್ಳುವ ಕಾಂಗ್ರೆಸ್‌ನ ಪ್ರವೃತ್ತಿ ಇನ್ನಾದರೂ ಕೊನೆಗೊಳ್ಳಲಿ, ರಾಜಕೀಯವನ್ನು ಬದಿಗೊತ್ತಿ ಕೇಂದ್ರದೊಂದಿಗೆ ಸಮನ್ವಯತೆ ಸಾಧಿಸಿ ರಾಜ್ಯದ ಹಿತ ಕಾಯಲಿ ಎಂದು ಬರೆದುಕೊಂಡಿದ್ದಾರೆ.

ಚಂದು ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ಸುಳ್ಳನ್ನ ಸಾವಿರ ಬಾರಿ ಹೇಳಿದ್ರೆ ನಿಜ ಆಗಲ್ಲ , ಮಖಕ್ಕೆ ಕೋರ್ಟ್ ಹುಗಿದ ಮೇಲೆ ಕೊಟ್ಟ ನಿಮ್ಮ ಭಂಡ ಸರ್ಕಾರ, ನಾಚಿಕೆ ಆಗಬೇಕು ಈ ತರ ಬಿಟ್ಟಿ ಬಿಲ್ಡಪ್ ತಗೊಳೋದಕ್ಕೆ ಎಂದು ಬರೆದುಕೊಂಡಿದ್ದಾರೆ.

ಶೌಕತ್ಅಲಿ ಬೇಗ್ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ನಾಚಿಕೆಯಾಗಬೇಕು,ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಭಾರತ ಸರ್ಕಾರವು ಕರಡು ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

ಕೀರ್ತಿ ಎಂಬವರು ಪ್ರತಿಕ್ರಿಯಿಸಿ, ಎಂಥ ಬಂಡ ಬಾಳು ನಿಮ್ದು ಎಂದು ಟೀಕಿಸಿದ್ದಾರೆ. ಸಿದ್ದಪ್ಪಾಜಿ ಎಂಬವರು ಪ್ರತಿಕ್ರಿಯಿಸಿ, ಮಾನ ಮರ್ಯಾದೆ ಅನ್ನೋದು ಇದೆಯಾ? ಕೋರ್ಟ್ ಉಗಿಯೋಕು ಮುಂಚೆ ಕೊಟ್ಟಿದ್ರೆ ಜನನು ನಂಬುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

ಗೋವಿಂದಪ್ಪ ಎಂಬವರು ಬಗ್ಗೆ ಪ್ರತಿಕ್ರಿಯಿಸಿದ್ದು, ಇದನ್ನ ಭಂಡತನದ ಸಮರ್ಥನೆ ಅಂಥ ತಿಳಿಯಬೇಕು. ಸುಪ್ರೀಂಕೋರ್ಟ್ ಜಾಡಿಸಿದ ಮೇಲೇನೆ ಕೇಂದ್ರ ಬರ ಪರಿಹಾರ ಕೊಟ್ಟಿರೋದು. ಅದೂ ಕೇಳಿದ್ದು 18,000ಕೋಟಿ ಕೊಟ್ಟಿದ್ದು 3,400ಕೋಟಿ. 25% ಕೂಡ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಮಧು ಎಂಜಿ ಎಂಬವರು ಕುರಿತು ಪ್ರತಿಕ್ರಿಯಿಸಿದ್ದು, ನೂಡಪ್ಪ ರಾಜ್ಯಾಧ್ಯಕ್ಷ, ಸುಪ್ರೀಂ ಕೋರ್ಟ್ ಹೇಳಿದ ಮೇಲೆ ಬರ ಪರಿಹಾರ ಕೊಟ್ಟಿರೋದು ಮೊದಲೇ ಕೊಟ್ಟಿದ್ದರೆ ಮಾನ ಮರ್ಯಾದೆ ಉಳಿತಿತ್ತು ನಿಮ್ಮ ಮೋದಿದ್ದು, ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು ಹೇಳಬೇಕು ಮೋದಿ ಗಲ್ಲ, ಬರೀ ಬಿಲ್ಡಪ್ ಎಂದು ಬರೆದುಕೊಂಡಿದ್ದಾರೆ.

 

 

ಇದನ್ನು ಓದಿ: ರಾಜ್ಯ ಸರಕಾರ ಕೇಳಿದ ಬರ ಪರಿಹಾರದಲ್ಲಿ ಶೇ.20ಕ್ಕಿಂತ ಕಡಿಮೆ ಬಿಡುಗಡೆ: ಕೇಂದ್ರ ಸರ್ಕಾರದ ವಿರುದ್ಧ ಕೃಷ್ಣ ಬೈರೇಗೌಡ ವಾಗ್ಧಾಳಿ

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...