ತೆಲಂಗಾಣದ ವೇಮುಲವಾಡದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು. ಅದಕ್ಕೆ ರಾಹುಲ್ ಗಾಂಧಿ ವಿಡಿಯೋ ಮೂಲಕ ತಿರುಗೇಟು ನೀಡಿದ್ದು, ಭಾರೀ ವೈರಲ್ ಆಗಿದೆ.
“ಕಳೆದ 5 ವರ್ಷಗಳಿಂದ ರಾಹುಲ್ ಗಾಂಧಿ ಅಂಬಾನಿ-ಅದಾನಿ ಜಪ ಮಾಡುತ್ತಿದ್ದರು. ಆದರೆ, ಚುನಾವಣೆ ಘೋಷಣೆಯಾದ ಬಳಿಕ ಅಂಬಾನಿ-ಅದಾನಿಗೆ ಗುಂಡು ಹೊಡೆಯುವುದನ್ನು ನಿಲ್ಲಿಸಿದ್ದಾರೆ. ನಾನಿವತ್ತು ತೆಲಂಗಾಣದ ಮಣ್ಣಿನಿಂದ ಕೇಳುತ್ತಿದ್ದೇನೆ.. ಉತ್ತರ ಹೇಳಿ, ಈ ಚುನಾವಣೆಗೆ ಅಂಬಾನಿ-ಅದಾನಿಯಿಂದ ಎಷ್ಟು ಹಣ ಪಡೆದಿದ್ದೀರಿ? ಎಷ್ಟು ಕಪ್ಪು ಹಣ ಬಂದಿದೆ. ಅಂಬಾನಿ-ಅದಾನಿ ಟೆಂಪೋದಲ್ಲಿ ಹಣ ತುಂಬಿ ಕಳಿಸಿದ್ದಾರಾ? ಯಾಕೆ ಮೌನವಾಗಿದ್ದೀರಾ?” ಎಂದು ಮೋದಿ ಭಾಷಣದಲ್ಲಿ ಪ್ರಶ್ನಿಸಿದ್ದರು.
Why has Shahzade Ji stopped talking of Ambani and Adani in this election all of sudden? People are smelling a secret deal… pic.twitter.com/y5A87E6dfi
— Narendra Modi (@narendramodi) May 8, 2024
ಇದಕ್ಕೆ ವಿಡಿಯೋ ಹೇಳಿಕೆಯ ಮೂಲಕ ಉತ್ತರ ನೀಡಿರುವ ರಾಹುಲ್ ಗಾಂಧಿ, “ನಮಸ್ಕಾರ ಮೋದಿಯವರೇ ಏನು ಭಯಗೊಂಡಿದ್ದೀರಾ? ಸಾಮಾನ್ಯವಾಗಿ ನೀವು ಮುಚ್ಚಿದ ಕೋಣೆಯಲ್ಲಿ ಅಂಬಾನಿ-ಅದಾನಿ ಬಗ್ಗೆ ಮಾತನಾಡುತ್ತಿದ್ದಿರಿ. ಆದರೆ, ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದೀರಿ. ಅವರು ಟೆಂಪೋದಲ್ಲಿ ಹಣ ಕಳಿಸ್ತಾರೆ ಎಂದು ನಿಮಗೆ ಗೊತ್ತು. ಇದು ನಿಮ್ಮ ಸ್ವಂತ ಅನುಭವದಿಂದ ಬಂದಿದ್ದೇ?” ಎಂದು ಪ್ರಶ್ನಿಸಿದ್ದಾರೆ.
भाजपा के भ्रष्टाचार के टेम्पो का ‘ड्राइवर’ और ‘खलासी’ कौन है, देश जानता है। pic.twitter.com/62N5IkhHWk
— Rahul Gandhi (@RahulGandhi) May 8, 2024
“ಒಂದು ಕೆಲಸ ಮಾಡಿ, ಇದನ್ನು ಸಿಬಿಐ, ಇಡಿಗೆ ಕೊಡಿ. ಸಂಪೂರ್ಣ ತನಿಖೆ ನಡೆಸಿ. ಆದಷ್ಟು ಬೇಗ ಈ ಕೆಲಸ ಮಾಡಿಸಿ, ಹೆದರಬೇಡಿ. ನಾನು ಮತ್ತೊಮ್ಮೆ ಹೇಳುತ್ತೇನೆ, ಮೋದಿಯವರು ಅಂಬಾನಿ-ಅದಾನಿಗೆ ಎಷ್ಟು ಹಣ ಕೊಟ್ಟಿದ್ದಾರೋ, ಅಷ್ಟೇ ಹಣವನ್ನು ನಾವು ಭಾರತದ ಬಡಜನರಿಗೆ ನೀಡುತ್ತೇವೆ. ಮಹಾಲಕ್ಷಿ ಯೋಜನೆ, ಉದ್ಯೋಗ ಯೋಜನೆಗಳ ಮೂಲಕ ಕೋಟ್ಯಾಂತರ ಲಕ್ಷಾದಿಪತಿಗಳನ್ನು ಸೃಷ್ಟಿಸುತ್ತೇವೆ. ಮೋದಿಯವರು 22 ಜನರನ್ನು ಕೋಟ್ಯಾಧಿಪತಿ ಮಾಡಿದ್ದಾರೆ. ಆದರೆ, ನಾವು ಕೋಟ್ಯಾಂತರ ಜನರನ್ನು ಲಕ್ಷಾಧಿಪತಿ ಮಾಡಲಿದ್ದೇವೆ” ಎಂದು ರಾಹುಲ್ ಗಾಂಧಿ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿಯ ಈ ವಿಡಿಯೋವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ 3.7 ಮಿಲಿಯನ್‌ಗೂ ಅಧಿಕ ಜನರಿಗೆ ತಲುಪಿದೆ.
ಇದನ್ನೂ ಓದಿ : ‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!


