ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಸಿದ ಆರೋಪದ ಮೇಲೆ ಮುಂಬೈ ವಾಯುವ್ಯ ಕ್ಷೇತ್ರದ ಶಿವಸೇನೆ ಸಂಸದ ರವೀಂದ್ರ ವೈಕರ್ ಅವರ ಸಂಬಂಧಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಮಂಗೇಶ್ ಪಂಡಿಲ್ಕರ್ ಎಂಬಾತನ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಅಧಿಕೃತ ಆದೇಶವನ್ನು ಪಾಲಿಸದಿರುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತ ನಿಷೇಧವಿದ್ದರೂ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮತ ಎಣಿಕೆ ಕೇಂದ್ರದ ಅಧಿಕಾರಿ ಗೌರವ್ ದಿನೇಶ್ ಎಂಬವರು ವನ್ರೈ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಲೋಕಸಭೆ ಚುನಾವಣೆಗೆ ಶಿವಸೇನೆ (ಏಕನಾಥ್ ಶಿಂಧೆ ಬಣ) ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದ ರವೀಂದ್ರ ವೈಕರ್ 48 ಮತಗಳ ಅಂತರದಿಂದ ಶಿವಸೇನೆ (ಯುಬಿಟಿ) ಅಭ್ಯರ್ಥಿ ಅಮೋಲ್ ಗಜಾನನ್ ಕೃತಿಕಾರ್ ವಿರುದ್ದ ಗೆಲುವು ಸಾಧಿಸಿದ್ದಾರೆ.
ಇವಿಎಂ ಅನ್‌ಲಾಕ್ ಮಾಡಲು ಮೊಬೈಲ್ ಬಳಿಸಿದ ಮಂಗೇಶ್ ಪಂಡಿಲ್ಕರ್?
ಆರೋಪಿ ಮಂಗೇಶ್ ಪಂಡಿಲ್ಕರ್ ಬಳಸಿದ್ದ ಮೊಬೈಲ್ ಫೋನ್ ಇವಿಎಂಗೆ ಸಂಪರ್ಕಗೊಂಡಿತ್ತು. ಮೊಬೈಲ್ ಬಳಸಿ ಆತನ ಇವಿಎಂ ಅನ್‌ಲಾಕ್ ಮಾಡಲು ಒಟಿಪಿ ಜನರೇಟ್ ಮಾಡಿದ್ದಾನೆ ಎಂದು ಮಿಡ್-ಡೇ ಪತ್ರಿಕೆ ವರದಿ ಮಾಡಿದೆ. ವಾಯವ್ಯ ಮುಂಬೈ ಲೋಕಸಭಾ ಕ್ಷೇತ್ರದ ನೆಸ್ಕೋ ಮತ ಎಣಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಹೇಳಿದೆ.
This is the Mumbai North West Lok Sabha Seat
INDIA Alliance lost this seat by just 48 votes. The NDA candidate’s relative had a phone which could unlock EVM. @ECISVEEP must order a re-election in this constituency! pic.twitter.com/Kd0CTw6t2X
— Dhruv Rathee (@dhruv_rathee) June 16, 2024
“ಮತ ಎಣಿಕೆ ಕೇಂದ್ರದಲ್ಲಿ ಬಳಸಿದ ಮೊಬೈಲ್ ಫೋನ್‌ನ ಡೇಟಾ ಮತ್ತು ಕರೆ ದಾಖಲೆಗಳನ್ನು ಪರಿಶೀಲಿಸಲು ಪೊಲೀಸರು ಮೊಬೈಲ್ ಫೋನ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದಾರೆ. ಮೊಬೈಲ್ ಫೋನ್ ಅನ್ನು ಬೇರೆ ಯಾವುದಕ್ಕೆಲ್ಲ ಬಳಸಲಾಗಿದೆ ಎಂದು ನಾವು ಪರಿಶೀಲಿಸುತ್ತಿದ್ದೇವೆ” ಎಂದು ವನ್ರೈ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾಗಿ ಉಲ್ಲೇಖಿಸಿ ಮಿಡ್-ಡೇ ವರದಿ ಮಾಡಿದೆ.
ಮಿಡ್-ಡೇ ವರದಿ ಭಾನುವಾರ (ಜೂನ್ 16) ವೈರಲ್ ಆಗಿದ್ದು, ಅನೇಕ ವಿರೋಧ ಪಕ್ಷದ ನಾಯಕರು ” ಚುನಾವಣಾ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ”ಯನ್ನು ಪ್ರಶ್ನಿಸಿದ್ದಾರೆ.
ಎಕ್ಸ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಭಾರತದ ಇವಿಎಂಗಳು ಕಪ್ಪು ಪೆಟ್ಟಿಗೆ (Black Box)ಯಾಗಿದೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶವಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರ ಕಾಳಜಿಯನ್ನು ಎತ್ತಲಾಗುತ್ತಿದೆ. ಸಂಸ್ಥೆಗಳಿಗೆ ಹೊಣೆಗಾರಿಕೆ ಇಲ್ಲದಿದ್ದಾಗ ಪ್ರಜಾಪ್ರಭುತ್ವವು ನೆಪವಾಗಿ ಪರಿಣಮಿಸುತ್ತದೆ ಮತ್ತು ವಂಚನೆಗೆ ಗುರಿಯಾಗುತ್ತದೆ” ಎಂದಿದ್ದಾರೆ.
EVMs in India are a "black box," and nobody is allowed to scrutinize them.
Serious concerns are being raised about transparency in our electoral process.
Democracy ends up becoming a sham and prone to fraud when institutions lack accountability. https://t.co/nysn5S8DCF pic.twitter.com/7sdTWJXOAb
— Rahul Gandhi (@RahulGandhi) June 16, 2024
“ಎನ್‌ಡಿಎ ಅಭ್ಯರ್ಥಿ ಸಂಬಂಧಿಕರೊಬ್ಬರ ಮೊಬೈಲ್ ಫೋನ್ ಇವಿಎಂಗೆ ಸಂಪರ್ಕಗೊಂಡಿದ್ದು ಏಕೆ? ಮತ ಎಣಿಕೆ ನಡೆಯುವ ಸ್ಥಳಕ್ಕೆ ಮೊಬೈಲ್ ಫೋನ್ ಹೇಗೆ ತಲುಪಿತು?” ಎಂದು ಎಕ್ಸ್‌ನಲ್ಲಿ ಕಾಂಗ್ರೆಸ್ ಪ್ರಶ್ನಿಸಿದೆ.
EVM से जुड़ा एक गंभीर मामला सामने आया है.
मुंबई में NDA के कैंडिडेट रवींद्र वायकर के रिश्तेदार का मोबाइल फोन EVM से जुड़ा था. NDA के इस कैंडिडेट की जीत सिर्फ 48 वोट से हुई है.
ऐसे में सवाल है कि 👇
* आखिर NDA के कैंडिडेट के रिश्तेदार का मोबाइल EVM से क्यों जुड़ा था?
* जहां… pic.twitter.com/IftZjLK2JM
— Congress (@INCIndia) June 16, 2024
“ಚುನಾವಣಾ ಆಯೋಗ ಸಂಪೂರ್ಣ ರಾಜಿಯಾಗಿದೆ. ಮತ ಎಣಿಕೆ ಕೇಂದ್ರದ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಳ್ಳಲು ನಿರಾಕರಿಸಿದೆ. ನನ್ನ ಪ್ರಕಾರ, ಇಲ್ಲಿ ಮತ್ತೊಂದು ಚಂಡೀಗಢದ ಕೃತ್ಯವನ್ನು ಮರೆ ಮಾಚಲಾಗುತ್ತಿದೆ. ಒಮ್ಮೆ ದೇಶದ್ರೋಹಿಯಾದರೆ, ಯಾವಾಗಲೂ ದೇಶದ್ರೋಹಿಯೇ” ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
Once a traitor, always a traitor!
The case of the mindhe gang candidate from North West Mumbai gets murkier, as the gaddar candidate indulges in treachery with democracy now.
Surprisingly, or not, the Entirely Compromised- election commission, has refused to share CCTV footage… pic.twitter.com/hT27Bb2qDQ
— Aaditya Thackeray (@AUThackeray) June 16, 2024
ಇದನ್ನೂ ಓದಿ : ಯುಎಸ್ ಕಂಪನಿಗೆ ಕೇಂದ್ರದ ನೆರವು: ಮಾತು ಬದಲಿಸಿದ ಸಚಿವ ಕುಮಾರಸ್ವಾಮಿ


