Homeಮುಖಪುಟವರ್ಲಿ ಹಿಟ್ ಆಂಡ್ ರನ್ ಪ್ರಕರಣ: 72 ಗಂಟೆ ಕಳೆದರೂ ಪತ್ತೆಯಾಗದ ಪ್ರಮುಖ ಆರೋಪಿ ಮಿಹಿರ್...

ವರ್ಲಿ ಹಿಟ್ ಆಂಡ್ ರನ್ ಪ್ರಕರಣ: 72 ಗಂಟೆ ಕಳೆದರೂ ಪತ್ತೆಯಾಗದ ಪ್ರಮುಖ ಆರೋಪಿ ಮಿಹಿರ್ ಶಾ

- Advertisement -
- Advertisement -

ಮುಂಬೈನ ವರ್ಲಿಯಲ್ಲಿ ಭಾನುವಾರ ಮುಂಜಾನೆ ಕುಡಿದ ಮತ್ತಿನಲ್ಲಿ ತನ್ನ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸಿ, ದ್ವಿಚಕ್ರ ವಾಹನದ ಹಿಂಬದಿ ಸವಾರೆಯಾದ 45 ವರ್ಷದ ಮಹಿಳೆಗೆ ಸಾವಿಗೆ ಕಾರಣನಾದ ಮಿಹಿರ್ ಶಾ ಮೂರು ದಿನಗ ಕಳೆದರೂ ಪತ್ತೆಯಾಗಿಲ್ಲ.

ಪತ್ತೆಕಾರ್ಯ ತೀವ್ರಗೊಳಿಸಿರುವ ಪೊಲೀಸರು, ಆರೋಪಿಯ ಸ್ನೇಹಿತರು ಸೇರಿದಂತೆ ಇದುವರೆಗೆ ಡಜನ್‌ಗಿಂತಲೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಆತನ ಪತ್ತೆಗೆ ಅನೇಕ ಕಾರ್ಯಪಡೆಗಳನ್ನು ರಚಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನಾ ಬಣದ ಸದಸ್ಯ ರಾಜಕಾರಣಿ ರಾಜೇಶ್ ಶಾ ಅವರ ಮಗ, ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ಇತರ ಕುಟುಂಬ ಸದಸ್ಯರೊಂದಿಗೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಮತ್ತು ಹತ್ತಿರದ ಸಂಬಂಧಿಗಳ ತಿಳಿದಿರುವ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ.

ಭಾನುವಾರ ಬಂಧಿತರಾಗಿದ್ದ ಆರೋಪಿ ತಂದೆ, ಶಿವಸೇನಾ ನಾಯಕ ರಾಜೇಶ್ ಶಾ ಅವರು ₹15,000 ಹಣ ಪಾವತಿಸಿ 24 ಗಂಟೆಗಳಲ್ಲಿ ಜಾಮೀನು ಪಡೆದರು. ಇನ್ನೂ ಜೈಲಿನಲ್ಲಿರುವ ಏಕೈಕ ಆರೋಪಿ ರಾಜಋಷಿ ಬಿಡಾವತ್ ಎಂಬಾತ ಬಾರ್‌ನಲ್ಲಿ ಸುಮಾರು ₹20,000 ಖರ್ಚು ಮಾಡಿದ ಗಂಟೆಗಳ ನಂತರ, ಆರೋಪಿಗೆ ಕಾರು ಓಡಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದನು. ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದಾಗ, ತಾನೇ ಕಾರು ಚಲಾಯಿಸುತ್ತಿದ್ದಂತೆ ಸುಳ್ಳು ಹೇಳಿದ್ದ.

ಪೊಲೀಸರ ಪ್ರಕಾರ, ಭಾನುವಾರ ಮಿಹಿರ್ ಶಾ ಜುಹುದಲ್ಲಿರುವ ವೈಸ್ – ಗ್ಲೋಬಲ್ ತಪಸ್ ಬಾರ್‌ನಲ್ಲಿ ಪಾರ್ಟಿಗಾಗಿ ಮನೆಯಿಂದ ಹೊರಟರು. ಆ ಸಮಯದಲ್ಲಿ ಅವನು ತನ್ನ ತಂದೆ ಹೆಸರಿಗೆ ನೋಂದಾಯಿಸಿದ ಮರ್ಸಿಡಿಸ್ ಅನ್ನು ಓಡಿಸುತ್ತಿದ್ದು, ನಾಲ್ವರು ಗೆಳೆಯರು ಜೊತೆಗಿದ್ದರು ಎನ್ನಲಾಗಿದೆ.

ಐವರು ಬಾರ್‌ನಲ್ಲಿ ರಾತ್ರಿ 11 ಗಂಟೆಯವರೆಗೆ ಪಾರ್ಟಿ ಮಾಡಿದರು; 1.15 ಕ್ಕೆ (ಸೋಮವಾರ) ಮಿಹಿರ್ ಷಾ ತನ್ನ ಸ್ನೇಹಿತರನ್ನು ತನ್ನ ಮರ್ಸಿಡಿಸ್‌ನಲ್ಲಿ ಮನೆಗೆ ಹಿಂದಿರುಗಿಸಿದ್ದಾನೆ. ನಂತರ, ಮುಂಜಾನೆ 4 ಗಂಟೆಗೆ ಆತ ಬಿಡಾವತ್‌ನನ್ನು ತನ್ನ ಕಾರ್‌ನಲ್ಲಿ ಮರೈನ್ ಡ್ರೈವ್‌ನಲ್ಲಿ ‘ಜಾಲಿ ರೈಡ್’ಗೆ ಕರೆದೊಯ್ಯಲು ಹೇಳಿದ್ದಾನೆ. ಮುಂಜಾನೆ 5 ಗಂಟೆಗೆ, ಮರೀನ್ ಡ್ರೈವ್ ಮೇಲೆ ಮತ್ತು ಕೆಳಗೆ ಕಾರು ಓಡಿಸಿದ ನಂತರ, ಮನೆಗೆ ತಿರುಗಿಸಲಾಯಿತು. ಈ ಸಮಯದಲ್ಲಿ ಷಾ ಬಿಡಾವತ್ ಜೊತೆ ಸೀಟುಗಳನ್ನು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇದು ನಿಜವಾಗಿದ್ದರೆ, ಬೆಳಿಗ್ಗೆ 5.30 ಕ್ಕೆ ಬೈಕ್‌ಗೆ ಡಿಕ್ಕಿ ಹೊಡೆದಾಗ ಶಾ ಕಾರು ಚಲಾಯಿಸುತ್ತಿದ್ದ. ಸಾವನ್ನಪ್ಪಿರುವ ಮಹಿಳೆಯನ್ನು ಕಾವೇರಿ ನಖ್ವಾ (45) ಎಂದು ಗುರುತಿಸಲಾಗಿದೆ. ಆಕೆ ತನ್ನ ಪತಿ ಪ್ರದೀಪ್‌ನೊಂದಿಗೆ ಪ್ರಯಾಣಿಸುತ್ತಿದ್ದಳು ಮತ್ತು ಇಬ್ಬರು ಅಡುಗೆ ಮಾಡಲು ಮೀನುಗ ಕೊಳ್ಳಲು ಹೋಗಿದ್ದರು ಎಂದು ವರದಿಯಾಗಿದೆ.

1.5 ಕಿಲೋಮೀಟರ್ ಮಹಿಳೆಯನ್ನು ಎಳೆದೊಯ್ದ ಶಾ

ಬಿಎಂಡಬ್ಲ್ಯು ಬೈಕ್‌ಗೆ ಗುದ್ದಿಸಿದ ನಂಯರ ಮೃತ ಮಹಿಳೆ ನಖ್ವಾ ಅವರನ್ನು 1.5 ಕಿಮೀ ಎಳೆದೊಯ್ಯಲಾಗಿದೆ ಎಂದು ಸೂಚಿಸುವ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಅಪಘಾತದ ಭಯಾನಕ ವಿವರಗಳು ಹೊರಹೊಮ್ಮಿವೆ. ಶಾ ನಂತರ ಬಿಡಾವತ್‌ನೊಂದಿಗೆ ಸೀಟು ವಿನಿಮಯ ಮಾಡಿಕೊಂಡಿದ್ದು, ಮಹಿಳೆಯ ಶವವನ್ನು ಕಾರಿನಡಿಯಿಂದ ಹೊರತೆಗೆದು ರಸ್ತೆಯಲ್ಲಿ ಬಿಟ್ಟಿದ್ದನ್ನು ಕೂಡ ದೃಶ್ಯದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಭೀಕರವೆಂದರೆ, ಚಾಲಕನು ಸಿಸಿಟಿವಿಯ ದೃಷ್ಟಿ ಕ್ಷೇತ್ರದಿಂದ ವೇಗವಾಗಿ ಚಲಿಸುವ ಮೊದಲು ಮತ್ತೊಂದು ಬಾರಿ ಆಕೆಯ ದೇಹದ ಮೇಲೆ ಕಾರನ್ನು ಹಿಮ್ಮುಖವಾಗಿ ಓಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದ್ದರಿಂದ ಬಿಡಾವತ್ ಅವರು “ತನ್ನ ಕೃತ್ಯಗಳ ಬಗ್ಗೆ ತಿಳಿದಿದ್ದರು ಮತ್ತು ಇತರ ಆರೋಪಿಗಳಿಗೆ ಸಹಾಯ ಮಾಡಿದರು” ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದು, ಚಾಲಕನ ವಿರುದ್ಧದ ತಪ್ಪಿತಸ್ಥ ನರಹತ್ಯೆಯ ಆರೋಪವನ್ನು ಪ್ರಶ್ನಿಸಿದ್ದಾರೆ.

ಅಪಘಾತದ ನಂತರ ಮಿಹಿರ್ ಶಾ ತಪ್ಪಿಸಿಕೊಳ್ಳುವ ಯೋಜನೆಯಲ್ಲಿ ತನ್ನ ತಂದೆಗೆ ಅನೇಕ ಫೋನ್ ಕರೆಗಳನ್ನು ಮಾಡಿದ್ದ. ಅವರು, ಕಾರನ್ನು ಬಿಟ್ಟು ಆಟೋ ರಿಕ್ಷಾದಲ್ಲಿ ಗೋರೆಗಾಂವ್‌ನಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗುವಂತೆ ಆದೇಶ ನೀಡಿದ್ದಾರೆ. ಗಂಟೆಗಳ ನಂತರ ಆತನನ್ನು ಅಪರಿಚಿತ ವ್ಯಕ್ತಿಯೊಬ್ಬ ಗೆಳತಿ ಮನೆಯಿಂದ ಕರೆದೊಯ್ದಿದ್ದಾನೆ.

ಈ ಮಧ್ಯೆ, ರಾಜೇಶ್ ಶಾ ಮತ್ತು ಚಾಲಕ ಬಿಎಂಡಬ್ಲ್ಯು ಕಾರನ್ನು ಕಲಾನಗರಕ್ಕೆ ಓಡಿಸಿದರು, ಅಲ್ಲಿ ಅವರು ಶಿವಸೇನೆ ಸ್ಟಿಕ್ಕರ್ ಅನ್ನು ವಿಂಡ್‌ಶೀಲ್ಡ್‌ನಿಂದ ಕಿತ್ತು ಕಾರನ್ನು ಮರೆಮಾಡಲು ಪ್ರಯತ್ನಿಸಿದರು. ಆದರೆ, ವರ್ಲಿ ಠಾಣೆಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ; ‘ಒಬಿಸಿಗಳನ್ನು ಮರಾಠರ ವಿರುದ್ಧ ನಿಲ್ಲುವಂತೆ ಮಾಡುತ್ತಿದ್ದೀರಿ..’; ಫಡ್ನವಿಸ್‌ ವಿರುದ್ಧ ಗುಡುಗಿದ ಮನೋಜ್ ಜಾರಂಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...