“ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿತ್ತು. ಆದರೆ, ನಾವು ಪದಕಗಳ ಪಟ್ಟಿಯಲ್ಲಿ ಇರುತ್ತಿರಲಿಲ್ಲ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರದಲ್ಲಿ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಕೆಲಸ ಮಾಡಲಾಗಿದೆ. ಈ ಮೂಲಕ ಈ ಬಾರಿಯ ಮೊದಲ ಪದಕವನ್ನು ಭಾರತೀಯ ಮಹಿಳೆಯೊಬ್ಬರು ಗೆದ್ದಿರುವುದು ನನಗೆ ತುಂಬಾ ಸಂತಸವನ್ನು ತಂದಿದೆ” ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
2014 se pahele india ko Olympics me medal nahi milte the ~MoS Shobha Karandlaje
Waah didi waah 🫡 pic.twitter.com/BFuFiSZpZd— Azy (@Azycontroll_) August 1, 2024
ಹಾಗಾದರೆ, ಶೋಭಾ ಕರಂದ್ಲಾಜೆ ಹೇಳಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವ ಮೊದಲು ಭಾರತ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನೇ ಪಡೆದಿಲ್ವಾ? ಎಂಬುವುದನ್ನು ನೋಡೋಣ.
ಫ್ಯಾಕ್ಟ್‌ಚೆಕ್ : ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತ ಒಲಿಂಪಿಕ್ಸ್ ಪದಕಗಳ ಪಟ್ಟಿಯಲ್ಲಿ ಇರುತ್ತಿರಲಿಲ್ಲ ಅಥವಾ ಭಾರತ ಪದಕಗಳನ್ನು ಪಡೆಯುತ್ತಿರಲಿಲ್ಲ ಎಂಬ ಸಚಿವೆ ಶೋಭಾ ಕರಂದ್ಲಾಜೆಯ ಹೇಳಿಕೆ ಸುಳ್ಳು.
ಭಾರತ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಪಡೆದಿರುವುದು 1900ನೇ ಇಸವಿಯಲ್ಲಿ. ಕೊಲ್ಕತ್ತಾ ಮೂಲದ ನಾರ್ಮನ್ ಪ್ರಿಚರ್ಡ್ ದೇಶಕ್ಕೆ ಎರಡು ಬೆಳ್ಳಿಯ ಪದಕಗಳನ್ನು ತಂದು ಕೊಟ್ಟಿದ್ದರು. ಇದು ಎಷ್ಯಾದ ಮೊದಲ ಪದಕವೂ ಹೌದು. ಆದರೆ, ನಾರ್ಮನ್ ಪ್ರಿಚರ್ಡ್ ನಮ್ಮವ ಎಂದು ಆಂಗ್ಲರಾಷ್ಟ್ರ ಬ್ರಿಟನ್ ವಾದಿಸುತ್ತಿತ್ತು. ಭಾರತ ನಮ್ಮವನು ಎಂದಿತ್ತು. ಹಾಗಾಗಿ, 125 ವರ್ಷಗಳ ಬಳಿಕವೂ ಭಾರತದ ಮೊದಲ ಒಲಿಂಪಿಕ್ಸ್ ಪದಕ ವಿವಾದಾತ್ಮಕವಾಗಿಯೇ ಉಳಿದಿದೆ.
1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಮೊದಲ ಬಾರಿಗೆ 1952ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಕೆ.ಡಿ ಜಾಧವ್ ಅವರು ರೆಸ್ಲಿಂಗ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.

ಇನ್ನು 2000ದಿಂದ 2010ರ ನಡುವೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದಾಗ 2004ರಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಬಿಂದ್ರಾ, ವಿಜೇಂದರ್ ಸಿಂಗ್, ಸುಶೀಲ್ ಕುಮಾರ್ ಪದಕಗಳನ್ನು ಪಡೆದಿದ್ದರು.
1900ರ ಬಳಿಕ 2024ರವರೆಗೆ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಹಲವು ಪದಕಗಳನ್ನು ಪಡೆದಿದ್ದಾರೆ. ಈ ಬಗ್ಗೆ ಅಂತರ್ಜಾಲದಲ್ಲಿ ಸುಲಭವಾಗಿ ಮಾಹಿತಿ ಲಭ್ಯವಿದ್ದು, ಯಾರು ಬೇಕಾದರು ಪರಿಶೀಲಿಸಬಹುದು. ವಿಕಿಪೀಡಿಯಾದಲ್ಲಿ ಲಭ್ಯವಿರುವ ಪದಕಗಳ ಪಟ್ಟಿಯನ್ನು ಪರಿಶೀಲಿಸಲು ಕೆಳಗಿನ ಲಿಂಕ್ ಒತ್ತಿ.
ಒಟ್ಟಿನಲ್ಲಿ ಸ್ವಾತಂತ್ರ್ಯಪೂರ್ವದಿಂದಲೇ ಭಾರತ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಪಡೆಯುತ್ತಿದೆ. ಹಾಗಾಗಿ, ಮೋದಿ ಸರ್ಕಾರ ಬರುವ ಮೊದಲು ಭಾರತ ಪದಕಗಳ ಪಟ್ಟಿಯಲ್ಲಿ ಇರುತ್ತಿರಲಿಲ್ಲ ಎಂಬ ಸಚಿವೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಸುಳ್ಳು
ಇದನ್ನೂ ಓದಿ : FACT CHECK : ಬೃಂದಾವನ ಉದ್ಯಾನವನವನ್ನು ಸಿದ್ದರಾಮಯ್ಯ ಸರ್ಕಾರ ನಾಶ ಮಾಡಲು ಹೊರಟಿದೆ ಎಂಬುವುದು ಸುಳ್ಳು


