ಬಾಂಗ್ಲಾದೇಶದಲ್ಲಿ ಜನರು ದಂಗೆಯೆದ್ದಿರುವ ಹಿನ್ನೆಲೆ ಪ್ರಧಾನಿ ಶೇಖ್ ಹಸೀನಾ ಸೋಮವಾರ (ಆ.5) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ. ಆ ಬಳಿಕ ಪ್ರಧಾನಿಯ ನಿವಾಸಕ್ಕೆ ಜನರು ನುಗ್ಗಿದ್ದು, ಕೈಗೆ ಸಿಕ್ಕ ವಸ್ತುಗಳನ್ನು ಕೊಂಡೊಯ್ದಿದ್ದಾರೆ. ಜೊತೆಗೆ ಪ್ರಧಾನಿ ಹಸೀನಾ ಅವರ ಸೀರೆ, ಒಳ ಉಡುಪುಗಳನ್ನೂ ದೋಚಿದ್ದಾರೆ.
ಈ ನಡುವೆ ‘ಈಜುಕೊಳದಲ್ಲಿ ಜನರು ಆನಂದಿಸುತ್ತಿರುವುದು, ಐಷಾರಾಮಿ ಹಾಸಿಗೆಯ ಮೇಲೆ ಮಲಗಿರುವುದು ಸೇರಿದಂತೆ ಅನೇಕ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ದೃಶ್ಯಗಳು ಬಾಂಗ್ಲಾದೇಶದ ಪ್ರಧಾನಿಯ ಅಧಿಕೃತ ನಿವಾಸವಾದ ಗಣಭಬನ್‌ನದ್ದು ಎಂದು ಪ್ರತಿಪಾದಿಸಲಾಗಿದೆ.


ಫ್ಯಾಕ್ಟ್‌ಚೆಕ್ : ನಾವು ಮೇಲ್ಗಡೆ ಉಲ್ಲೇಖಿಸಿದ “ಈಜುಕೊಳದಲ್ಲಿ ಜನರು ಆನಂದಿಸುತ್ತಿರುವ ವಿಡಿಯೋ ಮತ್ತು ಬೆಡ್ ಮೇಲೆ ಜನರು ಮಲಗಿರುವ ಫೋಟೋ ಬಾಂಗ್ಲಾದೇಶಕ್ಕೆ ಸಂಬಂಧಿಸಿದಲ್ಲ. ಇವರೆಡೂ ಶ್ರೀಲಂಕಾದ ದೃಶ್ಯಗಳಾಗಿವೆ.

ಜುಲೈ 2022ರಲ್ಲಿ ದೇಶದಲ್ಲಿನ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಈಜುಕೊಳದಲ್ಲಿ ಆನಂದಿಸಿದ್ದರು, ಪ್ರಧಾನಿಯ ಬೆಡ್ ಮೇಲೆ ಮಲಗಿದ್ದರು. ಅಲ್ಲದೆ, ಪ್ರಧಾನಿಯ ನಿವಾಸದಿಂದ ವಸ್ತುಗಳನ್ನು ಹೊತ್ತೊಯ್ದಿದ್ದರು.

ಇವರೆಡು ಮಾತ್ರವಲ್ಲದೆ, ಇನ್ನೂ ಕೆಲವು ಫೋಟೋ, ವಿಡಿಯೋಗಳು ಬಾಂಗ್ಲಾದೇಶದ್ದು ಎಂದು ಹರಿದಾಡುತ್ತಿವೆ. ಬಾಂಗ್ಲಾ ಪ್ರಧಾನಿಯ ನಿವಾಸಕ್ಕೆ ಜನರು ನುಗ್ಗಿ, ಅಲ್ಲಿದ್ದ ವಸ್ತುಗಳನ್ನು ಹೊತ್ತೊಯ್ದಿರುವುದು ಹೌದು. ಆದರೆ, ವೈರಲ್ ಆಗುತ್ತಿರುವ ಎಲ್ಲಾ ಫೋಟೋ, ವಿಡಿಯೋಗಳು ಬಾಂಗ್ಲಾಗೆ ಸಂಬಂಧಿಸಿದ್ದಲ್ಲ.
ಇದನ್ನೂ ಓದಿ : ಬಾಂಗ್ಲಾ ರಾಜಕೀಯ ಬಿಕ್ಕಟ್ಟು: ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ


