ದೇಶದ ಹಿರಿಯ ರಾಜಕಾರಣಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸಂಸದ ಸೀತಾರಾಂ ಯೆಚೂರಿ (Sitaram Yechury) ಗುರುವಾರ ನಿಧನರಾಗಿದ್ದಾರೆ. 72 ವರ್ಷ ವಯಸ್ಸಿನ ಅವರು ಉಸಿರಾಟದ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. 2015ರಲ್ಲಿ ಪ್ರಕಾಶ್ ಕಾರಟ್ ಅವರ ನಂತರ ಯೆಚೂರಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಆಯ್ಕೆಯಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಇತ್ತಿಚೆಗೆ ದೆಹಲಿಯ ಏಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ, ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದರು. ಈ ವೇಳೆ ವೈದ್ಯರ ಬಹುಶಿಸ್ತೀಯ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿತ್ತು.
ಸೀತಾರಾಮ್ ಯೆಚೂರಿ ಅವರು ಪಕ್ಷದ ಹಿರಿಯ ನಾಯಕ ದಿವಂಗತ ಹರ್ಕಿಶನ್ ಸಿಂಗ್ ಸುರ್ಜೀತ್ ಅವರ ಅಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತಿದ್ದರು. ವಿಪಿ ಸಿಂಗ್ ಅವರ ನ್ಯಾಷನಲ್ ಫ್ರಂಟ್ ಸರ್ಕಾರ ಮತ್ತು 1996-97 ರ ಯುನೈಟೆಡ್ ಫ್ರಂಟ್ ಸರ್ಕಾರದ ಮೊದಲು ಸಮ್ಮಿಶ್ರ ಸಮಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವೆರಡೂ ಸರ್ಕಾರಗಳಿಗೆ ಸಿಪಿಐ(ಎಂ) ಹೊರಗಿನಿಂದ ಬೆಂಬಲ ನೀಡಿತ್ತು.
ಇದನ್ನೂ ಓದಿ: ಸೆಸ್ ಹೆಚ್ಚಳದಿಂದ ರಾಜ್ಯಗಳ ತೆರಿಗೆ ಪಾಲು ಕುಗ್ಗುತ್ತಿದೆ: ಕೇರಳ ಸಿಎಂ ಆರೋಪ
ಎಡಪಕ್ಷಗಳು ಮೊದಲ ಯುಪಿಎ ಸರ್ಕಾರವನ್ನು ಬೆಂಬಲಿಸಿದಾಗ ಯೆಚೂರಿ ಅವರು ತಮ್ಮ ಜನಪರ ರಾಜಕೀಯವನ್ನು ಮತ್ತಷ್ಟು ಹರಿತಗೊಳಿಸಿದರು. ಈ ಸರ್ಕಾರದ ಹಲವು ಜನಪರ ನೀತಿ ನಿರೂಪಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತದ ಮೇಲೆ ಅವರು ಒತ್ತಡ ಹೇರಿದ್ದರು.
1974 ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಗೆ ಸೇರಿದ ಯೆಚೂರಿ, ಮರುವರ್ಷವೇ ಪಕ್ಷದ ಸದಸ್ಯರಾಗಿದ್ದರು. ಇಂದಿರಾ ಗಾಂಧಿ ಆಡಳಿತದ ಸಮಯದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಯಿತ್ತು.
Our beloved comrade #SitaramYechury, General Secretary of CPI(M), passed away at AIIMS today.
Red Salute to Comrade Sitaram Yechury! pic.twitter.com/COrcQSuj3A
— CPI (M) (@cpimspeak) September 12, 2024
ಹಿರಿಯ ರಾಜಕಾರಣಿಯ ಸಾವಿಗೆ ದೇಶ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, “ಸೀತಾರಾಮ್ ಅವರು ಒಬ್ಬ ಸ್ನೇಹಿತ. ನಮ್ಮ ದೇಶದ ಬಗ್ಗೆ ಆಳವಾದ ತಿಳುವಳಿಕೆಯಿರುವ ‘ಭಾರತ ಎಂಬ ಕಲ್ಪನೆಯ ರಕ್ಷಕ’. ಅವರೊಂದಿಗೆ ನಡೆಸುತ್ತಿದ್ದ ಸುದೀರ್ಘ ಚರ್ಚೆಗಳನ್ನು ನಾನು ಮಿಸ್ ಮಾಡಲಿದ್ದೇನೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ನನ್ನ ಪ್ರಾಮಾಣಿಕ ಸಂತಾಪ” ಎಂದು ಹೇಳಿದ್ದಾರೆ.
Sitaram Yechury ji was a friend.
A protector of the Idea of India with a deep understanding of our country.
I will miss the long discussions we used to have. My sincere condolences to his family, friends, and followers in this hour of grief. pic.twitter.com/6GUuWdmHFj
— Rahul Gandhi (@RahulGandhi) September 12, 2024
ತಮ್ಮ ನಾಯಕ ನಿಧನಕ್ಕೆ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಸಂತಾಪ ಸೂಚಿಸಿದೆ.
ADIEU
COMRADE
Sitaram Yechury✊Students' Federation of India dips its banner in honour of our beloved comrade, former All India President of SFI and General Secretary of CPI(M), Sitaram Yechury. pic.twitter.com/pfJRTGbmrn
— SFI (@SFI_CEC) September 12, 2024
ವಿಡಿಯೊ ನೋಡಿ: ಸದನದಲ್ಲಿ ಕೆ.ಎಸ್ ಪುಟ್ಟಣ್ಣಯ್ಯನವರು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ


