HomeUncategorized'ದಿ ಪ್ರಾಫೆಟ್' ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

‘ದಿ ಪ್ರಾಫೆಟ್’ ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

- Advertisement -
- Advertisement -

ಯೋಗೇಶ್ ಮಾಸ್ಟರ್ ಅಪಾರ ಓದು ಮತ್ತು ಜೀವನ ಪ್ರೀತಿಯಿರುವ ಸೃಜನಶೀಲ ವ್ಯಕ್ತಿ. ಡುಂಢಿ ಕಾದಂಬರಿ ವಿವಾದದಿಂದ ‘ಖ್ಯಾತ’ರಾದ ಅವರು ಬಹುಮುಖಿ ಪ್ರತಿಭೆಯುಳ್ಳ ಕಲಾವಿದ. ಈ ವಾರದಿಂದ ಅವರ ಪುಟಕ್ಕಿಟ್ಟ ಪುಟಗಳು ಇಲ್ಲಿ ಹೊಳೆಯಲಿವೆ. ಜೀವನದ ಬೇರೆ ಬೇರೆ ಸಂದರ್ಭದ ಜಟಿಲ ಕ್ಷಣಗಳಲ್ಲಿ ಎಂದೋ ಓದಿದ ಪುಸ್ತಕವೊಂದರಿಂದ ಒಳನೋಟವೊಂದು ಮನದಲ್ಲಿ ತೇಲಿ ಬರುತ್ತದೆ. ಆ ಪುಸ್ತಕವು ಜಗತ್ತಿನ ಯಾವುದೋ ಭಾಷೆಯ ಮಹತ್ವದ ಕೃತಿಯಾಗಿರಬಹುದು ಅಥವಾ ನಮ್ಮದೇ ಪರಿಸರದ ಭಾಷೆಯ ಪುಸ್ತಕವಾಗಿರಬಹುದು. ಅಂತಹ ಪುಸ್ತಕಗಳು ಕತ್ತಲೆಯಲ್ಲೂ ಹೊಳೆಯುತ್ತವೆ. ಆ ರೀತಿ ಹೊಳೆಯುವ ಮಹತ್ವದ ಸಾಲುಗಳನ್ನು ಮತ್ತು ಆ ಪುಸ್ತಕದ ಕುರಿತ ಸಾಂದರ್ಭಿಕ ಮಾಹಿತಿಯನ್ನು ಪ್ರತೀ ವಾರವೂ ನಮ್ಮ ಓದುಗರಿಗೆ ಯೋಗೇಶ್ ಮಾಸ್ಟರ್ ತಲುಪಿಸಲಿದ್ದಾರೆ.

ಆದಿಯಲ್ಲಿ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರು ಮನುಷ್ಯನನ್ನೂ ಸೃಷ್ಟಿಸಿದ ತನ್ನದೇ ಪ್ರತಿರೂಪದಲ್ಲಿ. ಆದಾಮ ಮತ್ತು ಹವ್ವರೆಂಬ ಆ ಗಂಡು ಹೆಣ್ಣುಗಳನ್ನು ಸ್ವತಂತ್ರವಾಗಿ ಸ್ವರ್ಗೋದ್ಯಾನದಲ್ಲಿ ಬಿಟ್ಟು, ಅರಿವನ್ನು ನೀಡುವ ಮರದ ಫಲವನ್ನು ತಿನ್ನಬಾರದೆಂಬ ನಿಬಂಧನೆಯನ್ನಿಟ್ಟು ಅವರನ್ನು ಚೆನ್ನಾಗಿಟ್ಟುಕೊಂಡಿದ್ದ. ತಿನ್ನಬಾರದು ಎಂದು ಅವನು ಏಕೆ ಹೇಳಿದ್ದನೋ?! ಆದರೆ ಅವಳು ತಿಂದಳು, ಅವನೂ ತಿಂದ. ಇಬ್ಬರಿಗೂ ಅರಿವುಂಟಾಯಿತು. ತಮ್ಮ ಬೆತ್ತಲೆಯನ್ನು ಅರಿವೆಯ ಕತ್ತಲೆಯಲ್ಲಿ ಇಟ್ಟುಕೊಳ್ಳಬೇಕೆಂಬುದೇ ಮೊದಲ ಅರಿವು. ತಾನು ಲೋಕ ಸಂಚಾರಕ್ಕೆ ಹೋಗಿದ್ದು ಮರಳಿ ಬಂದಾಗ ದೇವರು ಕಂಡಿದ್ದು, ಸ್ತ್ರೀ ತನ್ನ ಸಂಕೋಚದ ಮರೆಯಿಂದ ಉತ್ತರಿಸಿದ್ದು. ಕೋಪಗೊಂಡ ಅವನು ಸ್ವರ್ಗೋದ್ಯಾನದಿಂದ ಹೊರಗಟ್ಟಿದ. ಮಣ್ಣಿಂದ ಬಂದ ಮನುಷ್ಯರು ಮಣ್ಣಿಗೇ ಹೋಗಲೆನ್ನುತ್ತಾ ಗಂಡು-ಹೆಣ್ಣಿಗೆರಡು ಶಾಪಗಳನ್ನು ಕೊಟ್ಟ. ಹೆಣ್ಣಿಗೆ ನೋವಿನಲ್ಲಿ ಹೆರುವ ಶಾಪವಾದರೆ, ಗಂಡಿಗೆ ದುಡಿವ ಶಾಪವ.

ದೇವರು ಶಾಪ ಎನ್ನುವ ದುಡಿದು ಬದುಕುವುದನ್ನು ಖಲೀಲ್ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರ ಭಾಗ್ಯ ಎನ್ನುತ್ತಾನೆ. ದುಡಿಯುವುದೆಂದರೆ ವಿಶ್ವದ ಅನಂತತೆಯು ಹೆಮ್ಮೆಯಿಂದ ಹೋಗುವ ಘನವೆತ್ತ ಮೆರವಣಿಗೆಯ ಭಾಗವಾಗುವುದು ಎನ್ನುತ್ತಾನೆ. ನಿನ್ನ ಹಣೆಯಲ್ಲಿ ದುಡಿಮೆಯೆಂಬುವುದು ದೌರ್ಭಾಗ್ಯವಾಗಿ ಬರೆದಿದ್ದರೆ, ದುಡಿಯುವಾಗ ಸುರಿವ ನಿನ್ನ ಬೆವರು ಅದನ್ನು ತೊಡೆದು ಹಾಕಿ ಬಿಡುವುದು ಎಂದು ಬಿಡುತ್ತಾನೆ ಈ ಪಾಪಿ ಖಲೀಲ.! ದೇವರ ಶಾಪವನ್ನು ಹೆಮ್ಮೆಯ ಬದುಕಿನ ಭಾಗವಾಗಿಸಿಕೊಳ್ಳುತ್ತಾನೆ. ಸಾಲದ್ದಕ್ಕೆ ಪ್ರೇಮದ ಮೂರ್ತ ಸ್ವರೂಪವೇ ದುಡಿಮೆ ಎನ್ನುತ್ತಾನೆ. ನೀನು ಪ್ರೀತಿಸುವುದನ್ನು ನಿನ್ನ ಕೆಲಸದಲ್ಲಿ ತೋರಿಸೆನ್ನುತ್ತಾನೆ.

ದಿ ಪ್ರಾಫೆಟ್ ಎಂದು ಖಲೀಲ್ ಗಿಬ್ರಾನ್ ಬರೆದ ಅರಿವಿನ ಹೊತ್ತಿಗೆಯು ಬಹುಪಾಲು ವಿಶ್ವದ ಎಲ್ಲಾ ಭಾಷೆಗಳಲ್ಲಿಯೂ ಅನುವಾದಿತವಾಗಿವೆ. ಕನ್ನಡದಲ್ಲಿ ಜಿ.ಎನ್ ರಂಗನಾಥ್, ಬಂಜಗೆರೆ ಜಯಪ್ರಕಾಶ್, ದೇವದತ್ತ ಇಡೀ ಪುಸ್ತಕವನ್ನೇ ಅನುವಾದಿಸಿದ್ದರೆ, ತಮಗೆ ಬೇಕಾದಂತಹ ಭಾಗಗಳನ್ನು ಬಹಳಷ್ಟು ಲೇಖಕರು ಅನುವಾದಿಸಿ ಸಂದರ್ಭೋಚಿತವಾಗಿ ತಮ್ಮ ಬರಹಗಳಲ್ಲಿ ಉಲ್ಲೇಖಿಸಿರುತ್ತಾರೆ. ಖಲೀಲನ ಪ್ರಾಫೆಟನ್ನು ಪ್ರವಾದಿ ಎನ್ನುವುದಕ್ಕಿಂತ ದಾರ್ಶನಿಕ ಎಂದು ಕನ್ನಡದಲ್ಲಿ ಕರೆಯುವುದು ಸೂಕ್ತವೆಂದೆನಿಸುತ್ತದೆ.
ಅಲ್ ಮುಸ್ತಾಫ ತನ್ನ ಪಟ್ಟಣಕ್ಕೆ ಮರಳಲು ಬೆಟ್ಟವಿಳಿದು ಬಂದಾಗ ಊರವರು ಸೇರುತ್ತಾರೆ.

ಎದೆಗೆ ಮಗುವನ್ನು ಅವುಚಿಕೊಂಡಿರುವ ಮಹಿಳೆ ಮಗುವಿನ ಬಗ್ಗೆ ಹೇಳು ಎಂದರೆ, “ಮಗುವೆಂಬುದು ನಿಮ್ಮ ಮೂಲಕ ಬಂದಿರುವವರೇ ಹೊರತು ನಿಮ್ಮಿಂದ ಅಲ್ಲ” ಎನ್ನುತ್ತಾ ಮಕ್ಕಳ ಮೇಲೆ ಪೋಕರಿಗಿರುವ ಅಧಿಕಾರವನ್ನು ಕಿತ್ತು, “ನೀವು ಮಕ್ಕಳಂತಾಗಬೇಕೇ ಹೊರತು, ಮಕ್ಕಳನ್ನು ನಿಮ್ಮಂತೆ ಮಾಡಬೇಡಿ. ಏಕೆಂದರೆ ಅವರು ಹೊಂದಿರುವ ಕನಸನ್ನು ನೀವು ಎಂದಿಗೂ ಹೊಂದಲಾರಿರಿ” ಎಂದೆಚ್ಚರಿಸುತ್ತಾನೆ. ಹಿರಿಯರಿಗೆ ಬಾಗಬೇಕು ಎಂದು ಸಾಮಾನ್ಯ ಬೋಧನೆಯನ್ನು ಮಕ್ಕಳಿಗೆ ಮಾಡುವಾಗ ಖಲೀಲ್ ನೀವು ಬಿಲ್ಲಿನಂತೆ ಬಾಗಿ ಮಕ್ಕಳು ಬಾಣದಂತೆ ಚಿಮ್ಮಲಿ ಎನ್ನುತ್ತಾನೆ.

ಮನೆ ಕಟ್ಟುವವನು ಮನೆಯ ಬಗ್ಗೆ ಕೇಳಿದರೆ, “ನಿನ್ನ ದೇಹದ ವಿಸ್ತೃತ ರೂಪವೇ ನಿನ್ನ ಮನೆ” ಎನ್ನುತ್ತಾನೆ. ವ್ಯಾಪಾರಿ ವ್ಯಾಪಾರದ ಬಗ್ಗೆ, ಪ್ರೇಮಿಯು ಪ್ರೇಮದ ಬಗ್ಗೆ, ತಳವಾರನು ಕಾನೂನು ವ್ಯವಸ್ಥೆಯ ಬಗ್ಗೆ, ಬಟ್ಟೆಯ ಬಗ್ಗೆ; ಹೀಗೆ ನಾನಾ ವಿಷಯಗಳ ಬಗ್ಗೆ ಕೇಳಿದವರಿಗೆಲ್ಲಾ ಉತ್ತರಿಸುತ್ತಾ ಹೋಗುವ ಅಲ್ ಮುಸ್ತಾಫ ತನ್ನ ಹಡಗು ಬರಲು ಹೊರಟು ಹೋಗುತ್ತಾನೆ, ಪ್ರಶ್ನಿಸಿದವರಿಗೆಲ್ಲಾ ಅರಿವಿನ ಒಳ ನೋಟಗಳನ್ನು ಕೊಟ್ಟು.

ಪ್ರಾಫೆಟ್ಟಿನ ಪುಟವಿಟ್ಟ ಪುಟಗಳು ಕತ್ತಲಲ್ಲಿಯೂ ಹೊಳೆಯುತ್ತಿರುತ್ತವೆ. ಸಂಬಂಧಗಳ ಸಂಘರ್ಷಗಳಲ್ಲಿ, ಅಸೂಯೆ, ಮತ್ಸರ ಮೂಡಿದ ಕ್ಷಣಗಳಲ್ಲಿ, ಲೋಕದ ರೂಢಿಯ ಭಾವನೆಗಳ್ಯಾವವೇ ಆದರೂ ಕಣ್ಣುಗಳಲ್ಲಿ ಕತ್ತಲಾಗಿ ದಾರಿ ಮಸುಕಾದಾಗ ಖಲೀಲನ ಪ್ರಾಫೆಟ್ ತನ್ನರಿವ ನೋಟಗಳ ಬೆಳಕನ್ನು ನಮ್ಮರಿವ ಕಣ್ಣುಗಳಿಗೆ ಧಾರೆಯೆರೆಯುತ್ತಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...