ಸ್ಥಳೀಯವಾಗಿ ನಡೆದ ರಾಮ್‌ಲೀಲಾ ಕಾರ್ಯಕ್ರಮದ ವೇಳೆ ಕುರ್ಚಿಯ ಮೇಲೆ ಕುಳಿತಿದ್ದಕ್ಕಾಗಿ ಕೆಲವು ಪೊಲೀಸರು 48 ವರ್ಷದ ದಲಿತ ವ್ಯಕ್ತಿಗೆ ಥಳಿಸಿ ಅವಮಾನಿಸಿದ್ದು, ಇದರಿಂದ ಆಘಾತಕ್ಕೊಳಗಾದ ವ್ಯಕ್ತಿ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ಸೊರೊನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.ಉತ್ತರ ಪ್ರದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂತ್ರಸ್ತ ವ್ಯಕ್ತಿಯನ್ನು ಜಿಲ್ಲೆಯ ಸಲೀಂಪುರದ ನಿವಾಸಿ ರಮೇಶ್ ಚಂದ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೃತರ ಕುಟುಂಬಸ್ಥರು ಹಾಗೂ ದಲಿತ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
ಭಾನುವಾರ ರಾತ್ರಿ 9 ಗಂಟೆಗೆ ನೆರೆಯ ರಾಮಲೀಲಾ ಕಾರ್ಯಕ್ರಮಕ್ಕೆ ತೆರಳಿದ್ದ ತಮ್ಮ ಪತಿ ಅಲ್ಲಿನ ಖಾಲಿ ಕುರ್ಚಿಯ ಮೇಲೆ ಕುಳಿತಿದ್ದರು ಎಂದು ಮೃತರ ಪತ್ನಿ ರಾಮ್ ರಾತಿ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಉತ್ತರ ಪ್ರದೇಶ
“ಒಬ್ಬ ದಲಿತನು ಕುರ್ಚಿಯ ಮೇಲೆ ಕುಳಿತಿರುವುದನ್ನು ನೋಡಿ ಸಹಿಸದ ಸಂಘಟಕರು ಅವರನ್ನು ಹೊರಗೆ ಹೋಗುವಂತೆ ಹೇಳಿದ್ದು, ಕಾನ್‌ಸ್ಟೆಬಲ್‌ಗಳಾದ ಬಹದ್ದೂರ್ ಮತ್ತು ವಿಕ್ರಮ್ ಚೌಧರಿ ಅವರನ್ನು ಕುರ್ಚಿಯಿಂದ ನೂಕಿದ್ದಾರೆ” ಎಂದು ಹೇಳಿದ್ದಾರೆ
ಸಂಘಟಕರ ಸೂಚನೆಯ ಮೇರೆಗೆ ಪೊಲೀಸರು ರಮೇಶ್ ಚಂದ್ ಅವರನ್ನು ಕ್ರೂರವಾಗಿ ಥಳಿಸಿದ್ದು, ಅವರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಮೃತರ ಪತ್ನಿ ರಾಮ್ ರಾತಿ ದೂರಿನಲ್ಲಿ ತಿಳಿಸಿದ್ದಾರೆ. “ಅವರು ನಂತರ ಅವನ ಕುತ್ತಿಗೆಗೆ ಸುತ್ತಿದ್ದ ಶಾಲನ್ನು ಎಳೆದು, ಅವನನ್ನು ನೆಲದ ಮೇಲೆ ಕೊಡವಿದ್ದಾರೆ. ಅಲ್ಲದೆ ಅವರಿಗೆ ಥಳಿಸಿದ್ದಾರೆ” ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರತಿಭಟನೆ ಹಿನ್ನಲೆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ವರದಿಯಾಗಿದೆ. ಸಂತ್ರಸ್ತ ರಮೇಶ್ ಚಂದ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


