Homeದಲಿತ್ ಫೈಲ್ಸ್ಗ್ರಾಮದ ಮುಖ್ಯ ರಸ್ತೆಯಲ್ಲಿ ದಲಿತ ಮಹಿಳೆಯ ಶವಯಾತ್ರೆಗೆ ಸವರ್ಣೀಯರಿಂದ ಅಡ್ಡಿ : ಜಾತಿ ದೌರ್ಜನ್ಯಕ್ಕೆ ಪೊಲೀಸರ...

ಗ್ರಾಮದ ಮುಖ್ಯ ರಸ್ತೆಯಲ್ಲಿ ದಲಿತ ಮಹಿಳೆಯ ಶವಯಾತ್ರೆಗೆ ಸವರ್ಣೀಯರಿಂದ ಅಡ್ಡಿ : ಜಾತಿ ದೌರ್ಜನ್ಯಕ್ಕೆ ಪೊಲೀಸರ ಬೆಂಬಲ ಆರೋಪ

- Advertisement -
- Advertisement -

ತಮಿಳುನಾಡಿನ ತಿರುವಣ್ಣಾಮಲೈನಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಮೋತಕ್ಕಲ್ ಗ್ರಾಮದಲ್ಲಿ ಕಳೆದ ಸೋಮವಾರ (ಸೆ.30) ದಲಿತ ಮಹಿಳೆಯೊಬ್ಬರ ಶವಯಾತ್ರೆಗೆ ಪ್ರಬಲ ಜಾತಿಯ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಮ್ಮ ಪ್ರದೇಶದ ಮಾರ್ಗದ ದುಸ್ಥಿತಿಯಿಂದಾಗಿ ಗ್ರಾಮದ ಮುಖ್ಯರಸ್ತೆಯ ಮೂಲಕ ಮೃತದೇಹ ಸಾಗಿಸಲು ದಲಿತ ಕುಟುಂಬ ನಿರ್ಧರಿಸಿತ್ತು ಎಂದು ದಿ ಮೂಕನಾಯಕ ವರದಿ ಮಾಡಿದೆ.

ವರದಿಯ ಪ್ರಕಾರ, 70 ವರ್ಷದ ದಲಿತ ಮಹಿಳೆ ಎಸ್.ಕಿಲಿಯಾಂಬಾಳ್ ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ಸಂಜೆ ದಲಿತ ಕಾಲೋನಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ಸಾವನ್ನಪ್ಪಿದ್ದರು. ದಲಿತರ ಸ್ಮಶಾನ ಊರ ಹೊರಗೆ ಇರುವುದರಿಂದ ಅಲ್ಲಿಗೆ ಶವ ಕೊಂಡೊಯ್ಯಬೇಕಿತ್ತು. ಗ್ರಾಮದಲ್ಲಿ ದಲಿತರಿಗೆ ಮತ್ತು ಸವರ್ಣಿಯರಿಗೆ ಶವಯಾತ್ರೆ ನಡೆಸಲು ಪ್ರತ್ಯೇಕ ರಸ್ತೆಗಳಿವೆ. ದಲಿತ ಕೇರಿಯ ರಸ್ತೆ ದುಸ್ಥಿಯಿಂದ ಕೂಡಿದೆ. ಹಾಗಾಗಿ, ಸೋಮವಾರ ದಲಿತರು ಗ್ರಾಮದ ಮುಖ್ಯ ರಸ್ತೆಯಲ್ಲಿ ಶವಯಾತ್ರೆ ನಡೆಸಲು ಮುಂದಾಗಿದ್ದರು. ಈ ವೇಳೆ ಪ್ರಬಲ ಜಾತಿಯವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಜೆ 4 ಗಂಟೆ ಸುಮಾರಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಶವಯಾತ್ರೆ ನಡೆಸಲು ದಲಿತರು ನಿರ್ಧರಿಸಿದ್ದರು. ಆದರೆ ಪ್ರಬಲ ಜಾತಿಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸ್ ತಂಡ ಗ್ರಾಮಕ್ಕೆ ದೌಡಾಯಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆದಿದೆ ಎಂದು ವರದಿ ವಿವರಿಸಿದೆ.

ತಿರುವಣ್ಣಾಮಲೈನ ಕಂದಾಯ ವಿಭಾಗೀಯ ಅಧಿಕಾರಿ (ಆರ್‌ಡಿಒ) ಆರ್.ಮಂದಾಕಿನಿ ನೇತೃತ್ವದಲ್ಲಿ, ಕಂದಾಯ ಅಧಿಕಾರಿಗಳ ತಂಡವು ಗ್ರಾಮದಲ್ಲಿ ಪ್ರಬಲ ಜಾತಿ ಮತ್ತು ದಲಿತರ ನಡುವೆ ಶಾಂತಿ ಮಾತುಕತೆಗಳನ್ನು ಆಯೋಜಿಸಿತ್ತು. ಸುಮಾರು ಐದು ಗಂಟೆಗಳ ಚರ್ಚೆಯ ನಂತರ, ದಲಿತರು ತಮ್ಮ ಸಾಂಪ್ರದಾಯಿಕ ಮಾರ್ಗವನ್ನು ಬಳಸಲು ಒಪ್ಪಿಕೊಂಡರು. ಸ್ಥಳೀಯ ಆಡಳಿತ ದಲಿತ ಕೇರಿಯ ಮಾರ್ಗವನ್ನು ದುರಸ್ಥಿಗೊಳಿಸಿದ ಬಳಿಕ, ಸೋಮವಾರ ರಾತ್ರಿ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿದೆ.

ಮೋತಕ್ಕಲ್ ತಿರುವಣ್ಣಾಮಲೈ ಮತ್ತು ಧರ್ಮಪುರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಡಿ ಗ್ರಾಮವಾಗಿದೆ. ಇದು ತಂಡ್ರಂಪಟ್ಟು ಪಂಚಾಯತ್ ಯೂನಿಯನ್ ವ್ಯಾಪ್ತಿಗೆ ಬರುತ್ತದೆ. ಗ್ರಾಮದ ಪ್ರಬಲ ಜಾತಿಯಲ್ಲಿ ಹೆಚ್ಚಿನವರು ಭೂಮಾಲೀಕರಾಗಿದ್ದಾರೆ. ದಲಿತರು ಅವರ ಜಮೀನುಗಳಲ್ಲಿ ವರ್ಷಗಳಿಂದ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಸಿಪಿಐ(ಎಂ) ಕಾರ್ಯಕರ್ತ ಆರ್.ಅಣ್ಣಾಮಲೈ ಮಾಧ್ಯಮದವರೊಂದಿಗೆ ಮಾತನಾಡಿ, “ಈ ಗ್ರಾಮದಲ್ಲಿ ಜಾತಿ ಆಧಾರಿತ ತಾರತಮ್ಯ ಸಾಮಾನ್ಯವಾಗಿದೆ. ಹಿಂದೆ ದಲಿತರಿಗೆ ಪ್ರಬಲ ಜಾತಿಯವರ ಸಲೂನ್‌ಗಳಲ್ಲಿ ಕ್ಷೌರ ಮಾಡಿಸಿಕೊಳ್ಳಲು ಅವಕಾಶವಿರಲಿಲ್ಲ. ದಲಿತರಿಗೆ ಮತ್ತು ಪ್ರಬಲರಿಗೆ ಪ್ರತ್ಯೇಕ ಟೀ ಕಪ್‌ಗಳನ್ನು ಬಳಸಲಾಗುತ್ತಿತ್ತು” ಎಂದು ತಿಳಿಸಿದ್ದಾರೆ.

ಬಸ್‌ಗಾಗಿ ಕಾಯುವ ದಲಿತರು ಪ್ರಬಲ ಜಾತಿಯವರು ನಡೆಸುತ್ತಿರುವ ಸಣ್ಣ ಅಂಗಡಿಗಳ ಬಳಿಯ ಮರಗಳ ನೆರಳಿನಲ್ಲಿ ಕೂಡ ನಿಲ್ಲುವಂತಿಲ್ಲ. ದಲಿತರು ಬಿಸಿಲಿನಲ್ಲೇ ನಿಲ್ಲುವಂತೆ ಒತ್ತಾಯಿಸಲಾಗುತ್ತಿದೆ ಎಂದು ಗ್ರಾಮದ ನಿವಾಸಿಗಳು ಹೇಳಿರುವುದಾಗಿ ವರದಿಯಾಗಿದೆ.

ಶವಯಾತ್ರೆಗೆ ಅಡ್ಡಿಪಡಿಸಿದ ಘಟನೆಯ ನಂತರ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಗ್ರಾಮದಲ್ಲಿ ಜಾತಿ ಆಧಾರಿತ ತಾರತಮ್ಯ ಕೊನೆಗೊಳಿಸಲು ಎರಡು ಸಮುದಾಯಗಳ ನಡುವೆ ಸರಣಿ ಮಾತುಕತೆಗಳನ್ನು ಆಯೋಜಿಸಿದ್ದಾರೆ. ಜಿಲ್ಲಾಧಿಕಾರಿ ಡಿ.ಭಾಸ್ಕರ ಪಾಂಡಿಯನ್ ಮಾತನಾಡಿ, ಗ್ರಾಮದಲ್ಲಿ ಜಾತಿ ತಾರತಮ್ಯ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಮೊತಕ್ಕಲ್ ಗ್ರಾಮದಲ್ಲಿ ಆದಿ ದ್ರಾವಿಡರ್ ಸಮುದಾಯದ 500ಕ್ಕೂ ಹೆಚ್ಚು ಅರ್ಹ ಮತದಾರರು ಈ ವರ್ಷ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಮೂಲ ಸೌಕರ್ಯಗಳ ಕೊರತೆ ಹಾಗೂ ಜಾತಿ ತಾರತಮ್ಯದಿಂದ ದಲಿತ ಸಮುದಾಯ ಹಲವು ವರ್ಷಗಳಿಂದ ನರಳುತ್ತಿದೆ ಎಂದು ದಲಿತ ಹಕ್ಕುಗಳ ಹೋರಾಟಗಾರ್ತಿ ಮತ್ತು ಲೇಖಕಿ ಶಾಲಿನ್ ಮರಿಯಾ ಲಾರೆನ್ಸ್ ಅವರನ್ನು ಉಲ್ಲೇಖಿಸಿ ಮೂಕನಾಯಕ ವರದಿ ಹೇಳಿದೆ.

ದಲಿತರಿಗೆ ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆಯೇ ಇಲ್ಲ. ಸಮುದಾಯವು ಅನೇಕ ಪ್ರಬಲ ಜಾತಿ ಮತ್ತು ಪಂಚಾಯತ್ ಅಧ್ಯಕ್ಷರಿಂದ ತಾರತಮ್ಯವನ್ನು ಎದುರಿಸಿದೆ. ಸ್ಮಶಾನಕ್ಕೆ ತೆರಳಲು ಪ್ರತ್ಯೇಕ ಮಾರ್ಗವನ್ನು ಬಳಸಬೇಕಾದ ಅನಿವಾರ್ಯತೆ ಹಲವು ವರ್ಷಗಳಿಂದ ನಮಗೆ ಎದುರಾಗಿದೆ. ಆದರೆ, ಗ್ರಾಮದ ಪ್ರಬಲ ಜಾತಿಯವರು ಮುಖ್ಯ ರಸ್ತೆಯಲ್ಲಿ ಹೋಗಲು ಬಿಡುತ್ತಿಲ್ಲ. ಅವರಿಂದ ಭಯಭೀತರಾಗಿದ್ದೇವೆ” ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ತಮ್ಮ ಸಾಮೂಹಿಕ ಅತೃಪ್ತಿ ವ್ಯಕ್ತಪಡಿಸಲು ಲೋಕಸಭೆ ಚುನಾವಣೆಗೂ ಮುನ್ನ ಗ್ರಾಮಸ್ಥರು ಗ್ರಾಮದ ಪ್ರವೇಶ ದ್ವಾರ ಹಾಗೂ ಸುಮಾರು 200 ಮನೆಗಳ ಮುಂದೆ ಕಪ್ಪು ಬಾವುಟ ಹಾರಿಸಿದ್ದರು. ಗ್ರಾಮಸ್ಥರು ತಮ್ಮ ಬೇಡಿಕೆ ಹಾಗೂ ಕುಂದುಕೊರತೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನೂ ಸಲ್ಲಿಸಿದ್ದರು ಎಂದು ಮೂಕನಾಯಕ ತಿಳಿಸಿದೆ.

ಜಾತಿ ದೌರ್ಜನ್ಯಕ್ಕೆ ಪೊಲೀಸರಿಂದ ಬೆಂಬಲ : ಆರೋಪ

ಗ್ರಾಮದ ಮುಖ್ಯ ರಸ್ತೆಯಲ್ಲಿ ದಲಿತ ಮಹಿಳೆಯ ಶವಯಾತ್ರೆಗೆ ಪ್ರಬಲರು ಅಡ್ಡಿಪಡಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು, ಪ್ರಬಲರ ಮೇಲೆ ಕ್ರಮಕೈಗೊಂಡು ದಲಿತರಿಗೆ ಅವರ ಹಕ್ಕು ನೀಡಬೇಕಾಗಿತ್ತು. ಆದರೆ, ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಮೃತ ಮಹಿಳೆಯ ಕುಟುಂಬಸ್ಥರಿಗೆ ಪರ್ಯಾಯ ಮಾರ್ಗದಲ್ಲಿ ಶವಯಾತ್ರೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಮೂಲಕ ಜಾತಿ ದೌರ್ಜನ್ಯವನ್ನು ಪೊಲೀಸರು ಬೆಂಬಲಿಸಿದ್ದಾರೆ. ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ದಲಿತ ಸಮುದಾಯ ಆರೋಪಿಸಿದೆ.

ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷವಾದ ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ವರದಿ ಕೂಡ ಈ ಆರೋಪವನ್ನು ಪುಷ್ಠೀಕರಿಸಿದೆ. ಘಟನಾ ಸ್ಥಳಕ್ಕೆ ಧಾವಿಸಿದ ವಿಸಿಕೆಯ ಸತ್ಯಶೋಧನಾ ತಂಡ, ತಿರುವಣ್ಣಾಮಲೈ ಶಾಸಕ ಮತ್ತು ಲೋಕೋಪಯೋಗಿ, ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳ ಸಚಿವ ಎವಿ ವೇಲು ಅವರ ಆಪ್ತ ಎಂದು ಹೇಳಿಕೊಳ್ಳುವ ಸ್ಥಳೀಯ ಡಿಎಂಕೆ ನಾಯಕ ಕೂಡ ಇದಕ್ಕೆ ಸಹಕರಿಸಿದ್ದಾರೆ ಎಂದಿದೆ.

ಇದನ್ನೂ ಓದಿ : ತಮಿಳುನಾಡು : ಜಾತಿ ತಾರತಮ್ಯ ಪ್ರತಿಭಟಿಸಿದ ಬುಡಕಟ್ಟು ಪಂಚಾಯತ್ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...