ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಹರಿಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರ ಹಿಡಿದಿದ್ದು, ಜಮ್ಮುಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ), ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮೈತ್ರಿ ಗೆದ್ದಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಒಡೆದ ನಂತರ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಬಿಜೆಪಿ ಎಡವಿ ಬಿದ್ದಿದೆ. ಸೋತರೂ ಗೆದ್ದ BJP Jammu and Kashmir Assembly Elections 2024
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಎನ್‌ಸಿ ತನ್ನ ಪ್ರಾಬಲ್ಯ ಮರೆದಿದ್ದು, ಬಿಜೆಪಿಗೆ ಸೆಡ್ಡು ಹೊಡೆದಿದೆ. ಎನ್‌ಸಿ ನೇತೃತ್ವದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಜೊತೆಗಿನ ಮೈತ್ರಿ ರಾಜ್ಯದಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದೆ. ಎನ್‌ಸಿ ಸ್ಪರ್ಧಿಸಿದ್ದ 56 ಸ್ಥಾನಗಳಲ್ಲಿ 42 ಸ್ಥಾನಗಳನ್ನು ಗೆದ್ದಿದ್ದು, ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಇದನ್ನೂಓದಿ: ಕಾರ್ಮಿಕ ಮಾನದಂಡಗಳ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ಫ್ಲೆಕ್ಸ್, ಫ್ಲಿಪ್‌ಕಾರ್ಟ್, ಉಬರ್, ಪೋರ್ಟರ್: ವರದಿ
ಅದಾಗ್ಯೂ, ಎನ್‌ಸಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ತಾನು ಸ್ಪರ್ಧಿಸಿದ್ದ 39 ಕ್ಷೇತ್ರಗಳಲ್ಲಿ ಕೇವಲ 6 ಕ್ಷೇತ್ರಗಳನ್ನು ಮಾತ್ರ ಗೆದ್ದು ತೀರಾ ಕಳಪೆ ಪ್ರದರ್ಶನ ನೀಡಿದೆ. ಮೈತ್ರಿಯ ಮತ್ತೊಂದು ಪಕ್ಷವಾದ ಸಿಪಿಐ(ಎಂ) ತನಗೆ ನೀಡಿದ ಒಂದು ಕ್ಷೇತ್ರವನ್ನು ಅನಾಯಸವಾಗಿ ಗೆದ್ದುಕೊಂಡಿದೆ.
ಈ ನಡುವೆ ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷವಾಗಿರುವ ಎಎಪಿ ಜಮ್ಮು ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆದಿದೆ. ಒಟ್ಟು 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಎಪಿ 1 ಸ್ಥಾನವನ್ನು ವಶಪಡಿಸಿಕೊಂಡಿದೆ. ಈ ಮೂಲಕ ಪಕ್ಷವೂ 5ನೇ ರಾಜ್ಯದಲ್ಲಿ ತನ್ನ ಖಾತೆ ತೆರೆದಿದೆ.ಸೋತರೂ ಗೆದ್ದ BJP
ಅದಾಗ್ಯೂ, ರಾಜ್ಯದ ಈ ಹಿಂದಿನ ಆಡಳಿತ ಪಕ್ಷವಾಗಿದ್ದ ಪಿಡಿಪಿ ತೀವ್ರ ಮುಖಭಂಗಕ್ಕೊಳಗಾಗಿದ್ದು 80 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 3 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ. ಇದರ ಜೊತೆಗೆ ಜೆಕೆಪಿಎಫ್ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 1 ಕ್ಷೇತ್ರದಲ್ಲಿ ಗೆಲುವು ಕಂಡಿದ್ದು, ರಾಜ್ಯದ 7 ಕ್ಷೇತ್ರಗಳಲ್ಲಿ ಪಕ್ಷೇತರರು ವಿಜಯಿಯಾಗಿದ್ದಾರೆ.
ಸೋತರೂ ಬಲ ಹೆಚ್ಚಿಸಿಕೊಂಡ ಬಿಜೆಪಿ, ಗೆದ್ದರೂ ಸೋತ ಕಾಂಗ್ರೆಸ್; ಪ್ರಾಬಲ್ಯ ಮೆರೆದ ಎನ್‌ಸಿ
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಒಡೆದ ನಂತರ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಬಿಜೆಪಿ ಎಡವಿ ಬಿದ್ದಿದೆ. ಆದರೂ ತನ್ನ ಬಲವನ್ನು ಹೆಚ್ಚಿಕೊಂಡಿರುವ ಬಿಜೆಪಿ ರಾಜ್ಯದ 2ನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 10 ವರ್ಷಗಳ ಹಿಂದೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಜಮ್ಮುಕಾಶ್ಮೀರ ಪ್ರಾಂತ್ಯದ 90 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 4 ಸ್ಥಾನಗಳನ್ನು ಹೆಚ್ಚಿಸಿಕೊಂಡಿವೆ.
ಇದನ್ನೂಓದಿ: ಭಾರೀ GST ವಂಚನೆ | ದೇಶದಾದ್ಯಂತ 200 ಕ್ಕೂ ಹೆಚ್ಚು ನಕಲಿ ಸಂಸ್ಥೆಗಳು ಭಾಗಿ!
ಕಾಂಗ್ರೆಸ್ ತಾನು ಸ್ಪರ್ಧಿಸಿದ್ದ 39 ಕ್ಷೇತ್ರಗಳಲ್ಲಿ ಕೇವಲ 6 ಕ್ಷೇತ್ರಗಳನ್ನು ಮಾತ್ರ ಗೆದ್ದು ತೀರಾ ಕಳಪೆ ಪ್ರದರ್ಶನ ನೀಡಿದೆ. 2014ರಲ್ಲಿ ಈ ಪ್ರಾಂತ್ಯದಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ 6 ಕ್ಷೇತ್ರಗಳನ್ನು ಕಳೆದುಕೊಂಡಿದೆ.
ರಾಜ್ಯದ ಅತಿ ದೊಡ್ಡ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 90 ವಿಧಾನಸಭಾ ಸ್ಥಾನಗಳಿರುವ ಜಮ್ಮು ಕಾಶ್ಮೀರದಲ್ಲಿ 42ರನ್ನು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಸಿ 15 ಸ್ಥಾನಗಳನ್ನಷ್ಟೆ ಗೆದ್ದುಕೊಂಡಿತ್ತು. ಈ ಬಾರಿ ಅದು ಹೆಚ್ಚುವರಿಯಾಗಿ 27 ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದಿದೆ.
ರಾಜ್ಯದ ಈ ಹಿಂದಿನ ಆಡಳಿತರೂಢ ಪಕ್ಷವಾಗಿದ್ದ ಪಿಡಿಪಿ 28 ಕ್ಷೇತ್ರಗಳಿಂದ 3ಕ್ಕೆ ಇಳಿದಿದೆ. ಈ ಹಿಂದೆ 2 ಕ್ಷೇತ್ರಗಳನ್ನು ಹೊಂದಿದ್ದ ಜೆಪಿಸಿ ಸೊನ್ನೆಗೆ ಇಳಿದಿದ್ದು, ಜೆಕೆಪಿಎಫ್ 1 ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಹಾಗೆಯೆ ಉಳಿಸಿಕೊಂಡಿದೆ. ಆದರೆ ಪಕ್ಷೇತರ ಅಭ್ಯರ್ಥಿಗಳು 3 ಕ್ಷೇತ್ರಗಳಿಂದ 7ಕ್ಕೆ ಏರಿಕೆಯಾಗಿದ್ದಾರೆ.ಸೋತರೂ ಗೆದ್ದ BJP
ವಿಡಿಯೊ ನೋಡಿ: ‘ಭೂಮಿ- ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ’ದ ಕುರಿತು ಸಂಘಟಕರ ಮಾತುಗಳು


