ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರ ಬಳಿ ದೇವಸ್ಥಾನವೊಂದರ ಉತ್ಸವದ ವೇಳೆ ಪಟಾಕಿ ಅವಘಡ ಸಂಭವಿಸಿ 150ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸುಮಾರು 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ (ಅ.28) ತಡರಾತ್ರಿ ನೀಲೇಶ್ವರ ಬಳಿಯ ಅಂಜೂತಬಳಂನ ವೀರರ್ಕಾವು ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಕಳಿಯಾಟ ಅಥವಾ ತೆಯ್ಯಂ ನಡೆಯುತ್ತಿದ್ದ ವೇಳೆ ಅವಘಡ ನಡೆದಿದೆ. ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
Explosion at Fireworks Storage Injures 154 at #Kasaragod's Anjoottambalam Veerarkavu Kaliyattam Festival.
District Collector Imbashekhar says 97 of the injured are currently undergoing treatment at various hospitals, while authorities have initiated an investigation. pic.twitter.com/eMk2YVti5k
— Anusha Ravi Sood (@anusharavi10) October 29, 2024
ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ದುರಂತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ವಿಡಿಯೋದಲ್ಲಿ ಒಂದೇ ಸಮನೆ ಸ್ಪೋಟ ಸಂಭವಿಸಿ ಭಾರೀ ಪ್ರಮಾಣದಲ್ಲಿ ಬೆಂಕಿ ಆವರಿಸುವುದನ್ನು ನೋಡಬಹುದು.
ಘಟನಾ ಸ್ಥಳಕ್ಕೆ ಕಾಸರಗೋಡು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ರೈತರಿಗೆ ಮಂಜೂರಾದ ಭೂಮಿಯನ್ನು ವಕ್ಫ್ ಬೋರ್ಡ್ ಹಿಂಪಡೆಯುತ್ತಿಲ್ಲ : ಸಚಿವ ಕೃಷ್ಣಬೈರೇಗೌಡ


