Homeಮುಖಪುಟಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

- Advertisement -
- Advertisement -

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ (ಮಾ.15) ತಿಳಿಸಿದ್ದಾರೆ.

ಶಂಕಿತರು ಬೇಹುಗಾರಿಕೆ ಚಟುವಟಿಕೆಯ ಭಾಗವಾಗಿ ದೆಹಲಿಯಲ್ಲಿ ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾವನ್ನು ಸಹ ಅಳವಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳನ್ನು ಬಿಜ್ನೋರ್ ನಿವಾಸಿ ಸುಹೇಲ್ ಮಲಿಕ್ (23), ಪ್ರವೀಣ್ (19), ಗಾಜಿಯಾಬಾದ್‌ನ ಕೌಶಂಬಿ ನಿವಾಸಿ ಸಾನೆ ಇರಾಂ ಅಲಿಯಾಸ್ ಮೆಹೆಕ್ (25), ಔರೈಯಾ ನಿವಾಸಿ ರಾಜ್ ವಾಲ್ಮೀಕಿ (19), ಬದೌನ್ ನಿವಾಸಿ ಶಿವ ವಾಲ್ಮೀಕಿ; ಶಹಜಹಾನ್‌ಪುರ ನಿವಾಸಿ ರಿತಿಕ್ ಗಂಗ್ವಾರ್ (23) ಎಂದು ಗುರುತಿಸಲಾಗಿದೆ.

“ಶನಿವಾರ, ಗಾಜಿಯಾಬಾದ್‌ನಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಸಾರ್ವಜನಿಕ ಸ್ಥಳಗಳು ಮತ್ತು ಭದ್ರತಾ ಸಂಸ್ಥೆಗಳನ್ನು ಚಿತ್ರೀಕರಿಸುತ್ತಿರುವ ಶಂಕಿತ ಗ್ಯಾಂಗ್ ಬಗ್ಗೆ ನಮಗೆ ಸುಳಿವು ಸಿಕ್ಕಿತು. ಗಾಜಿಯಾಬಾದ್‌ನ ಭೋವಾಪುರದಲ್ಲಿ ಶಂಕಿತರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ” ಎಂದು ಗಾಜಿಯಾಬಾದ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರಾಜ್ ಕರಣ್ ನಯ್ಯರ್ ಹೇಳಿದರು.

“ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಅವರ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ಕ್ಯಾನ್ ಮಾಡಿದಾಗ, ಅವರು ವಿದೇಶಿ ಸಂಖ್ಯೆಗೆ ಹಲವಾರು ಛಾಯಾಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಕಂಡುಬಂದಿದೆ. ಸುಹೇಲ್ ಮಲಿಕ್ ಈ ಕಾರ್ಯವನ್ನು ನಿರ್ವಹಿಸಲು ಇತರರನ್ನು ನೇಮಿಸಿಕೊಂಡಿದ್ದರು” ಎಂದು ಅವರು ಹೇಳಿದರು.

“ವಿದೇಶಿ ಸಂಖ್ಯೆ ಪಾಕಿಸ್ತಾನದ ದೇಶದ ಸಂಕೇತವನ್ನು ಹೊಂದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೂ, ಅದು ಕಾರ್ಯನಿರ್ವಹಿಸುತ್ತಿರುವ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಹೆಸರು ಹೇಳಿಲಿಚ್ಚಸದ ಪೊಲೀಸ್ ಅಧಿಕಾರಿಬ್ಬರು ತಿಳಿಸಿದ್ದಾರೆ ಎಂದು ‘ಹಿಂದೂಸ್ಥಾನ್ ಟೈಮ್ಸ್‌’ ವರದಿ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಔಷಧ ತಯಾರಕರ ಪರವಾಗಿ ಇಡೀ ವ್ಯವಸ್ಥೆ ಕೆಲಸ ಮಾಡುತ್ತಿರುವುದೇಕೆ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮತ್ತು ಚಿಲ್ಲರೆ ವ್ಯಾಪಾರಿಗಳು ಅವುಗಳನ್ನು ಖರೀದಿಸುವ ಬೆಲೆಯ ನಡುವಿನ ಭಾರಿ ವ್ಯತ್ಯಾಸದ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದೆ. ಔಷಧ ತಯಾರಕರಿಗೆ...

ಚುನಾವಣಾ ಆಯೋಗದ ಅಫಿಡವಿಟ್ ಕುರಿತ ‘ಲೈವ್ ಲಾ’ ರೀಲ್ ತೆಗೆದುಹಾಕಿದ ಇನ್‌ಸ್ಟಾಗ್ರಾಮ್

ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ (ಅ.26) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್ ಕುರಿತು ವಿವರಿಸುವ ತನ್ನ ರೀಲ್ ಅನ್ನು ಇನ್‌ಸ್ಟಾಗ್ರಾಂ ತೆಗೆದುಹಾಕಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಲೈವ್ ಲಾ (Livelaw.in)...

‘Declaration not a part of Form-6’ : ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ ಚುನಾವಣಾ ಆಯೋಗ?

ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಸೋಮವಾರ (ಅ.26) ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೊಸ ಮತದಾರರನ್ನು ಸೇರಿಸುವ 'ಫಾರಂ-6ರ' ಜೊತೆ ಸಲ್ಲಿಸುವಂತೆ ಸೂಚಿಸಲಾಗಿದ್ದ 'ಘೋಷಣಾ ಪತ್ರ' ಫಾರಂ-6ರ ಭಾಗವಾಗಿರಲಿಲ್ಲ (Declaration not a part of...

‘ತಪ್ಪು ಗ್ರಹಿಕೆ, ಅಶಾಂತಿ’ ನೆಪದಲ್ಲಿ ಉಮರ್ ಖಾಲಿದ್ ಅವರ ಸಂಶೋಧನಾ ಕೃತಿಯನ್ನು ಗ್ರಂಥಾಲಯದಿಂದ ತೆಗೆದ ಐಐಎಸ್‌ಇಆರ್ ಪುಣೆ

ಪುಣೆ: ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರು ಬರೆದ ಪುಸ್ತಕವೊಂದನ್ನು ಗ್ರಂಥಾಲಯಕ್ಕೆ ಹೊಸದಾಗಿ ಸೇರ್ಪಡೆ ಮಾಡಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ...

ಗ್ಯಾನೇಶ್ ಕುಮಾರ್ ಕಾರ್ಯವೈಖರಿ ಪ್ರಶ್ನಿಸಿ ಅರ್ಜಿ : ಚುನಾವಣಾ ಆಯೋಗದ ಉತ್ತರಕ್ಕೆ ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯವೈಖರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು (ಅ.27) ಮುಂದೂಡಿದೆ. ನಿನ್ನೆ ಇಸಿಐ ಸಲ್ಲಿಸಿರುವ ಆಕ್ಷೇಪಣಾ ಅಫಿಡವಿಟ್‌ಗೆ (ಕೌಂಟರ್ ಅಫಿಡವಿಟ್) ಪ್ರತ್ಯುತ್ತರ (ರಿಜಾಯಿಂಡರ್) ಸಲ್ಲಿಸಲು...

ತಮಿಳುನಾಡು: ಥೇಣಿ ಉಪಜೈಲಿನಿಂದ 17 ವಿಚಾರಣಾಧೀನ ಕೈದಿಗಳ ಪರಾರಿ; ನಾಲ್ವರು ಪುನಃ ಬಂಧನ

ತಮಿಳುನಾಡಿನ ಆಂಡಿಪಟ್ಟಿ ಸಮೀಪದ ತೆಕ್ಕಂಪಟ್ಟಿ ಉಪಜೈಲಿನಲ್ಲಿ ಜೈಲು ಸಿಬ್ಬಂದಿಯನ್ನು ಥಳಿಸಿ 17 ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ ಎಂದು ಮಂಗಳವಾರ (ಅ.27) ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಜೈಲಿನಿಂದ ಪರಾರಿಯಾದವರ ಪೈಕಿ...

ಕರ್ನಾಟಕ ಎಸ್ಐಆರ್: ಅಂತಿಮ ಮತದಾರರ ಪಟ್ಟಿಯಿಂದ 99.32 ಲಕ್ಷ ಹೆಸರುಗಳು ಹೊರಕ್ಕೆ; ಮತದಾರರ ಸಂಖ್ಯೆ 4.55 ಕೋಟಿಗೆ ಕುಸಿತ: ವರದಿ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಿಂದ ಬರೋಬ್ಬರಿ 99.32 ಲಕ್ಷ ಮತದಾರರ ಹೆಸರುಗಳು ಹೊರಗುಳಿದಿವೆ. ಮಂಗಳವಾರ ಪ್ರಕಟವಾಗಲಿರುವ ಅಂತಿಮ ಪಟ್ಟಿಯಲ್ಲಿ ರಾಜ್ಯದ...

‘ನ್ಯೂಸ್‌ರೂಮ್‌ಗಳೇ ಮುಚ್ಚಿಹೋಗಲಿವೆ’ : ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿಎನ್‌ಪಿಎ; ಕೇಂದ್ರ ಸರ್ಕಾರಕ್ಕೆ ನೋಟಿಸ್

ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ, 2023ರ (DPDP Act) ನಿಬಂಧನೆಗಳನ್ನು ಪ್ರಶ್ನಿಸಿ ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (DNPA) ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಅ.27) ನೋಟಿಸ್...

ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದಕ್ಕೂ ಗ್ಯಾನೇಶ್ ಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕು : ಪ್ರಶಾಂತ್ ಭೂಷಣ್

ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದಕ್ಕೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಕೈಗೊಂಡ...

SIR ವಿವಾದ: ಎಲ್ಲಾ ಆದೇಶಗಳು ಒಮ್ಮತದಿಂದಲೇ ಎಂದು ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಅಫಿಡವಿಟ್!

ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR)ಗೆ ಸಂಬಂಧಿಸಿದ ಎಲ್ಲಾ ಆದೇಶಗಳು ಸಂಪೂರ್ಣ ಒಮ್ಮತದಿಂದಲೇ ಹೊರಬಂದಿವೆ ಎಂದು ಭಾರತೀಯ...