2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಭಯೋತ್ಪಾದಕಿ ಪ್ರಜ್ಞಾ ಠಾಕೂರ್ ವಿರುದ್ಧ ವಿಶೇಷ ಎನ್‌ಐಎ ನ್ಯಾಯಾಲಯ ಜಾಮೀನು ನೀಡಬಹುದಾದ ವಾರಂಟ್ ಜಾರಿ ಮಾಡಿದೆ. ಶಂಕಿತ ಭಯೋತ್ಪಾದಕಿ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದನ್ನು ಗಮನಿಸಿದ ನ್ಯಾಯಾಲಯವು ಜೂನ್ 4 ರಿಂದ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿದೆ.
ನ್ಯಾಯಾಲಯ ಈ ವಾರಂಟ್ ಅನ್ನು ನವೆಂಬರ್ 13 ರಂದು 10 ಸಾವಿರ ಪಾವತಿಸಿ ಹಿಂತಿರುಗಿಸಬಹುದು ಎಂದು ಹೇಳಿದೆ. ಅಂದರೆ ನವೆಂಬರ್ 13 ರ ಮೊದಲು ಶಂಕಿತ ಭಯೋತ್ಪಾದಕಿ ನ್ಯಾಯಾಲಯಕ್ಕೆ ಹಾಜರಾಗಬೇಕು ಅಥವಾ ವಾರಂಟ್ ರದ್ದುಗೊಳಿಸಲು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಬಿಜೆಪಿಯ ನಾಯಕಿಯಾಗಿರುವ ಅವರು ಮಾಜಿ ಸಂಸದೆ ಕೂಡಾ ಆಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶಂಕಿತ ಭಯೋತ್ಪಾದಕಿಯ ವಕೀಲರು ಕಾಲಕಾಲಕ್ಕೆ ಮತ್ತು ಪ್ರಕರಣದ ದಿನನಿತ್ಯದ ವಿಚಾರಣೆಯ ಸಮಯದಲ್ಲಿ ಅವರ ಉಪಸ್ಥಿತಿಗೆ ವಿನಾಯಿತಿ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಎಕೆ ಲಹೋಟಿ ಹೇಳಿದ್ದಾರೆ. ಅದಾಗ್ಯೂ, ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ವಿರುದ್ಧ ವಾರೆಂಟ್ ಜಾರಿಯಾಗಿರುವುದು ಇದೇ ಮೊದಲೇನಲ್ಲ.
“ಅರ್ಜಿಯೊಂದಿಗೆ ಆರೋಪಿ ನಂಬರ್ 1 ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುವ ವೈದ್ಯಕೀಯ ಪ್ರಮಾಣಪತ್ರದ ಫೋಟೋಕಾಪಿ ಇದೆ. ಮೂಲ ಪ್ರಮಾಣಪತ್ರವನ್ನು ಅರ್ಜಿಗೆ ಲಗತ್ತಿಸಲಾಗಿಲ್ಲ. ಅಂತಿಮ ವಿಚಾರಣೆ ನಡೆಯುತ್ತಿದೆ ಮತ್ತು ಆರೋಪಿಯ ಉಪಸ್ಥಿತಿಯು ಅವಶ್ಯಕವಾಗಿದ್ದು, ಆದ್ದರಿಂದ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿ” ನ್ಯಾಯಾಧೀಶ ಲಾಹೋಟಿ ಹೇಳಿದ್ದಾರೆ.
2008ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಮಾಲೆಗಾಂವ್‌ನ ಮಸೀದಿಯೊಂದರ ಬಳಿ ಬೈಕ್ ಅಲ್ಲಿ ಬಾಂಬ್ ಬಚ್ಚಿಟ್ಟು ಸ್ಪೋಟ ಮಾಡಲಾಗಿತ್ತು. ಈ ಸ್ಪೋಟದಲ್ಲಿ ಆರು ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಪ್ರಮುಖ ಆರೋಪಿಯಾಗಿದ್ದು, ಆಕೆಯ ಬೈಕ್‌ನಲ್ಲೆ ಬಾಂಬ್ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯಕ್ಕೆ ಕಳೆದ ತಿಂಗಳು ಬಾಂಬ್ ಬೆದರಿಕೆ ಬಂದಿತ್ತು. ಆದಾಗ್ಯೂ, ಘಟನೆಯ ನಂತರ ಯಾವುದೇ ಭದ್ರತೆಯನ್ನು ಹೆಚ್ಚಿಸಲಾಗಿಲ್ಲ. ಅಕ್ಟೋಬರ್ 31 ರಂದು ದೀಪಾವಳಿ ಸಂದರ್ಭದಲ್ಲಿ ಸೆಷನ್ಸ್ ಕೋರ್ಟ್ ರಿಜಿಸ್ಟ್ರಾರ್ ಕಚೇರಿಗೆ ಈ ಬೆದರಿಕೆ ಕರೆ ಬಂದಿದ್ದು, ಅಂದಿನಿಂದ ಕೊಲಾಬಾ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಪ್ರಕರಣ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ವಾರೆಂಟ್ ಜಾರಿ
ಮಾಲೆಗಾಂವ್ ಸ್ಫೋಟ ಪ್ರಕರಣ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ವಾರೆಂಟ್ ಜಾರಿ


