ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ‘ಬಟೇಂಗೆ ತೋ ಕಟೇಂಗೆ’ ಘೋಷಣೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ನ ಹಲವಾರು ನಾಯಕರು ದೇಶವನ್ನು ಒಗ್ಗೂಡಿಸಲು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ ಎಂದು ಶನಿವಾರ ಪ್ರತಿಪಾದಿಸಿದ್ದಾರೆ. ದೇಶ ಒಗ್ಗಟ್ಟಾಗಿ ಇರಬೇಕೆಂದು ಬಯಸುವವರು ಎಂದಿಗೂ ಇಂತಹ ವಿಭಜನೆಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ದೇಶದ ಐಕ್ಯತೆಗಾಗಿ
ನವೆಂಬರ್ 20 ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರದ ನಾಗ್ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೋಗಿ ಅವರ ಘೋಷಣೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಹೈ, ತೋ ಸೇಫ್ ಹೈ’ ನಡುವೆ ಯಾವುದು ಬೇಕು ಎಂದು ಬಿಜೆಪಿ ನಿರ್ಧರಿಸುವಂತೆ ಅವರು ಕೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೆಂಪು ಹೊದಿಕೆಯಿರುವ ಸಂವಿಧಾನದ ಪ್ರತಿಯನ್ನು ಹಿಡಿದಿದ್ದಕ್ಕಾಗಿ ಟೀಕಿಸಿದ್ದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಅದೇ ರೀತಿಯ ಪ್ರತಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ಚಿತ್ರವನ್ನು ತೋರಿಸಿದರು. ದೇಶದ ಐಕ್ಯತೆಗಾಗಿ
ಬಿಜೆಪಿ ಮತ್ತು ಆರ್‌ಎಸ್‌ಎಸ್ ಮತ ಗಳಿಸಲು ಜನರನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದ ಅವರು, “ಮೊದಲು ಯಾರ ಘೋಷವಾಕ್ಯವನ್ನು ಅನುಸರಿಸಬೇಕೆಂದು ನೀವೇ ನಿರ್ಧರಿಸಿ. ಯೋಗಿ ಅಥವಾ ಮೋದಿ ಅವರದ್ದೇ?. ಬಿಜೆಪಿ ನಾಯಕರು ಪ್ರಚೋದಿಸುವ ಭಾಷಣಗಳನ್ನು ನೀಡುತ್ತಾರೆ ಮತ್ತು ಸುಳ್ಳುಗಳನ್ನು ಮಾತನಾಡುತ್ತಾರೆ. ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಉತ್ತರ ಮಹಾರಾಷ್ಟ್ರ ಜಿಲ್ಲೆಯ ಧುಲೆಯಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ನಡುವೆ ಏಕತೆ ಇರಬೇಕು ಎಂದು ಹೇಳಿದ್ದರು. “ನೆನಪಿಡಿ, ಏಕ್ ಹೈ, ತೋ ಸೇಫ್ ಹೈ (ನಾವು ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತರು)” ಎಂದು ಹೇಳಿದ್ದರು.
“ದೇಶವನ್ನು ಒಗ್ಗೂಡಿಸಲು ಹಲವಾರು ದೊಡ್ಡ ಕಾಂಗ್ರೆಸ್ ನಾಯಕರು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಆದರೆ ನೀವು ಮಾತ್ರ ವಿಭಜಿಸುತ್ತೀರಿ ಜೊತೆಗೆ ಇತರರನ್ನು ದೂಷಿಸುತ್ತೀರಿ. ನೀವು ‘ಬಾಟಂಗೆ ತೋ ಕಟೆಂಗೆ’ ಎಂಬ ವಿಭಜನೆಯ ಘೋಷಣೆಗಳನ್ನು ಹೇಳುತ್ತೀರಿ. ದೇಶ ಒಗ್ಗಟ್ಟಾಗಿ ಉಳಿಯಬೇಕು ಎಂದು ಬಯಸುವವರು ಅದನ್ನು ಎಂದಿಗೂ ಮೀರುವುದಿಲ್ಲ” ಎಂದು ಖರ್ಗೆ ಹೇಳಿದ್ದಾರೆ.
ವಿದರ್ಭದಲ್ಲಿ ಮಹಾ ವಿಕಾಸ್ ಅಘಾಡಿ ಅಲೆ ಇದೆ, ಇಲ್ಲಿ ರಾಜ್ಯದ 288 ಶಾಸಕರ ಪೈಕಿ 62 ಶಾಸಕರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಎಸ್‌ಪಿ) ಒಳಗೊಂಡ ಮಹಾ ವಿಕಾಸ್ ಅಘಾಡಿ ಮೈತ್ರಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಗರ ನಕ್ಸಲರನ್ನು ಬೆಂಬಲಿಸುತ್ತದೆ ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹಾಕಿದ ಅವರು, “ಸಂವಿಧಾನದ ಪ್ರತಿಯನ್ನು ಕೆಂಪು ಹೊದಿಕೆಯೊಂದಿಗೆ ಪ್ರದರ್ಶಿಸುವುದು ಅಪರಾಧವೇ?” ಎಂದು ಕೇಳಿದ್ದಾರೆ. ಅನೇಕ ಸಾರ್ವಜನಿಕ ಸಭೆಗಳಲ್ಲಿ, ರಾಹುಲ್ ಗಾಂಧಿಯವರು ಕೆಂಪು ಹೊದಿಕೆಯಿರುವ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುತ್ತಾರೆ. ಈ ಬಗ್ಗೆ ಬಿಜೆಪಿ ತಕರಾರು ತೆಗೆದಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ಮೋದಿ ಅದೇ ರೀತಿಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದ ಚಿತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ್ದಾರೆ. ಪ್ರಧಾನಿ ಮೋದಿ “ಸುಳ್ಳುಗಳನ್ನು ಹೇಳುತ್ತಾರೆ ಮತ್ತು ಅವುಗಳನ್ನು ಜೋರಾಗಿ ಹೇಳುತ್ತಾರೆ” ಎಂದು ಅವರು ಆರೋಪಿಸಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಜಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ | ಪ್ರಧಾನಿ ಮೋದಿ ಚಿತ್ರಗಳೆ ಹೈಲೈಟ್; ಆದಿವಾಸಿ ನಾಯಕರ ನಿರ್ಲಕ್ಷ್ಯ!
ಜಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ | ಪ್ರಧಾನಿ ಮೋದಿ ಚಿತ್ರಗಳೆ ಹೈಲೈಟ್; ಆದಿವಾಸಿ ನಾಯಕರ ನಿರ್ಲಕ್ಷ್ಯ!


