ನವೆಂಬರ್ 16ರ ಶನಿವಾರದಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಆಯೋಜಿಸಿದ್ದ ಲಿಂಗ ಸಮಾನತೆ ಪರ ಮೆರವಣಿಗೆಗೆ ಟ್ರಾಫಿಕ್ ಅಡೆತಡೆಗಳನ್ನು ಉಲ್ಲೇಖಿಸಿ ಚೆನ್ನೈ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಲಿಂಗ ತಟಸ್ಥ ಸಮಾಜದ ಮಹತ್ವವನ್ನು ಒತ್ತಿಹೇಳಲು ಸಿಪಿಐ(ಎಂ) ರಾತ್ರಿ 10 ಗಂಟೆಗೆ ಅಣ್ಣಾ ಸಲೈನಲ್ಲಿರುವ ಪೆರಿಯಾರ್ ಪ್ರತಿಮೆಯಿಂದ ಮರೀನಾ ಬೀಚ್‌ನಲ್ಲಿರುವ ಕಾರ್ಮಿಕ ಪ್ರತಿಮೆಯವರೆಗೆ ಮಧ್ಯರಾತ್ರಿ ರ್ಯಾಲಿಯನ್ನು ಆಯೋಜಿಸಿತ್ತು. 2022ರಲ್ಲಿ ಕೂಡಾ ಸಿಪಿಐ(ಎಂ) ‘ರಾತ್ರಿ ನಮ್ಮದು’ ಎಂಬ ವಿಷಯದೊಂದಿಗೆ ಇದೇ ರೀತಿಯ ರ‍್ಯಾಲಿಯನ್ನು ನಡೆಸಿತ್ತು. ಸಿಪಿಐ(ಎಂ)ನ
ನವೆಂಬರ್ 16ರ ಶನಿವಾರ, ತಮಿಳುನಾಡು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಅಧ್ಯಕ್ಷ ಎ ಸೌಂದರಾಜನ್ ಮತ್ತು ನಟಿ ರೋಹಿಣಿ ಮೊಲ್ಲೇಟಿ ಅವರು ಪೆರಿಯಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಸಿಪಿಐ(ಎಂ) ಸೆಂಟ್ರಲ್ ಚೆನ್ನೈ ಕಾರ್ಯದರ್ಶಿ ಜಿ. ಸೆಲ್ವಾ ಅವರು ಲಿಂಗ ಸಮಾನತೆ ನಡಿಗೆಗೆ ಅನುಮತಿ ಕೋರಿದ್ದರು, ಆದರೆ ಚೆನ್ನೈ ಪೊಲೀಸರು ಅದಕ್ಕೆ ನಿರಾಕರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಲಿಂಗ ಸಮಾನತೆ ನಡಿಗೆಗಾಗಿ ಅರ್ಜಿದಾರರು ಅನುಮತಿ ಕೋರಿರುವ ಮಾರ್ಗವು ಅನುಮೋದಿತ ಮಾರ್ಗವಲ್ಲ. ವಾಹನ ದಟ್ಟಣೆ ಹೆಚ್ಚಿರುವ ಪ್ರಮುಖ ರಸ್ತೆಯಾಗಿರುವ ಈ ಮಾರ್ಗದಲ್ಲಿ ಅರ್ಜಿದಾರರು ಕೋರಿರುವ ಲಿಂಗ ಸಮಾನತೆ ನಡಿಗೆಗೆ ಅನುಮತಿ ನೀಡಿದರೆ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ರಾತ್ರಿ ವೇಳೆ ಪಾದಯಾತ್ರೆ ನಡೆಸಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರಿಗೆ ತಿಳಿಸಲಾಗಿದೆ” ಎಂದು ಪೊಲೀಸ್ ಆದೇಶದಲ್ಲಿ ತಿಳಿಸಲಾಗಿದೆ. ಸಿಪಿಐ(ಎಂ)ನ
ಆದಾಗ್ಯೂ, ಸಿಪಿಐಎಂ ರ‍್ಯಾಲಿಯನ್ನು ಕೈಬಿಟ್ಟು ಅಣ್ಣಾ ಸಲೈನಲ್ಲಿ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ನೂರಾರು ಜನರು ಸೇರಿದ್ದರು ಎಂದು ವರದಿಯಾಗಿದೆ. ಸಭೆಯಲ್ಲಿ ಕ್ರಾಂತಿಗೀತೆಗಳನ್ನು ಹಾಡಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ರ‍್ಯಾಲಿಗೆ ಏಕೆ ಅನುಮತಿ ನಿರಾಕರಿಸಲಾಯಿತು ಎಂಬ ಪ್ರಶ್ನೆಗೆ ತಮಿಳುನಾಡು ಸರ್ಕಾರ ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಉತ್ತರಿಸಬೇಕು ಎಂದು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಸೆಂಟ್ರಲ್ ಚೆನ್ನೈ ಸದಸ್ಯ ನಿಖಿಲ್ ದೇವ್ ಹೇಳಿದ್ದಾರೆ.
“ಇದೇ ಚೆನ್ನೈನಲ್ಲಿ, ಹ್ಯಾಪಿ ಸ್ಟ್ರೀಟ್ಸ್ ಕಾರ್ಯಕ್ರಮವನ್ನು ನಡೆಸಲಾಯಿತು, ಆದರೆ ಪೊಲೀಸರು ಅದಕ್ಕೆ ಅನುಮತಿ ನಿರಾಕರಣೆ ಮಾಡಿಲ್ಲ. ರಾತ್ರಿಯಲ್ಲಿ ಸಾಕಷ್ಟು ರೆಸ್ಟೋರೆಂಟ್‌ಗಳು ತೆರೆದಿರುತ್ತವೆ, ಹಾಗಾಗಿ ಮೌಂಟ್ ರೋಡ್‌ನಲ್ಲಿ ಭಾರಿ ದಟ್ಟಣೆಯನ್ನು ಉಂಟಾಗುತ್ತದೆ. ಪೊಲೀಸರು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ಸಿಪಿಐ(ಎಂ) ಕಾರ್ಯಕ್ರಮ ಆಯೋಜಿಸಿದರೆ ಅದನ್ನು ನಿರಾಕರಿಸುತ್ತಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಪೆರಿಯಾರ್ ಸಿದ್ಧಾಂತವನ್ನು ಅನುಸರಿಸುತ್ತಿದೆ, ಆದರೂ ಕೂಡಾ ಅನುಮತಿ ನಿರಾಕರಿಸಲಾಗಿದ್ದು ಏಕೆ ಎಂದು ನಿಖಿಲ್ ಪ್ರಶ್ನಿಸಿದ್ದಾರೆ. “ಈ ಮೆರವಣಿಗೆ ಸಾಮಾನ್ಯ ಕಾರಣಕ್ಕಾಗಿ ನಡೆಯುತ್ತಿದೆ. ಸಮಾಜದಲ್ಲಿ ಲಿಂಗ ರಾಜಕೀಯವು ಬಹಳ ಮುಖ್ಯವಾಗಿದ್ದು, ಅಲ್ಲಿ ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ. ಮಹಿಳೆಯರ ಮೇಲೆ ಅಪರಾಧಗಳು ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ರಾಜಕೀಯ ಪಕ್ಷವಾಗಿ, ನಾವು ರಾತ್ರಿ ಎಲ್ಲರಿಗೂ ಎಂದು ಸಮಾಜಕ್ಕೆ ನೆನಪಿಸಲು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 2019 ರಲ್ಲಿ ಅಪಘಾತ; 5 ವರ್ಷಗಳ ನಂತರ ₹31ಲಕ್ಷ ಪರಿಹಾರ ಘೋಷಿಸಿದ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ
ಇದನ್ನೂ ಓದಿ: 2019 ರಲ್ಲಿ ಅಪಘಾತ; 5 ವರ್ಷಗಳ ನಂತರ ₹31ಲಕ್ಷ ಪರಿಹಾರ ಘೋಷಿಸಿದ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ
2019 ರಲ್ಲಿ ಅಪಘಾತ; 5 ವರ್ಷಗಳ ನಂತರ ₹31ಲಕ್ಷ ಪರಿಹಾರ ಘೋಷಿಸಿದ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ


