ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಅಂಕಿ ಅಂಶ ಮತ್ತು ಅದರ ಕರಡು ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳ ಬಗ್ಗೆ ವಿಪಕ್ಷ ಕಾಂಗ್ರೆಸ್ ಎತ್ತಿದ್ದ ಆರೋಪಗಳನ್ನು ಚುನಾವಣಾ ಆಯೋಗ ಶನಿವಾರ ತಳ್ಳಿಹಾಕಿದೆ. ಚುನಾವಣೆಯ ಪ್ರತಿ ಹಂತದಲ್ಲೂ ಸ್ಪರ್ಧಿಸುತ್ತಿರುವ ಎಲ್ಲಾ ಪಕ್ಷಗಳು, ಅವರ ಅಭ್ಯರ್ಥಿಗಳು ಮತ್ತು ಏಜೆಂಟರ ಪಾಲ್ಗೊಳ್ಳುವಿಕೆಯೊಂದಿಗೆ ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ ಎಂದು ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ಬರೆದ ಪತ್ರದಲ್ಲಿ ತಿಳಿಸಿದೆ. ಮಹಾರಾಷ್ಟ್ರ ಮತದಾನದ
ಈ ಬಗ್ಗೆ ಮತ್ತಷ್ಟು ಚರ್ಚಿಸಲು ಪಕ್ಷದ ನಿಯೋಗವನ್ನು ಚುನಾವಣಾ ಆಯೋಗವು ಡಿಸೆಂಬರ್ 3 ರಂದು ಆಹ್ವಾನಿಸಿದೆ. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಮತದಾನ ಮತ್ತು ಎಣಿಕೆ ಪ್ರಕ್ರಿಯೆಗಳಿಗೆ ಸಂಬಂಧಿಸಿದ ದತ್ತಾಂಶಗಳಲ್ಲಿ “ಗಂಭೀರ ಅಸಂಗತತೆಗಳು” ಇವೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಂತಿಮ ಮತದಾರರ ಪಟ್ಟಿಯಿಂದ ಪ್ರತಿ ಕ್ಷೇತ್ರದಲ್ಲಿ 10,000 ಕ್ಕೂ ಹೆಚ್ಚು ಮತದಾರರ ಹೆಸರವನ್ನು ಅನಿಯಂತ್ರಿತವಾಗಿ ಅಳಿಸಲಾಗಿದ್ದು, ನಂತರ ಸೇರ್ಪಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿತ್ತು. “ಮಹಾರಾಷ್ಟ್ರದಲ್ಲಿ ಜುಲೈ 2024 ರಿಂದ ನವೆಂಬರ್ 2024 ರ ನಡುವೆ ಮತದಾರರ ಪಟ್ಟಿಗೆ ಅಂದಾಜು 47 ಲಕ್ಷ ಮತದಾರರನ್ನು ಸೇರಿಸಲಾಗಿದೆ” ಎಂದು ಪಕ್ಷವು ತನ್ನ ಜ್ಞಾಪಕ ಪತ್ರದಲ್ಲಿ ಹೇಳಿಕೊಂಡಿದೆ.
ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಗುಂಪು ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಣವನ್ನು ಒಳಗೊಂಡಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು 50 ಅಸೆಂಬ್ಲಿ ಸ್ಥಾನಗಳಲ್ಲಿ 47 ಅನ್ನು ಗೆದ್ದಿದ್ದು, ಅಲ್ಲಿ ಸರಾಸರಿ 50,000 ಮತದಾರರು ಹೆಚ್ಚಾಗಿದ್ದಾರೆ ಎಂದು ಪತ್ರವೂ ಹೇಳಿತ್ತು. ಮಹಾರಾಷ್ಟ್ರ ಮತದಾನದ
ಮಹಾರಾಷ್ಟ್ರದ 288 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಮಹಾಯುತಿ 230 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 132 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಶಿಂಧೆ ನೇತೃತ್ವದ ಶಿವಸೇನೆ 57 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು 41 ಕ್ಷೇತ್ರಗಳಲ್ಲಿ ಗೆದ್ದಿದೆ. ವಿಪಕ್ಷಗಳ ಮಹಾ ವಿಕಾಸ್ ಅಘಾಡಿಯ ಪಕ್ಷಗಳಾದ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಒಟ್ಟು 46 ಸ್ಥಾನಗಳನ್ನು ಅಷ್ಟೆ ಗೆದ್ದಿದೆ.
ಶುಕ್ರವಾರ ಸಲ್ಲಿಸಿದ ತನ್ನ ಜ್ಞಾಪಕ ಪತ್ರದಲ್ಲಿ, ಮತದಾನದ ದಿನದಂದು ರಾತ್ರಿ 11.30 ಕ್ಕೆ ಚುನಾವಣಾ ಆಯೋಗವು ಘೋಷಿಸಿದ ಮತದಾನದ ಶೇಕಡಾವಾರು ಪ್ರಮಾಣವು ಸಂಜೆ 5 ಕ್ಕೆ ಘೋಷಿಸಿದ ಅಂತಿಮ ಮತದಾರರ ಶೇಕಡಾವಾರುವರೆಗೆ ವಿವರಿಸಲಾಗದ ಹೆಚ್ಚಳವಾಗಿದ್ದು, ಇದಕ್ಕಾಗಿ ಕಾಂಗ್ರೆಸ್ ಚುನಾವಣಾ ಆಯೋಗದಿಂದ ವಿವರಣೆಯನ್ನು ಕೇಳಿದೆ.
ನವೆಂಬರ್ 20 ರಂದು, ಮಹಾರಾಷ್ಟ್ರದಲ್ಲಿ ಮತದಾನದ ದಿನ, ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಸಂಜೆ 5 ಗಂಟೆಗೆ 58.22% ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಅದೇ ದಿನ ರಾತ್ರಿ 11.30 ರ ಹೊತ್ತಿಗೆ ಮತದಾನದ ಪ್ರಮಾಣವು 65.02% ಕ್ಕೆ ಏರಿತು ಮತ್ತು ನವೆಂಬರ್ 21 ರ ವೇಳೆಗೆ 66.05% ತಲುಪಿತ್ತು.
“ಈ ವ್ಯತ್ಯಾಸವು ಮಹಾರಾಷ್ಟ್ರದಾದ್ಯಂತ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದ ವಿಧಾನದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸಾಮಾನ್ಯ ಜ್ಞಾನದ ದೃಷ್ಟಿಕೋನದಿಂದ, ಮತದಾನದ ಮುಕ್ತಾಯದ ಗಂಟೆಯಲ್ಲಿ 70 ಲಕ್ಷಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿರುವುದು ಚುನಾವಣಾ ಇತಿಹಾಸದಲ್ಲಿ ಕೇಳರಿಯದ ಸಂಗತಿಯಾಗಿದೆ.” ಎಂದು ಕಾಂಗ್ರೆಸ್ ಹೇಳಿತ್ತು.
ಇದನ್ನೂ ಓದಿ: ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ
ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ


