ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟು ಹಿಂದೂ-ಮುಸ್ಲಿಮರೆಂದು ವಿಭಜಿಸುವ ಮೂಲಕ ದೆಹಲಿಯ ಬಿಜೆಪಿ ಕೌನ್ಸಿಲರ್ ರವಿಂದರ್ ಸಿಂಗ್ ನೇಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ದೆಹಲಿಯ ಪತ್ಪರ್ಗಂಜ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಶ್ಚಿಮ ವಿಂದೋರ್ ನಗರ ವಾರ್ಡ್ ಕೌನ್ಸಿಲರ್ ಆಗಿರುವ ನೇಗಿ, ಬೀದಿ ಬದಿ ವ್ಯಾಪಾರಿಗಳ ತಳ್ಳುಗಾಡಿಗಳ ಬಳಿ ತೆರಳಿ ಹೆಸರು ಕೇಳಿ, ಹಿಂದೂ ವ್ಯಾಪಾರಿಗಳ ಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟಿದ್ದಾರೆ. ಅಲ್ಲದೆ, ‘ಮತ್ತೊಂದು ಧರ್ಮೀಯರು’ ಎಂದು ಉಲ್ಲೇಖಿಸಿ ಮುಸ್ಲಿಂ ವ್ಯಾಪಾರಿಗಳ ಕುರಿತು ಕೆಟ್ಟ ಭಾವನೆ ಮೂಡಿಸುವ ಮಾತುಗಳನ್ನಾಡಿದ್ದಾರೆ. ಈ ಕುರಿತು ವಿಡಿಯೋಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಕೋಮುವಾದಿ ಕೃತ್ಯವನ್ನು ಸಮರ್ಥಿಸಿಕೊಂಡಿರುವ ನೇಗಿ, “ಕೇಸರಿ ಧ್ವಜ ನೆಟ್ಟಿರುವುದು ಹಿಂದೂಗಳಿಗೆ ಹಿಂದೂ ವ್ಯಾಪಾರಿಗಳನ್ನು ಗುರುತಿಸಲು ಸಹಾಯವಾಗಲಿದೆ” ಎಂದಿದ್ದಾರೆ. “ಮುಸ್ಲಿಮರು ಆಹಾರಕ್ಕೆ ಉಗುಳುತ್ತಾರೆ” ಎಂಬ ಸುಳ್ಳನ್ನು ಉಲ್ಲೇಖಿಸಿದ್ದಾರೆ.
ವೈರಲ್ ವಿಡಿಯೋಗಳಲ್ಲಿ ರವಿಂದರ್ ಸಿಂಗ್ ನೇಗಿ ಮುಸ್ಲಿಂ ವ್ಯಾಪಾರಿಗಳಿಗೆ ತಮ್ಮ ಗಾಡಿಗಳಲ್ಲಿ ದೊಡ್ಡದಾಗಿ ಮುಸ್ಲಿಂ ಹೆಸರು ಹಾಕುವಂತೆ ಸೂಚಿಸಿ ಮತ್ತು ಇತರ ವಿಷಯಗಳನ್ನು ಮುಂದಿಟ್ಟುಕೊಂಡು ಬೆದರಿಸುವುದನ್ನು ನೋಡಬಹುದು.
He threatens a Muslim street vendor on the pavement, demanding that he either reduce the size of his cart or shift it to the road.
Date : November 2024. pic.twitter.com/JfJ1R6BZVH— Mohammed Zubair (@zoo_bear) December 8, 2024
ರವಿಂದರ್ ನೇಗಿ ಧರ್ಮದ ಹೆಸರಲ್ಲಿ ಬಡ ವ್ಯಾಪಾರಿಗಳನ್ನು ವಿಭಜಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ರೀತಿಯ ದುಷ್ಕೃತ್ಯಗಳನ್ನು ಬಹಿರಂಗವಾಗಿ ಮಾಡಿದ್ದಾರೆ. ಆದರೆ, ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
Chicken shops were asked to shut down on Navratri in the Muslim locality.
Date : March 2023. pic.twitter.com/W1AIkZWDt3— Mohammed Zubair (@zoo_bear) December 8, 2024
ಇದನ್ನೂ ಓದಿ | ಪಶ್ಚಿಮ ಬಂಗಾಳ: ಬಾಂಬ್ ತಯಾರಿಸುವಾಗ ಸಂಭವಿಸಿದ ಸ್ಫೋಟದಿಂದ ಮೂವರು ಸಾವು


